ಇತ್ತೀಚಿನ ಸುದ್ದಿರಾಜ್ಯ
ಬಟ್ಟೆಮಲ್ಲಪ್ಪ ಸುತ್ತಮುತ್ತ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಮೂಡಿದ ಆತಂಕ
ಹೊಸನಗರ; ತಾಲೂಕಿನ ಕಸಬಾ ಹೋಬಳಿ ಬಟ್ಟೆಮಲ್ಲಪ್ಪ ಸಮೀಪದ ಹಲುಸಾಲೆ ಮಳವಳ್ಳಿ ಗ್ರಾಮದ ದೇವಸ್ಥಾನದ ಹಿಂಭಾಗದಲ್ಲಿ ಚಿರತೆಯೊಂದು ಗುರುವಾರ ಬೆಳಗ್ಗೆ ಪ್ರತ್ಯೇಕ ವಾಗಿದೆ.
ಮಳವಳ್ಳಿ ಗ್ರಾಮದ ದಿನೇಶ್ ಎಂಬಾತ ಬೆಳಿಗ್ಗೆ ಹಾಲು ತರಲು ತೆರಳುತಿದ್ದ ವೇಳೆಯಲ್ಲಿ ಇಲ್ಲಿನ ಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಚಿರತೆ ದಿಢೀರ್ ಪ್ರತ್ಯಕ್ಷವಾಗಿದೆ.
ಚಿರತೆ ಪ್ರತ್ಯಕ್ಷ ಆಗಿರುವುದು ಗ್ರಾಮಸ್ಥರಿಗೆ ಭಯದ ವಾತಾವರಣ ಸೃಷ್ಟಿಸಿದ್ದು, ಸಾಕು ಪ್ರಾಣಿಗಳು ಹಾಗೂ ದನಕರುಗಳಿಗೆ ಕಂಟಕವಾಗುವ ಭೀತಿ ಎದುರಾಗಿದೆ.ಚಿರತೆ ಕೆಲ ಗ್ರಾಮಸ್ಥರಿಗೆ ಕಂಡಿದೆಯಾದರೂ ಅರಣ್ಯ ಇಲಾಖೆ ಸಿಬ್ಬಂದಿಗೆ ಜಾಡು ಹಿಡಿಯಲು ಅಸಾಧ್ಯವಾದ ಕಾರಣ ಗ್ರಾಮಸ್ಥರೇ ಚಿರತೆ ಹೆಜ್ಜೆ ಫೊಟೋ ತೆಗೆದು ವಲಯ ಅರಣ್ಯಾಧಿಕಾರಿಗಳಿಗೆ ಸಲ್ಲಿಸಿ ಸೆರೆ ಹಿಡಿಯಲು ಗ್ರಾಮಸ್ಥರು ಮನವಿ ಮಾಡಿದ್ದಾರೆ