ಮತದಾನ ಮಾಡುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಿ : ಪುರಸಭೆ ಮುಖ್ಯಾಧಿಕಾರಿ ಬಿ.ಕೆ. ವಸಂತ ಕುಮಾರಿ ಮನವಿ
ತಿ.ನರಸೀಪುರ:-ಮತದಾನ ಎಂಬುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಹಾಗೂ ಮೂಲ ಹಕ್ಕಾಗಿದ್ದು, ಯಾವುದೇ ಆಸೆ ಆಮೀಶಗಳಿಗೆ ಒಳಗಾಗದೇ ಪ್ರತಿಯೊಬ್ಬರು ಶಾಂತಿಯುತವಾಗಿ ಮುಂಜಾನೆಯಿಂದಲೇ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಿ ಪುರಸಭೆ ಮುಖ್ಯಾಧಿಕಾರಿ ಬಿ.ಕೆ. ವಸಂತ ಕುಮಾರಿ ಮನವಿ ಮಾಡಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ವಸಂತಕುಮಾರಿ ಮತದಾರರು ಮತ ಚಲಾವಣೆಗಾಗಿ ಯಾವುದೇ ದಾಕ್ಷಣ್ಯಕ್ಕೆ, ಆಸೆ, ಆಮಿಷಕ್ಕೆ ಒಳಗಾಗಿ ಅತ್ಮವಂಚನೆ ಮಾಡಿಕೊಳ್ಳಬಾರದು ತಾವು ಮಾಡುವ ಮತದಾನದಿಂದ ದೇಶದ ಭವಿಷ್ಯ ಅಡಗಿದೆ,ಮತದಾರರು ಯಾವುದೇ ಭಾವನೆಗಳಿಗೆ ಒಳಗಾಗದೆ ನೀರ್ಭಯವಾಗಿ ಮತದಾನ ಮಾಡಿ,
ಜವಾಬ್ದಾರಿಯುತ ನಾಗರಿಕರಾಗಬೇಕು ಎಂದರು.
ಏಪ್ರಿಲ್ 26 ಶುಕ್ರವಾರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ವರಗೆ ಮತದಾನ ನೆಡಯಲಿದೆ ಮತದಾರರು ನಿಗದಿತ ಸಮಕ್ಕೆ ಮತಗಟ್ಟೆಗೆ ತಲುಪಿ ಮತಹಾಕ ಬೇಕು ಹಾಗೂ ತಮ್ಮ ಸುತ್ತ ಮುತ್ತಲಿನವರಿಗೆ ಮತದಾನ ಮಾಡುವಂತ್ತೆ ತಿಳಿಸಬೇಕು ಎಂದು ಮನವಿ ಮಾಡಿದರು.
ಮತದಾನ ಮಾಡುವುದು ಎಲ್ಲಾ ನಾಗರಿಕ ಜವಾಬ್ದಾರಿ ಆಗಿದೆ ಚುನಾವಣೆಯಲ್ಲಿ ಮತ ಹಾಕುವ ಸ್ವಾತಂತ್ರ್ಯ ನಿಮಗಿದೆ. ಮತ ಹಾಕಲು ಯಾರೂ ಸಹ ಆಮಿಷಕ್ಕೆ ಒಳಗಾಗ ಬೇಡಿ. ಉತ್ತಮ ನಾಳೆಗಳು ಬೇಕಾದರೆ, ಎಲ್ಲಾ ಅರ್ಹ ನಾಗರಿಕರು ಮತದಾನದ ಹಕ್ಕು ಚಲಾಯಿಸಬೇಕು ಎಂದರು.