ಮಕ್ಕಳ ವಿಜ್ಞಾನದ ಅರಿವು ಮೂಡಿಸಲು ವಿಜ್ಞಾನ ಪ್ರಯೋಗ ಶಾಲೆ ಪ್ರಾರಂಭ
ಮಕ್ಕಳಿಗೆ ಜ್ಞಾನದ ಜೊತೆಯಲ್ಲಿ ವಿಜ್ಞಾನವು ಮುಖ್ಯ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ: ಹೊಂಬೇಗೌಡನಗರ ವಾರ್ಡ್: ಹೊಂಬೇಗೌಡ ಬಾಲಕ ಫ್ರೌಡಶಾಲೆ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಸಿ.ಎಸ್.ಆರ್.ಅನುದಾನದ ಅಡಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನೂತನವಾಗಿ ನಿರ್ಮಿಸಿರುವ ವಿಜ್ಞಾನ ಪ್ರಯೋಗ ಶಾಲೆ ಉದ್ಘಾಟನೆಯನ್ನು
ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆ ಶ್ರೀಮತಿ ತಾರ ಆನೂರಾಧರವರು ಮತ್ತು ನಿರ್ದಶಕಿ ಶ್ರೀಮತಿ ಭಾಗ್ಯವತಿ ಅಮರೇಶ್ ರವರು, ವ್ಯವಸ್ಥಾಪಕ ನಿರ್ದೇಶಕಿ ರಾಧದೇವಿರವರು ಲೋಕರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಶ್ರೀಮತಿ ತಾರ ಆನೂರಾಧರವರು ಮಾತನಾಡಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಅಧ್ಯಕ್ಷ ಸ್ಥಾನ ನನಗೆ ನೀಡಿ ಸರ್ಕಾರ ನೇಮಿಸಿತ್ತು ಮತ್ತು ಅತ್ಯಂತ ನಷ್ಟದಲ್ಲಿ ಇದ್ದ ನಿಗಮ ಮುಚ್ಚುವ ಹಂತದಲ್ಲಿ ಇತ್ತು ಪಾರದರ್ಶಕ ಆಡಳಿತ ನೀಡಿ ಲಾಭದತ್ತ ಮುನ್ನೇಡೆಸಿ ,ಇದೀಗ ನಮ್ಮ ಸಂಸ್ಥೆಯ ವತಿಯಿಂದ 10ಲಕ್ಷ ಅನುದಾನವನ್ನು ಈ ಶಾಲೆಯ ವಿಜ್ಞಾನ ಶಾಲೆಯ ನೀಡಲಾಗಿದೆ.
ಮಕ್ಕಳಿಗೆ ವಿಜ್ಞಾನವಿಲ್ಲದೇ ಸಮಾಜದ ಪ್ರಗತಿಯಾಗುವುದಿಲ್ಲ, ತಂತ್ರಜ್ಞಾನದ ಜೊತೆಯಲ್ಲಿ ವಿಜ್ಞಾನದ ಜ್ಞಾನವನ್ನು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಮ್ಮದು ಎಂದು ಹೇಳಿದರು.
ಭಾಗ್ಯವತಿ ಅಮರೇಶ್ ರವರು ಮಾತನಾಡಿ ಮಕ್ಕಳಿಗೆ ಜ್ಞಾನ ಮುಖ್ಯ, ಜ್ಞಾನ ಲಭಿಸಬೇಕಾದರೆ ವಿದ್ಯೆ ಮುಖ್ಯ.
ಹೊಂಬೇಗೌಡನಗರ ವಾರ್ಡ್ ನಲ್ಲಿ ಸರ್ಕಾರಿ ಮತ್ತು ಬಿಬಿಎಂಪಿ ಶಾಲೆಗಳ ಅಭಿವೃದ್ದಿಗೆ ಸತತವಾಗಿ ಶಿಕ್ಷಣಕ್ಕೆ ಒತ್ತು ನೀಡಿಲಾಗುತ್ತಿದೆ.
ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಭೇತಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ 40ಲ್ಯಾಪ್ ಟಾಪ್ ವಿತರಿಸಲಾಗಿದೆ ಮತ್ತು ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಶ್ರೀಮಂತರ ಮಕ್ಕಳಿಗೆ ಸಿಗುವ ಶಿಕ್ಷಣ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಮಕ್ಕಳಿಗೆ ಸಿಗಬೇಕು ಎಂಬುದು ಆಶಯ.
ಈ ನಿಟ್ಟಿನಲ್ಲಿ ನಮ್ಮ ಅರಣ್ಯ ಅಭಿವೃದ್ದಿ ನಿಗಮ ಶಿಕ್ಷಣಕ್ಕೆ ಒತ್ತು ನೀಡಿ ನೂತನ ವಿಜ್ಞಾನ ಪ್ರಯೋಗ ಶಾಲೆಗೆ ಸಿ.ಎಸ್.ಆರ್ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಮಾಹಿತಿ ಹಕ್ಕು ಅದ್ಯಯನ ಸಂಸ್ಥೆ ಟ್ರಸ್ಟಿಗಳಾದ ಅಂಬರೀಶ್(ಅಮರೇಶ್), ವಿಲ್ಸನ್ ಗಾರ್ಡನ್ ಶಿಕ್ಷಣ ಸಂಸ್ಥೆಯ ಅದ್ಯಕ್ಷರಾದ ಶರತ್ ಚಂದ್ರ, ಕಾರ್ಯದರ್ಶಿ ಜಗದೀಶ್ ರೆಡ್ಡಿ, ಸದಸ್ಯರಾದ ಮಂಜುನಾಥ್ ರವರು ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.