ಭಾರತ ದೇಶದಲ್ಲಿ ಸಹಕಾರ ಕ್ಷೇತ್ರವು ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ: ಕೆ.ವೈ.ನಂಜೇಗೌಡ
ಮಾಲೂರು:
ಭಾರತ ದೇಶದಲ್ಲಿ ಸಹಕಾರ ಕ್ಷೇತ್ರವು ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದ್ದು ಬಲಿಷ್ಠವಾಗಿ ಸಹಕಾರ ಕ್ಷೇತ್ರ ಅಭಿವೃದ್ಧಿ ಆದಷ್ಟೂ ರೈತರಿಗೆ, ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳು, ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ 71 ನೇ ಅಖಿಲ ಭಾರತ ಸಹಕಾರ ಸಪ್ತಾಹ 2024 ನೇ ಸಾಲಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸಹಕಾರ ಕ್ಷೇತ್ರಕ್ಕೆ ವಿಶೇಷವಾದ ಸ್ಥಾನವಿದ್ದು ಸಹಕಾರ ಸಂಸ್ಥೆಗಳಿಂದ ಸುಮಾರು ಯೋಜನೆಗಳನ್ನು ರೈತರು, ಬಡಜನತೆ ಪಡೆದುಕೊಂಡಿದ್ದಾರೆ.
ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲೇ ಸ್ಥಾನ ಗಳಿಸಿದ್ದು ಎರಡನೇ ಸ್ಥಾನವನ್ನು ಕೋಲಾರ ಹಾಲು ಒಕ್ಕೂಟ ಪಡೆದುಕೊಂಡಿದೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ನಂತರ ಕೋಲಾರ ಹಾಲು ಒಕ್ಕೂಟದಲ್ಲಿ ಹಾಲು ಉತ್ಪಾದನೆ ಇಳಿಕೆಯಾಗಿದ್ದು ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಹಾಲು ಉತ್ಪಾದನೆಯನ್ನು ಹೆಚ್ಚಿಸಬೇಕು.
ಅಲ್ಲದೆ ಹಾಲಿನ ದರವನ್ನು ಏರಿಕೆ ಮಾಡಿ ಹಾಲು ಉತ್ಪಾದಕರಿಗೆ ಹಾಲು ದರವನ್ನು ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜೊತೆ ಚರ್ಚಿಸಲಾಗಿದೆ ಎಂದು ಶಾಸಕ ಕೆ.ವೈ. ನಂಜೇಗೌಡರವರು ಹೇಳಿದರು. ತಾಲ್ಲೂಕಿನ ಸಹಕಾರ ಕ್ಷೇತ್ರದ ಒಕ್ಕೂಟದಿಂದ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪಾಕರಹಳ್ಳಿ ಪಿ.ಎಂ.ವೆಂಕಟೇಶ್, ಉಪಾಧ್ಯಕ್ಷ ಕಲ್ವಮಂಜಲಿ ಟಿ.ಕೆ.ಬೈರೇಗೌಡ, ನಿರ್ದೇಶಕ ಎಸ್.ವಿ.ಗೋರ್ವಧನ್ ರೆಡ್ಡಿ, ಶಂಕರನಾರಾಯಣ ಗೌಡ, ಬೈರರೆಡ್ಡಿ, ಕೆ.ಎಂ.ಮಂಜುನಾಥ್, ನೀಲಕಂಠ ಗೌಡ, ಅ.ಮು.ಲಕ್ಷ್ಮೀನಾರಾಯಣ್, ಕೆ.ಎಚ್.ಚನ್ನರಾಯಪ್ಪ, ರಾಮಚಂದ್ರಗೌಡ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಸ್ವಾಮಿ, ಟಿ.ಎ.ಪಿ.ಎಂ.ಸಿ ಬೈಯ್ಯಣ್ಣ, ದೊಡ್ಡಮಲ್ಲೇ ರವೀಂದ್ರ, ಕೋಚಿಮುಲ್ ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಲೋಹಿತ್, ಅಭಿವೃದ್ಧಿ ಅಧಿಕಾರಿ ಎಸ್.ವೀಣಾ, ದ್ಯಾಪಸಂದ್ರ ನಾರಾಯಣಗೌಡ, ವಿಸ್ತೀರ್ಣಾಧಿಕಾರಿಗಳಾದ ಕರಿಯಪ್ಪ, ವೆಂಕಟೇಶ್, ಹುಲ್ಲೂರಪ್ಪ, ಗಂಗಾಧರ್ ಸೇರಿದಂತೆ ಸಹಕಾರಿಗಳು ಹಾಜರಿದ್ದರು.