ಇತ್ತೀಚಿನ ಸುದ್ದಿ

ಬೃಹತ್ ಉದ್ಯೋಗ ಮೇಳ ನಿರುದ್ಯೋಗ ಹೋಗಲಾಡಿಸಲು ಮುಂದಾದ ಗಣೇಶ ಪ್ರಸಾದ್

ಗುಂಡ್ಲುಪೇಟೆ: ಪಟ್ಟಣದ ಅಂಬೇಡ್ಕರ್ ಭವನದ ಎದುರಿನ ಮೈದಾನದಲ್ಲಿ ಹೆಚ್.ಎಸ್. ಮಹದೇವ ಪ್ರಸಾದ್ ಟ್ರಸ್ಟ್ ಮತ್ತು ಅಕ್ಷರ ಪೌಂಡೇಶನ್ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಹಾಗೂ ಹೆಚ್.ಎಂ.ಗಣೇಶ್ ಪ್ರಸಾದ್ ರವರ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಬೃಹತ್ ಉದ್ಯೋಗ ಮೇಳ ಯಶಸ್ವಿಯಾಗಿ ನಡೆಯಿತು.

ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹೆಚ್.ಎಂ ಗಣೇಶ್ ಪ್ರಸಾದ್ ಮಾತನಾಡುತ್ತ ತಾಲ್ಲೂಕಿನಲ್ಲಿ ಸಾಕಷ್ಟು ನಿರುದ್ಯೋಗ ಸಮಸ್ಯೆ ಇದೆ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದ್ದಾಗ ಉದ್ಯೋಗ ಕೊಡಿಸಿ ಕೊಡಿ ಎಂದು ಬಹಳಷ್ಟು ಅರ್ಜಿಗಳು ಬರುತ್ತಿವೆ ಇದನ್ನು ಮನಗಂಡು ನಾವು ನಿರುದ್ಯೋಗ ಸಮಸ್ಯೆ ಯನ್ನು ಕಡಿಮೆ ಮಾಡಲು ಉದ್ಯೋಗಮೇಳವನ್ನು ಹಮ್ಮಿಕೊಂಡಿದ್ದೇವೆ ಕರೋನದಿಂದ ಎಲ್ಲಾ ಕ್ಷೇತ್ರಗಳಲ್ಲಿ ಸಮಸ್ಯೆ ಗಳು ಸೃಷ್ಟಿ ಯಾಗಿತ್ತು ಅದರಿಂದ ಕಂಪನಿಗಳು ಉದ್ಯೋಗ ವನ್ನು ಕಡಿತ ಗೊಳಿಸಿದ ಉದಾಹರಣೆಗಳು ಬಹಳಷ್ಟು ಇವೆ ಅದರಿಂದ ತಡವಾಗಿ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದೇವೇ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು ಸಿಕ್ಕಿದ ಕೆಲಸವನ್ನು ಮನಸಾಕ್ಷಿಯಾಗಿ ಮಾಡಬೇಕು ದೂರದ ಕಡೆಗೆ ಹೋಗುವುದಿಲ್ಲ ಹತ್ತಿರದಲ್ಲೇ ಕೆಲಸ ಬೇಕು ಎನ್ನುವುದು ತಪ್ಪು ಒಂದು ಕೆಲಸಕ್ಕೆ ಸೇರಿ ಅ ಕೆಲಸದಲ್ಲಿ ತೊಡಗಿಸಿಕೊಂಡರೆ ತಾನಾಗಿಯೇ ತಾನು ಎಲ್ಲವೂ ಸಿಗುತ್ತದೆ ಅದಕ್ಕಾಗಿ ಉನ್ನತ ಮಟ್ಟದ ಶಿಕ್ಷಣ ಪಡೆಯುವುದು ಕೂಡ ಅವಶ್ಯಕತೆ ಇದೆ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಉದ್ಯೋಗ ಅವಶ್ಯಕತೆ ಪ್ರಮುಖ ಪಾತ್ರವಾಗಿದೆ ಒಂದೇ ಕ್ಷೇತ್ರದಲ್ಲಿ ತೊಡಗಿ ಕೊಳ್ಳದೆ ಉಳಿದ ಕ್ಷೇತ್ರಗಳಲ್ಲೂ ಕೂಡ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಧ್ರುವನಾರಾಯಣ್ ಮತ್ತು ಮಹದೇವ ಪ್ರಸಾದ್ ಅವರು ರಾಜಕೀಯ ಮತ್ತು ಸಮಾಜಸೇವೆಗೆ ಅಪರವಾದ ಕೊಡುಗೆಗಳನ್ನು ನೀಡಿದ್ದಾರೆ ಅವರ ಸ್ಮರಣೆ ಇಂದಿಗೂ ನೆನೆಯುತ್ತೇವೆ ಎಂದರೆ ಅವರು ಕ್ಷೇತ್ರಕ್ಕೆ ನೀಡಿರುವ ಅಭಿವೃದ್ಧಿ ಕೆಲಸಗಳೆ ಕಾರಣ ಅದರಿಂದ ಉತ್ತಮ ಕೆಲಸಗಳಿಗೆ ಎಲ್ಲಾ ಕೈಜೋಡಿಸಬೇಕು ಇನ್ನೂ ಹೆಚ್ಚು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಹಕಾರ ವಾಗುತ್ತದೆ ಎಂದು ಹೇಳಿದರು.

ದುಡಿಯುವ ಶಕ್ತಿ ದುಡಿಮೆ ಯಲ್ಲಿ ಎರಡು ವಿಧಗಳಿವೆ ಉದ್ಯೋಗ ಇಲ್ಲ ಅಂದರೆ ಬದುಕುವುದು ಕಷ್ಟ ಪ್ರಸ್ತುತ ದಿನಗಳಲ್ಲಿ ಉದ್ಯೋಗ ಇಲ್ಲ ಅಂದರೆ ಮದುವೆಗೆ ಹೆಣ್ಣನ್ನು ಕೊಡುತ್ತಿಲ್ಲ ಅಂತಹ ಪರಿಸ್ಥಿಗೆ ಬಂದಿದೆ ಕೀಳರಿಮೆ ಇರಬಾರದು
ಮುಂದಿನ ದಿನಗಳಲ್ಲಿ ಕೆಲಸ ಬೇಕು ಉದ್ಯೋಗ ಸಿಗುತ್ತಿಲ್ಲ ಅವಕಾಶ ಇರಬೇಕು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಕರೋನ ಸಮಸ್ಯೆ ಕಂಪನಿಗಳಲ್ಲಿ ಉದ್ಯೋಗ ಕಡಿಮೆ ನಿಮ್ಮ ಭವಿಷ್ಯವನ್ನು ನೀವೇ ಸೃಷ್ಟಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಬ್ಬಹಳ್ಳಿ ಮಹೇಶ್, ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ರಾಜಶೇಖರ್, ಶಿವಣ್ಣ, ಶಿವಕುಮಾರ್, ಎಪಿಎಂಸಿ ಸದಸ್ಯ ಬಸವರಾಜು , ಲಿಂಗರಾಜು, ಪುರಸಭಾ ಸದಸ್ಯೆ ನಿರ್ಮಲ ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button