ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ; ಉಗ್ರ ಸಂಘಟನೆ ಹೆಸರು ಉಲ್ಲೇಖ
ಬೆಂಗಳೂರು, ಜ.05: ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರ ಪರಿಶೀಲನೆ ಬಳಿಕ ಹುಸಿ ಮೇಲ್ ಎಂಬುದು ಪತ್ತೆಯಾಗಿದೆ. ಮ್ಯೂಸಿಯಂನಲ್ಲಿ ಬಚ್ಚಿಡಲಾಗಿದೆ, ಬೆಳಗ್ಗೆ ಎಲ್ಲವೂ ಸ್ಪೋಟಗೊಳ್ಳುತ್ತದೆ ಎಂದು‘ ಎಂಬ ಮೇಲ್ ಐಡಿ ಮೂಲಕ ಮೇಲ್ ಮಾಡಿ, ಜೊತೆಗೆ ಉಗ್ರ ಸಂಘಟೆನಯೊಂದರಹೆಸರನ್ನು ಉಲ್ಲೇಖಿಸಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದರು. ಈ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮ್ಯೂಸಿಯಂಗೆ ಡಾಗ್ ಸ್ಕ್ವಾಡ್, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪರ್ಸ್ ಹುಡುಕಲು ನೆರವಾಗಲಿಲ್ಲ ಎಂದು ಬಾಂಬ್ ಬೆದರಿಕೆ ಒಡ್ಡಿದ ವಿಮಾನ ಪ್ರಯಾಣಿಕ
2023 ಡಿಸೆಂಬರ್ 26 ರಂದು ವಿಮಾನ ಪ್ರಯಾಣಿಕನೊಬ್ಬ ಪರ್ಸ್ ಹುಡುಕಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಸ್ಥೆಯ ಕಾಲ್ ಸೆಂಟರ್ಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಘಟನೆ ನಡೆದಿತ್ತು. ಬಳಿಕ ಆರೋಪಿ ಶ್ರೇಯಸ್ ಚಾರ್ಮಿಯಾ ಎಂಬಾತನನ್ನು ಬಂಧಿಸಲಾಗಿತ್ತು.
ಆರೋಪಿ ಚಾರ್ಮಿಯಾ ಎಂಬಾತ ಎಸ್ಜಿ 8536 ಸಂಖ್ಯೆಯ ಸ್ಪೈಸ್ ಜೆಟ್ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ. ಈ ವೇಳೆ ವಿಮಾನದಲ್ಲಿ ಕಳೆದುಕೊಂಡಿದ್ದ ಪರ್ಸ್ನ್ನು ಹುಡುಕಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಆರೋಪಿಯು ಕೃತ್ಯ ಎಸಗಿದ್ದ. ಈ ಹಿನ್ನಲೆ ಆರೋಪಿ ಶ್ರೇಯಸ್ ಚಾರ್ಮಿಯಾ ವಿರುದ್ಧ ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ, ಆರೋಪಿ ಜೈಲು ಪಾಲಾಗಿದ್ದ. ಇದೀಗ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕೇಳಿಬಂದಿದೆ.