ಇತ್ತೀಚಿನ ಸುದ್ದಿಕ್ರೀಡೆ

ಮಲೇಷ್ಯಾ ಮಾಸ್ಟರ್ಸ್‌: ಪುರುಷರ ಸಿಂಗಲ್ಸ್​ನಲ್ಲಿ ಫೈನಲ್​ ಪ್ರವೇಶಿಸಿದ ಪ್ರಣಯ್

ಕೌಲಾಲಂಪುರ (ಮಲೇಷ್ಯಾ): ಭಾರತದ ಸ್ಟಾರ್ ಷಟ್ಲರ್ ಹೆಚ್‌ಎಸ್ ಪ್ರಣಯ್ ಮಲೇಷ್ಯಾ ಮಾಸ್ಟರ್ಸ್‌ನ ಪುರುಷರ ಸಿಂಗಲ್ಸ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಸೆಮೀಸ್​ನಲ್ಲಿ ಇಂಡೋನೇಷ್ಯಾದ ಕ್ರಿಶ್ಚಿಯನ್ ಆದಿನಾಟಾ ಅವರು ಪಂದ್ಯದ ನಡುವೆ ಗಾಯಕ್ಕೆ ತುತ್ತಾದರು ಇದರಿಂದ ಲೀಡ್​ನಲ್ಲಿದ್ದ ಎಚ್‌ಎಸ್ ಪ್ರಣಯ್ ಫೈನಲ್​ ಪ್ರವೇಶಿಸಿದ್ದಾರೆ.

ಸೆಮಿಫೈನಲ್​ನಲ್ಲಿ ವಿಶ್ವದ 9ನೇ ಶ್ರೇಯಾಂಕದ ಪ್ರಣಯ್ ಅವರು 19-17ರಲ್ಲಿ ಮುನ್ನಡೆಯಲ್ಲಿದ್ದರು, ಆಗ ಆದಿನಾಟಾ ಅವರು ಜಂಪ್ ರಿಟರ್ನ್ ನಂತರ ಲ್ಯಾಂಡಿಂಗ್ ಮಾಡುವಾಗ ಬ್ಯಾಲೆಂನ್ಸ್​ ಕಳೆದುಕೊಂಡರು. ಇದರಿಂದ ಅವರ ಪಾದದ ಮೇಲೆ ಒತ್ತಡ ಹೆಚ್ಚಾಯಿತು ಮತ್ತು ಅವರ ಎಡ ಮೊಣಕಾಲು ಗಂಭೀರ ಗಾಯಕ್ಕೆ ಒಳಗಾಯಿತು. ನೋವು ತೀವ್ರವಾಗಿ ಇದ್ದ ಕಾರಣ ಅವರು ಗೇಮ್​ ಕ್ವಿಟ್​ ಮಾಡಿದರು, ಇದರಿಂದ ಮುನ್ನಡೆಯಲ್ಲಿದ್ದ ಪ್ರಣಯ್ ಅಂತಿಮ ಹಂತ ತಲುಪಿದರು.

ಪ್ರಣಯ್ ಅವರು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ ಮತ್ತು ಚೈನೀಸ್ ತೈಪೆಯ ಲಿನ್ ಚುನ್-ಯಿ ನಡುವಿನ ಮತ್ತೊಂದು ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ಇದು ಪ್ರಣಯ್ ಅವರ ಈ ಋತುವಿನಲ್ಲಿ ಮೊದಲ ಫೈನಲ್ ಆಗಿದ್ದು, ಕಳೆದ ವರ್ಷ ಸ್ವಿಸ್ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದ ನಂತರ ಇದು ಎರಡನೇ ಪಂದ್ಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button