ಇತ್ತೀಚಿನ ಸುದ್ದಿರಾಜ್ಯ

ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆ-ತೆರವು ಖಂಡಿಸಿ ಪ್ರತಿಭಟನೆ

ಕೊರಟಗೆರೆ :- ಆದಿ ಕವಿ ಮಹರ್ಷಿ ವಾಲ್ಮೀಕಿ ಅವರ ಪುತ್ತಳಿ ಅನಾವರಣ ವಿಚಾರದಲ್ಲಿ ಕೊರಟಗೆರೆ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ವಾಲ್ಮೀಕಿ ಜಯಂತಿಯ ಹಿಂದಿನ ರಾತ್ರಿ ಪುತ್ತಳಿ ಪ್ರತಿಷ್ಠಾಪನೆಗೊಂಡು ನಂತರ ತೆರವುಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಮಧ್ಯರಾತ್ರಿಯಿಂದಲೂ ನೂರಾರು ಜನ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಪ್ರತಿಭಟನೆ ನಡೆಯುತ್ತಿರುವ ಘಟನೆ ಜರುಗಿದೆ.

ವಾಲ್ಮೀಕಿ ಜಯಂತಿ ಪ್ರತಿವರ್ಷ ಅಶ್ವಿನಿ ಮಾಸದ ಹುಣ್ಣಿಮೆಯಂದು ಆಚರಿಸುವುದು ಸಾಮಾನ್ಯವಾಗಿದ್ದು, ಅದೇ ಮಾದರಿಯಲ್ಲಿ ಕೊರಟಗೆರೆ ಪಟ್ಟಣದ ಎಸ್ಎಸ್ಆರ್ ವೃತ್ತದಲ್ಲಿ ವಾಲ್ಮೀಕಿ ಜಯಂತಿಯ ಹಿಂದಿನ ದಿನ ಮಧ್ಯರಾತ್ರಿ ವಾಲ್ಮೀಕಿ ಪ್ರತಿಮೆ ಇದ್ದಕ್ಕಿದ್ದಂತೆ ಪ್ರತಿಷ್ಠಾಪನೆ ಗೊಳಿಸಿದ ಸಂಬಂಧ ಸರ್ಕಾರದಿಂದ ಯಾವುದೇ ಅಧಿಕೃತವಾಗಿ ಅನುಮೋದನೆ ಪಡೆಯದ ಕಾರಣ ಪಟ್ಟಣ ಪಂಚಾಯಿತಿ ಮುಂದೆ ನಿಂತು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಹಯೋಗದಲ್ಲಿ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾಂಗದ ನೂರಾರು ಜನ ಸ್ಥಳದಲ್ಲಿ ಮಧ್ಯರಾತ್ರಿಯಿಂದಲೂ ಪ್ರತಿಭಟನೆ ನಡೆಸಿದ್ದು, ಕೊರಟಗೆರೆ ಪಟ್ಟಣ ಒಂದು ರೀತಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುವ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ವಿಚಾರದಲ್ಲಿ ಸಮಸ್ಯೆ ಉಲ್ಬಣಗೊಂಡು ವಾಲ್ಮೀಕಿ ಮಹೋತ್ಸವದ ಹಿಂದಿನ ದಿನ ಮಧ್ಯರಾತ್ರಿ ಕೊರಟಗೆರೆ ಪಟ್ಟಣದ ಪ್ರಮುಖ ವೃತ್ತ ಎಸ್ ಎಸ್ ಆರ್ ವೃತ್ತದಲ್ಲಿ ವಾಲ್ಮೀಕಿ ಪುತ್ತಳ್ಳಿ ಪ್ರತಿಷ್ಠಾಪನೆಗೊಂಡು ಇದ್ದಕ್ಕಿದ್ದಂತೆ ಕಾನೂನು ತೊಡಕಿನಿಂದ ತೆರುವುಗೊಳಿಸಿದ ಹಿನ್ನೆಲೆಯಲ್ಲಿ ಜನಾಂಗದ ನೂರಾರು ಜನ ಮಹಿಳೆಯರು ಸಹಿತ ಪ್ರತಿಭಟನೆ ನಡೆಸಿ ಇದೇ ಸ್ಥಳದಲ್ಲಿ ವಾಲ್ಮೀಕಿ ಮಹರ್ಷಿಯವರ ಪುತ್ತಳಿಯನ್ನ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಿ ವಾಲ್ಮೀಕಿ ಜಯಂತಿಯ ದಿನ ಬೆಳಿಗ್ಗೆ 11 ಗಂಟೆವರೆಗೂ ಪ್ರತಿಭಟನೆ ನಡೆಸಿ ರಸ್ತೆ ಮಧ್ಯೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು.

ಅಧಿಕಾರಿಗಳ ಮಧ್ಯ ಪ್ರವೇಶ

ತಾಸಿಲ್ದಾರ್ ಮಂಜುನಾಥ್ ಕೆ ಪೊಲೀಸ್ ಅಡಿಷನಲ್ ಎಸ್ ಪಿ ಮರಿಯಪ್ಪ ಡಿ ವೈ ಎಸ್ ಪಿ ಚಂದ್ರಶೇಖರ್, ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಸೇರಿದಂತೆ ಪ್ರಮುಖ ಇಲಾಖೆ ಅಧಿಕಾರಿಗಳು ವಾಲ್ಮೀಕಿ ಜನಾಂಗದ ಮುಖಂಡರೊಂದಿಗೆ ಸಂಧಾನ ನಡೆಸಿ ಅದೇ ಸ್ಥಳದಲ್ಲಿ ಪಟ್ಟಣ ಪಂಚಾಯಿತಿ ಅನುಮೋದನೆಯೊಂದಿಗೆ ಪ್ರತಿಷ್ಠಾಪಿಸಲು ಅವಕಾಶ ಕಲ್ಪಿಸುವ ಭರವಸೆಯೊಂದಿಗೆ ಪ್ರಕರಣವನ್ನ ಸುಖಾಂತ್ಯ ಮೂಡಿಸಿದರು.

ಎಸ್ಎಸ್ಆರ್ ವೃತ್ತಕ್ಕೆ ವಾಲ್ಮೀಕಿ ಹೆಸರಿಡಲು ಒತ್ತಾಯ

ವಾಲ್ಮೀಕಿ ಪುತ್ತಳಿ ಅನಾವರಣಗೊಳಿಸಲು ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ವಾಲ್ಮೀಕಿ ಜನಾಂಗದ ಮುಖಂಡರು ಪುತ್ತಳಿ ಅನಾವರಣಕ್ಕೆ ಇದೇ ಸ್ಥಳವನ್ನು ಗುರುತಿಸಬೇಕು ಜೊತೆಗೆ ಈ ವೃತ್ತವನ್ನ ವಾಲ್ಮೀಕಿ ವೃತ್ತವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು, ನಂತರ ತಾಸಿಲ್ದಾರ್ ಮಂಜುನಾಥ್ ಪ್ರತಿಭಟನಾ ನಿರತರಿಗೆ ಕಾನೂನು ವ್ಯಾಪ್ತಿಯಲ್ಲಿ ಪುತ್ತಳಿ ಅನಾವರಣಕ್ಕೆ ಹಾಗೂ ವಾಲ್ಮೀಕಿ ವೃತ್ತ ಎಂದು ಹೆಸರಿಡಲು ಕಾನೂನಾತ್ಮಕವಾಗಿ ಅನುಮೋದನೆಗೆ ಸಂಬಂಧಪಟ್ಟಂತ ಇಲಾಖೆಗಳಿಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಸುಖಾಂತ್ಯ ಕಂಡಿದೆ.

ಪ್ರತಿಭಟನೆ ಸಂದರ್ಭದಲ್ಲಿ ವಾಲ್ಮೀಕಿ ಜನಾಂಗದ ಮುಖಂಡರಾದ ಕೆ ಆರ್ ಓಬಳರಾಜ್, ಲಕ್ಷ್ಮೀನಾರಾಯಣ್, ಪುಟ್ಟನರಸಪ್ಪ, ರಮೇಶ್, ಕುದುರೆ ಸತ್ಯಣ್ಣ, ಮಹೇಶ್, ರಂಗರಾಜು, ಕವಿತಾ, ವಿನಯ್ ಕುಮಾರ್, ಗಂಗಾಧರಪ್ಪ, ಜ್ಯೋತಿ, ಉಷಾ , ಲಕ್ಷ್ಮೇಶ್, ರಂಗನಾಥ್ , ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಂಜುನಾಥ್ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ವಾಲ್ಮೀಕಿ ಜನಾಂಗದ ಮುಖಂಡರು ಮಾತನಾಡಿ ನೆನ್ನೆ ಇಲ್ಲಿ ನಡೆದಿರುವ ಘಟನೆ ಏನು ಅಂದ್ರೆ ಪ್ರತಿಷ್ಠಾಪನೆಗೊಂಡಿದ್ದ ವಾಲ್ಮೀಕಿ ವಿಗ್ರಹವನ್ನ ವಾಲ್ಮೀಕಿ ಜಯಂತಿ ಇದ್ದರೂ ಸಹ ಪಟ್ಟಣ ಪಂಚಾಯಿತಿಯವರು ಕಿತ್ತುಕಿದ್ದಾರೆ, ನೀವು ಪರ್ಮಿಷನ್ ತೆಗೆದುಕೊಳ್ಳದೆ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೀರಾ ಎಂದು ಕಿತ್ತಾಕಿದ್ದೇವೆ ಎಂದು ಉದಾಸೀನವಾಗಿ ಮಾತನಾಡುತ್ತಾರೆ. ಇವರು ವಿಗ್ರಹವನ್ನ ಕಿತ್ತಾಕಿರುವುದರ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಬಾಕ್ಸ್ ಬಳಸಿ….

ವಾಲ್ಮೀಕಿ ಜಯಂತಿಯ ಇಂದಿನ ದಿನ ಯಾರೋ ಹುಡುಗರು ವಾಲ್ಮೀಕಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ, ಅದು ಯಾರೋ ಎಂದು ನಾವು ಅದರ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಆದರೆ ನೆನ್ನೆ ರಾತ್ರಿ ವಿಗ್ರಹವನ್ನು ಕಿತ್ತಾಕಲಾಗಿದೆ, ವಿಗ್ರಹಕ್ಕೆ ಹಾಕಲಾದ ಬೇಸ್ ಮೆಂಟನ್ನು ಕಿತ್ತು ವಿಗ್ರಹವನ್ನು ಒದ್ದು ಉರುಳಿಸಲಾಗಿದೆ ಇದನ್ನು ನಾವು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಮಹೇಶ್.. ವಾಲ್ಮೀಕಿ ಜನಾಂಗದ ಮುಖಂಡ

ಬಾಕ್ಸ್ ಬಳಸಿ…..

ವಾಲ್ಮೀಕಿ ಸಂಘದವರು ವಾಲ್ಮೀಕಿ ಪ್ರತಿಮೆಯನ್ನ ನಾವು ಕೋಟೆ ಬಳಿ ನಿರ್ಮಾಣ ಮಾಡಿದ್ದೇವೆ ಅದೇ ಮಾದರಿಯಲ್ಲಿ ಯಾರೋ ನಮ್ಮ ಹುಡುಗರು ಯಾರೋ ಹುಡುಗುರು ಬಂದು ಬಸ್ಟಾಂಡ್ನ ಸರ್ಕಲ್ ಅಲ್ಲಿ ವಾಲ್ಮೀಕಿ ಮಹರ್ಷಿಯ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದಾರೆ, ಆದರೆ ಅದನ್ನ ತೆರುವು ಗೊಳಿಸಲಾಗಿದೆ , ವಾಲ್ಮೀಕಿ ಮಹರ್ಷಿಯವರ ಜನ್ಮ ದಿನೋತ್ಸವವನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಬೇಕು, ಆ ವಿಗ್ರಹ ಮತ್ತೆ ಪ್ರತಿಷ್ಠಾಪನೆ ಮಾಡುವ ವರೆಗೂ ನಾವು ಪ್ರತಿಭಟನೆ ಬಿಟ್ಟು ತೆರಳೋದಿಲ್ಲ.

ಉಷಾ ವಾಲ್ಮೀಕಿ ಜನಾಂಗದ ಮಹಿಳೆ

ವಿಶೇಷ ಬಾಕ್ಸ್ ಬಳಸಿ…

ವಾಲ್ಮೀಕಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಇದು ಅನಧಿಕೃತವಾಗಿ ಯಾವುದೇ ಪರ್ಮಿಷನ್ ಇಲ್ಲದೆ ಪ್ರತಿಷ್ಠಾಪನೆ ಮಾಡಿರೋದ್ರಿಂದ ಈ ಸಮಸ್ಯೆ ತಲೆದೂರಿದೆ , ಅದಕ್ಕೆ ನಾವೆಲ್ಲರೂ ಒಟ್ಟಿಗೆ ಸೇರಿ ಒಂದು ಈ ಗೊಂದಲವನ್ನ ತೆರೆ ಎಳೆಯುವಂತಹ ಕೆಲಸವನ್ನು ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಅನುಮೋದನೆ ಯೊಂದಿಗೆ ಪ್ರತಿಷ್ಠಾಪಿಸಲು ಆಲೋಚಿಸಲಾಗಿದ್ದು ಅದಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸಲಾಗುವುದು.

Related Articles

Leave a Reply

Your email address will not be published. Required fields are marked *

Back to top button