ಮಗನ ಜೊತೆ ಮನೆ ಬಿಟ್ಟು ಹೋಗಲು ನಿರ್ಧರಿಸಿದ ಮೇಘನಾ ರಾಜ್!
ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ಇನ್ನಿತರ ಕೆಲಸಗಳ ಮೂಲಕ ಸಾಕಷ್ಟು ಗುರುತುಸಿಕೊಂಡಿರುವ ನಟಿ ಮೇಘನಾ ರಾಜ್. ಇಷ್ಟು ದಿನ ಪತಿ ಚಿರುವಿನ ನಿಧನದಿಂದ ಕೊಂಚ ಸಿನಿಮಾಗಳಿಂದ ದೂರ ಇದ್ದ ನಟಿ ಮೇಘನಾ ರಾಜ್, ಇದೀಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇನ್ನು ಇತ್ತೀಚೆಗೆ ಸಿನಿಮಾಗಳ ಜೊತೆಗೆ ಬೇರೆ ಬೇರೆ ಕೆಲಸಗಳಲ್ಲಿ ಸಹ ಮೇಘನಾ ರಾಜ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಇದೀಗ ಮೇಘನಾ ಅವರಿಗೆ ಒಂದು ಸಮಸ್ಯೆ ಬಂದಿದೆ.
ಕನ್ನಡದ ಪ್ರತಿಭಾವಂತ ನಟಿ ಮೇಘನಾ ರಾಜ್ ಈಗ ಮಗ ರಾಯನ ಜೊತೆ ತುಂಬಾನೇ ಖುಷಿಯಾಗಿದ್ದಾರೆ. ಚಿರು ನಿಧನದ ಬಳಿಕ ಸಾರ್ಜ ಕುಟುಂಬಕ್ಕೆ ಹೋಗಲಾರದೆ ತಮ್ಮ ತಾಯಿ ಮನೆಯಲ್ಲಿ ಇದ್ದ ಅವರು ಇದೀಗ ತಂದೆ ತಾಯಿಯನ್ನು ಬಿಟ್ಟು ಹೋಗಲು ನಿರ್ಧರಿಸಿದ್ದಾರಂತೆ.
ಹೌದು ಮಗನ ಜೊತೆ ಖುಷಿಯಾಗಿರುವ ವೇಳೆ ಯಲ್ಲಿ ಮೇಘನಾ ಅವರಿಗೆ ಒಂದು ದೊಡ್ಡ ತಲೆನೋವು ಎದುರಾಗಿದೆಯಂತೆ ಹೌದು ಇದೀಗ ಮೇಘನಾ ಅವರ ಕೈಯಲ್ಲಿ ಹಲವಾರು ಸಿನಿಮಾಗಳ ಆಫರ್ ಸಿಕ್ಕಿದೆ ಸಿನಿಮಾ ಶೂಟಿಂಗ್ ಅಂತ ಮೇಘನಾ ಬೇರೆ ದೇಶಗಳಿಗೆ ಹೋಗಬೇಕಾಗುತ್ತದೆ.
ಇದೀಗ ಮೇಘನಾ ಅವರು ಶೂಟಿಂಗಾಗಿ ವಿದೇಶಕ್ಕೆ ಹೋಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೋಗುವಾಗ ಮಗ ರಾಯನನ್ನು ತಾಯಿ ಪ್ರಮೀಳಾ ಜೋಷೈ ಅವರನ್ನು ಕರೆದುಕೊಂಡು ಹೋಗುತ್ತಾರೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ, ತಾಯಂದ್ರೆ ಹಾಗೆ ಅಲ್ವಾ, ತನ್ನ ಮಗನಿಗೋಸ್ಕರ ಎಲ್ಲವನ್ನು ತ್ಯಾಗ ಮಾಡಲು ಸಿದ್ದರಾಗಿರುತ್ತಾರೆ ಮೇಘನಾ ಅವರಿಗೆ ಒಳ್ಳೇದಾಗಲೆಂದು ಹಾರೈಸೋಣ.