ಬಂಡೀಪುರದಲ್ಲಿ ನೀಳ ದಂತದ ಜೂನಿಯರ್ ಭೋಗೇಶ್ವರನ ಹವಾ
ಗುಂಡ್ಲುಪೇಟೆ:ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಪ್ರವಾಸಿಗರಿಗೆ ಆಕರ್ಷಣೆಯಾಗಿದ್ದ ಭೋಗೇಶ್ವರ ಆನೆ ವಯೋ ಸಹಜ ಅನಾರೋಗ್ಯದಿಂದ ಮರಣ ಹೊಂದಿತ್ತು ಈಗ ಮತ್ತೊಬ್ಬ ನೀಳ ದಂತದ ಭೋಗೇಶ್ವರನ ರೀತಿಯ ಇನ್ನೊಂದು ಆನೆಯು ಬಂಡೀಪುರದಲ್ಲಿ ಪ್ರತ್ಯಕ್ಷವಾಗಿದ್ದು ಪ್ರವಾಸಿಗರಿಗೆ ಸಂತಸ ತಂದಿದೆ
ವಿಭಿನ್ನ ಹಾವಭಾವ ಗಾಂಭೀರ್ಯ ನಡಿಗೆ, ಉದ್ದನೆಯ ಕೂಡು ದಂತದಿಂದ ಭೋಗೇಶ್ವರ ಆನೆ ವನ್ಯ ಪ್ರಿಯರಿಗೆ ಇಷ್ಟವಾಗಿತ್ತು ಅದರ ಸಾವಿನ ಸುದ್ದಿ ತಿಳಿದು ಕಬಿನಿ ಹಿನ್ನೀರಿಗೆ ಬರುವ ಪ್ರವಾಸಿಗರು ತುಂಬಾ ಬೇಸರಗೊಂಡಿದ್ದರು. ಆದರೆ ಇದೇ ಭೋಗೇಶ್ವರ ಇರುತ್ತಿದ್ದ ಅರಣ್ಯ ಪ್ರದೇಶದಲ್ಲಿ ಅದೇ ರೀತಿಯ ಕೂಡು ದಂತದ 40ರಿಂದ 45 ವರ್ಷ ವಯಸ್ಸಿನ ಜೂನಿಯರ್ ಭೋಗೇಶ್ವರನ ದರ್ಶನವಾಗಿದೆಇದರಿಂದ ಪ್ರವಾಸಿಗರು ಕುಶ್ ಆಗಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ತಾವರಗಟ್ಟೆ ಮಹದೇಶ್ವರ ದೇವಸ್ಥಾನ ಹಿಂಭಾಗ ಇರುವ ತಾವರಗಟ್ಟೆ ಕೆರೆಯಲ್ಲಿ ಪ್ರತಿನಿತ್ಯ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿರುವ ಬೃಹತ್ ದಂತ ಆನೆಯ ದರ್ಶನವಾಗಿದೆ
ಅತಿಹೆಚ್ಚು ಆನೆಗಳನ್ನು ಹೊಂದಿರುವ ಬಂಡೀಪುರ ಅರಣ್ಯ ಪ್ರದೇಶದವು ಸಫಾರಿ ಇರುವುದರಿಂದ ಈ ಭಾಗಕ್ಕೆ ಅತಿಹೆಚ್ಚು ಪ್ರವಾಸಿಗರು ಹಾಗೂ ಪ್ರಾಣಿ ಪ್ರಿಯರು ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ಇವರಿಗೆ ಉದ್ದನೆಯ ಕೂಡು ದಂತದ ಆನೆಗಳು ಕಾಣಿಸಿಕೊಳ್ಳುತ್ತದೆ. ಅದನ್ನು ಸಫಾರಿಗೆ ಬಂದ ಜನರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಮೂಲಕ ಅತಿಹೆಚ್ಚು ಪ್ರಚಾರಕ್ಕೆ ಬರುತ್ತವೆ. ಅದೇ ರೀತಿ 70 ವರ್ಷದ ಭೋಗೇಶ್ವರ ಸಾವಿನ ನಂತರ ಅದೇ ರೀತಿಯ ಆನೆ ಜನರಿಗೆ ತನ್ನ ಉದ್ದನೆಯ ಕೂಡು ದಂತದಿಂದ ಆಕರ್ಷಣೆ ಮಾಡುತ್ತಿದ್ದು ಪ್ರವಾಸಿಗರಿಗೆ ಖುಷಿ ತಂದಿದೆ.