ಬಳೆಪೇಟೆಯಲ್ಲಿ ನೂತನ ಹುಲಿವಾಹನ ಹಾಗೂ ಉತ್ಸವ ಮೂರ್ತಿ ಮೆರವಣಿಗೆ..

ಯಳಂದೂರು. ಪಟ್ಟಣದ ಬಳೆಪೇಟೆಯ 9ನೇ ವಾರ್ಡ್ ನ ದಲಿತ ಸಮುದಾಯದ ಬಡಾವಣೆಯಲ್ಲಿ ನೂತನವಾಗಿ
ನಿರ್ಮಿಸಿರುವ ಹುಲಿಯ ವಾಹನದಲ್ಲಿ ಗ್ರಾಮ ದೇವತೆ ನಾಡ ಮೇಘಲಮ್ಮ ಹಾಗೂ ಮಾರಮ್ಮ ದೇವಿಯ ಮೂರ್ತಿಯನ್ನು ಕುರಿಸಿ ಮೆರವಣಿಗೆ ಮಾಡಲಾಯಿತು.
ನೂತನ ಹುಲಿ ವಾಹನವನ್ನು ಪಟ್ಟಣದ ಜಪದ ಕಟ್ಟೆಯ ಬಳಿ ಇರುವ ದೇವಾಲಯದಲ್ಲಿ ವಿವಿಧ ಬಗೆಯ ಹೂಗಳಿಂದ ಸಿಂಗರಿಸಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಮಾಡಲಾಯಿತು,ಮೆರವಣಿಗೆಯಲ್ಲಿ ಸತ್ತಿಗೆ ಸೂರಿ ಪಾನಿ ಹೊತ್ತ ಭಕ್ತರು ನೂತನ ಹುಲಿ ವಾಹನ ಹಾಗೂ ಮಾರಮ್ಮ ದೇವಿಯ ಮೂರ್ತಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ವಿಜೃಂಭಣೆಯಿಂದ ದೇವರ ವಾಹನವನ್ನು ಪ್ರತಿಷ್ಠಾಪನೆ ಮಾಡಿದರು..
ನಂತರ ಬಡಾವಣೆಯ ಮಹಿಳೆಯರು ಹಾಗೂ ನಿವಾಸಿಗಳು ಪೂಜೆ ಸಲ್ಲಿಸಿ ನಾಡ ಮೆಗಲಮ್ಮ ಹಾಗೂ ಮಾರಮ್ಮ ದೇವಿಯ ಕೃಪೆಗೆ ಪಾತ್ರರಾದರು, ದೇವತಾ ಪ್ರತಿಷ್ಠಾಪನ ಕಾರ್ಯಗಳು ಮುಗಿದ ನಂತರ ಅನ್ನ ಸಂತರ್ಪಣೆ ಕಾರ್ಯವನ್ನು ನಡೆಸಲಾಯಿತು.ಪ್ರತಿಷ್ಠಾಪನ ಕಾರ್ಯದಲ್ಲಿ ಗ್ರಾಮದ ಯಜಮಾನರು, ಮುಖಂಡರು, ಯುವಕರು ಹಾಗೂ ಭಕ್ತಾದಿಗಳು ಹಾಜರಿದ್ದರು.