ಇತ್ತೀಚಿನ ಸುದ್ದಿರಾಜ್ಯ

ಬಸವಣ್ಣ ಸಂಸ್ಕೃತಿಕ ನಾಯಕ ಭಾವಚಿತ್ರದ ಅನಾವರಣ ಕಾರ್ಯಕ್ರಮ

ಶರಣರು ಹಾಕಿಕೊಟ್ಟ ದಾರಿಯಲ್ಲಿ ನಡೆಯೋಣ- ಕೀರ್ತಿ ಚಾಲಕ್

ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟಿ: ಪಟ್ಟಣದ ತಹಶೀಲ್ದಾರ ಕಾರ್ಯಲಯದಲ್ಲಿ ತಾಲೂಕ ಆಡಳಿತದ ವತಿಯಿಂದ 12ನೇ ಶತಮಾನದಲ್ಲಿದ್ದ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ವಿಶ್ವಗುರು ಬಸವಣ್ಣನವರು ಸಮಾನತೆಯ ಕ್ರಾಂತಿಯನ್ನು ತಂದರು ಅವರು ಲಿಂಗ ತಾರತಮ್ಯವನ್ನು ವಿರೋಧಿಸಿದರು ಸಮಾಜದಲ್ಲಿ ಮಹಿಳೆಗೆ ಉನ್ನತ ಸ್ಥಾನವನ್ನು ಕೊಟ್ಟರು ಇಂಥಹ ಮಹಾನ್ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ತಹಶೀಲ್ದಾರ ಕೀರ್ತಿ ಚಾಲಕ್ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ ವಿಶ್ವ ಗುರು ಬಸವಣ್ಣ ಸಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವುದು ಬಸವ ಜನ್ಮ ತಾಳಿದ ಜಿಲ್ಲೆಯವರಾದ ನಮಗೆ ಹೆಚ್ಚು ಖುಷಿ ತಂದಿದೆ ನಾನು ನಿಮ್ಮೆಲ್ಲರ ಪರವಾಗಿ ಕರ್ನಾಟಕ ಘನ ಸರ್ಕಾರಕ್ಕೆ ಅಭಿನಂದಿಸುತ್ತೇನೆ ಎಂದರು. ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಮಹಾಂತೇಶ ಮುರಾಳ ಮಾತನಾಡಿ ವಿಶ್ವಗುರು ಬಸವಣ್ಣನವರನ್ನು ಸಂಸ್ಕೃತಿಕ ನಾಯಕನೆಂದು ಘೋಷಿಸಿ ಎಂಬುದು ನಾಡಿನ ಮಠಾಧೀಶರ ಹಾಗೂ ಬಸವ ಅಭಿಮಾನಿಗಳ ಬೇಡಿಕೆಯಾಗಿತ್ತು ಇದಕ್ಕೆ ಸ್ಪಂದಿಸಿದ ಕರ್ನಾಟಕ ಸರ್ಕಾರವು ಇದರ ಘೋಷಣೆಯನ್ನು ಮಾಡಿದೆ ನಾವೆಲ್ಲರೂ ಸಮಾಜದ ವತಿಯಿಂದ ಸರ್ಕಾರಕ್ಕೆ ಅಭಿನಂದಿಸುತ್ತೇವೆ ಬಸವಣ್ಣ ಇಡಿ ಮನುಕುಲದ ಆಸ್ತಿ ಅವರು ಜಗತ್ತಿಗೆ ಕೊಟ್ಟುಹೋದ ವಚನ ಸಾಹಿತ್ಯದಲ್ಲಿ ಎಲ್ಲರಿಗೂ ಮಾರ್ಗದರ್ಶನವಿದೆ ಬಸವಣ್ಣನವರನ್ನು ಗೌರವಿಸದ ಜೊತೆಗೆ ನಾವೆಲ್ಲರೂ ಅವರನ್ನು ಅನುಸರಿಸುವ ಅಗತ್ಯ ಇದೆ ಎಂದರು. ದಲಿತ ಮುಖಂಡ ಜೈ ಭೀಮ ಮುತ್ತಗಿ ಮಾತನಾಡಿ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಅನುಭವ ಮಂಟಪವನ್ನು ನಿರ್ಮಾಣ ಮಾಡಿ ಅಣ್ಣ ಬಸವಣ್ಣನವರು ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಿದರು ಅವರು ಜಾತಿ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸಿದರು ಮಾನವ ಸಮಾಜಕ್ಕೆ ಘನತೆ ತಂದು ಕೊಟ್ಟರು. ವರ್ಣ ವ್ಯವಸ್ಥೆಯ ನಿರ್ಮೂಲಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸಿದರು ಇಂಥ ಮಹಾನ್ ಮಾನವತಾವಾದಿಯನ್ನು ಕರ್ನಾಟಕ ಸರ್ಕಾರ ಸಂಸ್ಕೃತಿಕ ನಾಯಕನೆಂದು ಘೋಷಿಸಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ ಈ ಮಹಾನ್ ಕಾರ್ಯವನ್ನು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದಿಸುತ್ತೇವೆ ಎಂದರು. ಗಡಿ ಸೋಮನಾಳದ ಇಂದೂಧರ ಶ್ರೀಗಳು ಸಾನಿಧ್ಯವನ್ನು ವಹಿಸಿದ್ದರು. ಕಾರ್ಯಕ್ರಮದ ಮೊದಲು ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರರ ಮೂರ್ತಿಗೆ ಪುಷ್ಪಾರ್ಪಣೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ. ಗಣ್ಯರಾದ ಕಾಶಿನಾಥ ಮುರಾಳ .ಮುರಿಗೆಪ್ಪ ಸರಶೆಟ್ಟಿ. ಗಂಗಾಧರ ಕಸ್ತೂರಿ.ಸಂಗನಗೌಡ ಅಸ್ಕಿ. ರಮೇಶ ಸಾಲಂಕಿ. ಇಬ್ರಾಹಿಂ ಮನ್ಸೂರ. ಮಾನಸಿಂಗ್ ಕೊಕಟನೂರ. ಬಸವರಾಜ ಕಟ್ಟಿಮನಿ. ರಾಜು ಸಜ್ಜನ.ಡಾ.ನಜೀರ ಕೊಳ್ಯಾಳ. ಡಾ. ಚಿತ್ತರಗಿ. ದ್ಯಾಮನಗೌಡ. ಪಾಟೀಲ. ಜಗಧೀಶ ಬಿಳೆಭಾವಿ. ರಾಜು ಅಲ್ಲಾಪೂರ. ನೀಲಮ್ಮ ಪಾಟೀಲ. ಪುರಸಭೆ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ. ಎಂ .ಕೆ. ಪಟ್ಟಣಶೆಟ್ಟಿ. ಅಣ್ಣಾರಾವ್ ಜಗತಾಪ. ಪರಶುರಾಮ ತಂಗಡಗಿ. ಮುದಕಪ್ಪ ಬಡಿಗೇರ .ಜೈಸಿಂಗ್ ಮೂಲಿಮನಿ. ನಿಂಗಣ್ಣ ಕುಂಟೋಜಿ.ಶಿರಸ್ತೆದಾರ ಜಗದಿಶ. ಆರ್. ಜೈನಾಪೂರ. ಸಿ. ಆರ್. ಸಿ. ರಾಜು ವಿಜಾಪೂರ.ಬಿ,ಆರ್,ಸಿ. ಎಸ್. ಟಿ. ಸಜ್ಜನ. ಸಿದ್ದಲಿಂಗ ಪಾಟೀಲ. ಶ್ರೀಪಾದ ಜೋಶಿ. ಮುನ್ನಾ ಅತ್ತಾರ.ವಿರೇಶ ಬಿರಾದಾರ ರಾಜ್ ಅಮ್ಮದ ಮುಕಿಹಾಳ ಆನಂದ ಇದ್ದರು.

ವರದಿ ಸುನೀಲ್ ಎಲ್ ತಳವಾರ ಮುಂಜಾನೆ ವಾರ್ತೆ ತಾಳಿಕೋಟಿ.

Related Articles

Leave a Reply

Your email address will not be published. Required fields are marked *

Back to top button