ಬೆಂಗಳೂರು ಗ್ರಾಮಾಂತರದ 98 ಹಳ್ಳಿಗಳಲ್ಲಿ ಕಾಡಲಿದೆ ನೀರಿನ ಸಮಸ್ಯೆ

ಬೇಸಿಗೆ ದಿನಗಳಲ್ಲಿಜಿಲ್ಲೆಯ 98 ಗ್ರಾಮಗಳಲ್ಲಿಕುಡಿಯುವ ನೀರಿನ ಕಾಡಲಿದೆ. 54 ಗ್ರಾಪಂಗಳ ಪೈಕಿ ಹೊಸಕೋಟೆ ತಾಲೂಕಿನ ಅತಿ ಹೆಚ್ಚು ಗ್ರಾಮಗಳು ನೀರಿನ ಸಮಸ್ಯೆಗೆ ತತ್ತರಿಸಲಿವೆ. ರಾಜ್ಯದಲ್ಲಿಈ ಬಾರಿ ಬೇಸಿಗೆ ತಾಪಮಾನ ಏರಿಕೆಯಾಗಲಿದೆ ಎಂಬ ವರದಿಗಳು ಜನರನ್ನು ಬೆಚ್ಚಿಬೇಳಿಸುತ್ತಿವೆ.ಗ್ರಾಮಾಂತರ ಜಿಲ್ಲೆಯಲ್ಲೂದಿನದಿಂದ ದಿನಕ್ಕೆ ಬಿಸಿಯ ತಾಪ ಹೆಚ್ಚುತ್ತಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎಲ್ಲಿಲ್ಲಿಎದುರಾಗಬಹುದು ಎಂಬ ಸಮೀಕ್ಷೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ.ಇವರ ಪ್ರಕಾರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯ 98 ಗ್ರಾಮಗಳಲ್ಲಿಕುಡಿಯುವ ನೀರಿನ ಸಮಸ್ಯೆ ಉದ್ಬವಿಸಲಿದೆ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಇದರನ್ವಯ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಜೆಜೆಎಂ ನೀರಿನ ವ್ಯವಸ್ಥೆಯನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಕೊಳವೆ ಬಾವಿಗಳನ್ನು ಕೊರೆಯಿಸಲು ಕ್ರಿಯಯೋಜನೆ ತಯಾರಿಸಿದೆ.ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿಕಳೆದ 3ರಿಂದ 5 ವರ್ಷಗಳಿಂದ ಹೆಚ್ಚಾಗಿ ಬೇಸಿಗೆ ಸಮಯದಲ್ಲಿಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವ ಗ್ರಾಮಗಳ ಆಧಾರದಲ್ಲಿಈ ವರ್ಷ ಬೇಸಿಗೆ ಸಮಯದಲ್ಲಿನೀರಿನ ಸಮಸ್ಯೆ ಉದ್ಬವಿಸಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿಹೆಚ್ಚುವರಿ ಕೊಳವೆ ಬಾವಿ ಕೊರೆಯಿಸಲು, ಪಂಪು ಮೋಟಾರ್ ಅಳವಡಿಸಲು ಹಾಗೂ 238 ಖಾಸಾಗಿ, ರೈತರ ಕೊಳವೆ ಬಾವಿಗಳನ್ನು ಗುರುತಿಸಿ ಕುಡಿಯುವ ನೀರು ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಜಿಲ್ಲೆಯ ಸಾಕಷ್ಟು ಗ್ರಾಮಗಳಲ್ಲಿಜಲ ಜೀವನ್ ಮಿಷನ್(ಜೆಜೆಎಂ)ಯೋಜನೆಯಡಿ ಪ್ರತಿ ಮನೆಗೆ ನಳ ಮೂಲಕ ನೀರು ಪೂರೈಕೆ ಮಾಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ಈ ಬಾರಿ ಬೇಸಿಗೆ ವೇಳೆಗೆ ಜೆಜೆಎಂ ಜನರ ಕೈಗೆಟುಕದಂತಾಗಿದೆ.ಜೆಜೆಎಂ ಯೋಜನೆಯಡಿ ಸಾಕಷ್ಟು ಗ್ರಾಮಗಳಲ್ಲಿಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸಿದ್ದು, ಅದಕ್ಕೆ ಪಂಪು ಮೋಟಾರ್ ಆಳವಡಿಸಿಲ್ಲ. ಅಲ್ಲದೇ, ಕಾಮಗಾರಿ ಕೆಲವಡೆ ಸ್ಥಗಿತವಾಗಿರುವುದರಿಂದ ಕೊರೆಯಿಸಿರುವ ಕೊಳವೆ ಬಾವಿಗಳು ನಿಷ್ಕಿ್ರಯೆಗೊಳ್ಳುತ್ತಿವೆ. ಕೋಟ್ಯಂತರ ರೂ.ಖರ್ಚು ಮಾಡಿ ಅನುಷ್ಠಾನಗೊಳ್ಳುತ್ತಿರುವ ಜೆಜೆಎಂ ಯೋಜನೆ ಕಾಮಗಾರಿಗಳು ನಿಗದಿತ ಗಡುವಿನೊಳಗೆ ಮುಗಿಯದೆ ಇರುವುದು ನೀರಿನ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ.ಕುಡಿಯವ ನೀರು ಸಮಸ್ಯೆ ನೀಗಿಸಲು ಜೆಜೆಎಂ ಕೊಳವೆ ಬಾವಿಗಳನ್ನು ಹೊರತುಪಡಿಸಿ ಜಿಲ್ಲೆಯಾದ್ಯಂತ 99 ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಯಿಸಲು ಕ್ರಿಯಯೋಜನೆ ಸಿದ್ಧಪಡಿಸಲಾಗಿದೆ. ಇದರಲ್ಲಿದೇವನಹಳ್ಳಿ 16, ದೊಡ್ಡಬಳ್ಳಾಪುರ 12, ಹೊಸಕೋಟೆ 35, ನೆಲಮಂಗಲ 36 ಕೊಳವೆ ಬಾವಿಗಳು ಒಳಗೊಂಡಿವೆ.98 ಗ್ರಾಮಗಳ ಪೈಕಿ ಹೊಸಕೋಟೆ ತಾಲೂಕಿನಲ್ಲಿ20 ಗ್ರಾಮಗಳಲ್ಲಿನೀರಿನ ಸಮಸ್ಯೆ ಕಾಡಲಿದೆ. ಇದರಲ್ಲಿ35 ಜನವಸತಿ ಗ್ರಾಮಗಳಿವೆ. ನೆಲಮಂಗಲ ತಾಲೂಕಿನಲ್ಲಿ36 ಗ್ರಾಮಗಳಲ್ಲಿಸಮಸ್ಯೆ ಎದುರಾಗಲಿದೆ.ಜಿಲ್ಲೆಯ ಗ್ರಾಮೀಣ, ನಗರದ ಸೇರಿದಂತೆ ಯಾವುದೇ ಪ್ರದೇಶದಲ್ಲಿಕುಡಿಯುವ ನೀರು ಸಮಸ್ಯೆ ಕಂಡುಬಂದಲ್ಲಿಅಧಿಕಾರಿಗಳು ತ್ವರಿತ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ಗ್ರಾಮೀಣ ಭಾಗದ 54 ಗ್ರಾಪಂ ವ್ಯಾಪ್ತಿಯ 98 ಗ್ರಾಮಗಳಲ್ಲಿಕುಡಿಯುವ ನೀರು ಸಮಸ್ಯೆ ಉದ್ಭವಿಸಬಹುದು ಎಂದು ಗುರುತಿಸಲಾಗಿದೆ. ಅವಶ್ಯಕತೆ ಇದ್ದಲ್ಲಿಖಾಸಗಿ ಬೋರ್ವೆಲ್ಗಳ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು.