ಬನ್ನೂರು ಪಟ್ಟಣದಲ್ಲಿ ನೆಡದ 75 ನೇ ವರ್ಷದ ಅಮೃತ ಮಹೋತ್ಸವ
ತಿ.ನರಸೀಪುರ.ಫೆ.19:-ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನ ಮೊದಲು ಅರಿಯ ಬೇಕಾಗಿರುವುದು ಮಹಿಳಿಯರು ಎಂದು ಮಾನಸ ಗಂಗೋತ್ರಿಯ ಪ್ರೊಫೆಸರ್ ಡಾ.ಕಲಾವತಿ ತಿಳಿಸಿದರು.
ಬನ್ನೂರು ಪಟ್ಟಣದಲ್ಲಿ ನೆಡದ 75 ನೇ ವರ್ಷದ ಅಮೃತ ಮಹೋತ್ಸವ ಸಂವಿಧಾನ ರಥ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಡಾ.ಕಲಾವತಿ ಮಹಿಳೆಯರು ಕುಟುಂಬ ಮತ್ತು ವಿವಾಹ ಸಂಕೋಲೆಯ ಬಂದನಕ್ಕೆ ಒಳಗಾಗಿದ್ದಾರೆ ಅವರು ಯಾವತ್ತು ಸಹ ಹೊರ ಬರಲು ಸಾಧ್ಯವಿಲ್ಲ ಈ ಸಮಾಜ ಅವರ ಮೇಲೆ ಆಚರಣೆ ಸಂಪ್ರದಾಯಗಳನ್ನ ಏರಿದೆ ಸಂವಿಧಾನ ಮೂಲಕ ಮಹಿಳಿಯರು ಅನಿಷ್ಟ ಪದ್ದತಿಗಳಿಂದ ಬಿಡುಗಡೆ ಯಾದರೆ ಈ ದೇಶ ಆದರ್ಶ ಸಮಾಜವಾಗಲಿದೆ ಎಂದು ಬಯಸಿದ್ದ ಬಾಬಾ ಸಾಹೇಬರನ್ನ ಮಹಿಳೆಯರು ಮೊದಲು ಅರಿಯಬೇಕು ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಹಿರಿಯರು ವಾಗ್ಮೀಗಳು ಹೋರಾಟಗಾರರು ಬುದ್ದಿ ಜೀವಿಗಳು ಇದ್ದಾರೆ ಇಂತಹ ವೇದಿಕೆಯಲ್ಲಿ ನಾನು ಒಬ್ಬ ಮಹಿಳೆಯಾಗಿ ಅಂಬೇಡ್ಕರ್ ಬಗ್ಗೆ ಮಾತಲಾಡಲಿಕ್ಕೆ ಅವಕಾಶ ಸಿಕ್ಕಿದೆ ಅಂದರೆ ನಾನು ನಿಮ್ಮ ಮುಂದೆ ನಿಂತಿದ್ದೀನಿ ಅಂದರೆ ಅದು ಬಾಬಾ ಸಾಹೇಬರ ದೊಡ್ಡ ಶಕ್ತಿ ಕಾರಣ ಎಂದರು.
ಶಿಕ್ಷಿತರಾದ ನಮಗೆ ಎಂತಹ ಹೊಣೆಗಾರಿಕೆ ಜವಾಬ್ದಾರಿ ಇದೆ ಎಂಬುದನ್ನು ಅರಿಯುವುದೆ ಸಂವಿಧಾನದ ಜಾಗೃತಿ ಜಾಥ ಉದ್ದೇಶವಾಗಿದೆ ನಾವು ಮೂಲಭೂತವಾಗಿ ಕೆಲವೊಂದು ಪ್ರಶ್ನೆಗಳನ್ನ ಹಾಕಿಕೊಳ್ಳುವ ಮೂಲಕ ನಮ್ಮ ಅಸ್ತಿತ್ವ ಏನು ಎಂಬುದನ್ನ ಅರಿತುಕೊಳ್ಳುವುದು ಮುಖ್ಯ ಸಂವಿಧಾನ ಜಾರಿಯಾಗುವ ಮುನ್ನ ನಮ್ಮ ಪರಿಸ್ಥಿತಿ ಹೇಗಿತ್ತು ನಮ್ಮನ್ನ ಎಲ್ಲಿ ಇಟ್ಟಿದ್ದರು ಎಂಬುದನ್ನ ಅರಿಯಬೇಕು ಎಂದರು.
ಸಂವಿಧಾನ ಇರುವುದು ಎಸ್.ಸಿ, ಎಸ್ ಟಿ, ಓಬಿಸಿ, ಅಲ್ಪಸಂಖ್ಯಾತರಿಗೆ ಮಾತ್ರ ಅಲ್ಲ ಭಾರತೀಯ ಸಮಸ್ತ ನಾಗರೀಕರಿಗೆಲ್ಲ ಎನ್ನುವುದನ್ನ ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನ ಅರ್ಥ ಮಾಡಿ ಕೊಂಡರೆ ಮಾತ್ರ ಅದರಲ್ಲಿ ಅಡಕವಾಗಿರುವ ನಿಜವಾದ ಅಂಶಗಳು ತಿಳಿಯುತ್ತವೆ ಎಂದರು.
ನಾವು ರಾಜಕೀಯವಾಗಿ ಸಮಾನತೆಯನ್ನ ಹೊಂದಿದ್ದೇವೆ ಆದರೆ ಆರ್ಥಿಕವಾಗಿ ಸಮಾಜೀಕವಾಗಿ ನಾವು ಸಮಾನತೆಯನ್ನ ಹೊಂದಿಲ್ಲ ಗ್ರಾಮ ಮಟ್ಟದಲ್ಲಿ ಅಸ್ಪೃಶ್ಯತೆ,ಹೆಣ್ಣು ಮಕ್ಕಳ ಮೇಲಿನ ದಬ್ಬಾಳಿಕೆ ಸೇರಿದಂತೆ ನಿಷ್ಕೃಷ್ಟ ಪದ್ದತಿಗಳು ಹೋಗಬೇಕು, ಆರ್ಥಿಕ ಸಮಾನತೆ ನಿರ್ಮಾಣ ವಾಗಬೇಕು ಆಗ ಸಮಾನತೆ ಸಾಧಿಸುತ್ತೇವೆ ಹಾಗೂ ಭವಿಷ್ಯದ ಭಾರತ ನಿರ್ಮಾಣ ಆಗಲಿದೆ ಎಂದು ಬಾಬಾ ಸಾಹೇಬರು ಸಂವಿಧಾನ ರಚನಾ ಸಮಿತಿಯ ಕೊನೆಯ ಸಭೆಯಲ್ಲಿ ಹೇಳಿದರು
ಸಂವಿಧಾನ ರಚನಾ ಸಮಿತಿಯ ಕೊನೆ ಸಭೆಯಲ್ಲಿ ಬಾಬಾ ಸಾಹೇಬರು ಹೇಳಿದ ಮಾತನ್ನ ಪುಷ್ಟಿಕರಿಸುವಲ್ಲಿ ಇಂದಿನ ಘನ ಸರ್ಕಾರ ಬಹಳ ಜಾಗೃರುಕತೆಯಿಂದ ನಿರ್ವಹಿಸುತ್ತಿದೆ
ಹಾಗಾಗಿ ಬಾಬಾ ಸಾಹೇಬರು ಹಾಗೂ ಸಂವಿಧಾನವನ್ನ ಬಾಯಿಯಲ್ಲಿ ಹೇಳುವುದಲ್ಲ ಅದನ್ನ ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವನ್ನ ಎಲ್ಲರು ಮಾಡಬೇಕು ಎಂದರು.
ಪಟ್ಟಣದಲ್ಲಿ ದ್ವಾರದಿಂದ ಮಂಗಳ ವಾದ್ಯ ಹಾಗೂ ಮೂಲಕ ಸಂವಿಧಾನ ಜಾಗೃತಿ ಜಾಥವನ್ನು ಮೇರವಣಿಗೆ ಮಾಡಿಕೊಂಡು ವೇದಿಕಿ ಬಳಿ ಕರೆತರಲಾಯಿತು ಮೇರೆವಣಿಗೆ ಸಮಯದಲ್ಲಿ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಜೈಕಾರ ಕೂಗಿ ಸಂಭ್ರಮಿಸಿದರು. ತದ ನಂತರ ನೆಡದ ವೇದಿಕೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಪುರಸಭಾ ಮುಖ್ಯಧಿಕಾರಿ ಹೇಮಂತ್ ರಾಜ್ ಓದುವ ಮೂಲಕ ಭೋದನೆ ಮಾಡಿದರು.
“1939 ಮಹಿಳೆಯರಿಗೆ ಸಂಬಳ ಸಮೇತ ಹೆರಿಗೆ ರಜೆಯನ್ನು ಪ್ರಸ್ತಾಪಿಸಿದ ಭಾರತದ ಏಕೈಕ ವ್ಯಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ವಿಷಯದ ಪ್ರಸ್ತಾಪ ಸಂವಿಧಾನ ರಚನೆಗೂ ಮುಂಚಿನ ಪ್ರಯತ್ನವಾಗಿತ್ತು ಆದರೆ ಆ ಮಾತನ್ನು ದಿಕ್ಕರಿಸಿದ ಅಮರಾವತಿಯಾ ರಾಂಬಿಲ್ಲ್ಯಾ ಗೌಲ್ನಲ್ಲಿ ಕರಪತ್ರ ಸಹೋಮಹಾರಾಜ್ಎಂಬ ವ್ಯಕ್ತಿ ಸುಮಾರು 70 ರಿಂದ 80 ಪ್ರತಿಭಟನೆ ಮಾಡಿ ಮಹಿಳಿಯರಿಗೆ ಸಮಾನತೆಯ ಹಕ್ಕು ಕೂಡುವುದನ್ನ ನಾನು ಸಹಿಸುವುದಿಲ್ಲ ಎಂದು ಅಂಬೇಡ್ಕರ್ ರವರಿಗೆ ಛೀಮಾರಿ ಹಾಕಿದ್ದ ಆದರೂ ಬಾಬಾ ಸಾಹೇಬರ ಕಠಿಣ ನಿಲುವು ಹೋರಾಟ ದಿಂದ ಮಹಿಳೆಯರಿಗೆ ಸಮಾನತೆ ಸಿಕ್ಕಿತು ಹಾಗಾಗಿ ಮಹಿಳೆಯರು ಬಾಬಾ ಸಾಹೇಬರ ಬಗ್ಗೆ ಜಾಗೃತಿ ಹೊಂದಬೇಕು”
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು, ಮಾಜಿ ಶಾಸಕ ಎಸ್. ಕೃಷ್ಣಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಪದ್ಮನಾಭ, ಮುನ್ನಾವರ್ ಪಾಷ, ಡಾ. ಜ್ಞಾನ ಪ್ರಕಾಶ್, ಜಾತಾ ಉಸ್ತುವಾರಿ ಶಾಂತ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭೀಮರಾಯ ವಡ್ಡರ್, ಬನ್ನೂರು ಉಪ ತಹಸೀಲ್ದಾರ್ ರೂಪ, ಸಂಪನ್ಮೂಲ ಅಧಿಕಾರಿ ಪುಟ್ಟಸ್ವಾಮಿ, ಪುರಸಭೆ ಸಿಬ್ಬಂದಿಗಳು,ಮುಖಂಡರಾದ ಕೃಷ್ಣ. ಶಿವಣ್ಣ, ಅಂಬೇಡ್ಕರ್ ಸಂಘದ ಯುವಕರು, ಡಿ. ಎಸ್.ಎಸ್. ಕಾರ್ಯಕರ್ತರು ಇನ್ನಿತರರು ಹಾಜರಿದ್ದರು.