
ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಹೇಮಗಿರಿ ಹೆಡ್ ಕ್ವಾರ್ಟರ್ಸ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರ 12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ 6 ಬೆಂಬಲಿತ ಅಭ್ಯರ್ಥಿಗಳು.ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ 6 ಅಭ್ಯರ್ಥಿಗಳು ವಿಜಯಪತಾಕೆ ಹಾರಿಸಿದ್ದಾರೆ . ಚುನಾವಣಾ ಅಧಿಕಾರಿಗಳಾಗಿ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್, ಸಹ ಚುನಾವಣಾ ಅಧಿಕಾರಿಯಾಗಿ ಸೊಸೈಟಿ ಕಾರ್ಯದರ್ಶಿ ಮಹದೇವ್ ಕಾರ್ಯ ನಿರ್ವಹಿಸಿದರು.ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಗಣೇಶ್, ಜಗದೀಶ್, ಮಂಜುನಾಥ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಂಡಿಹೊಳೆ ಹರೀಶ್, ಮಹಿಳಾ ಮೀಸಲು ಕ್ಷೇತ್ರದಿಂದ ಮಂಜಮ್ಮ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸೋಮನಾಯ್ಕ ಜಯಗಳಿಸಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾದ ಬೋರೇಗೌಡ, ಬಿ.ಶ್ರೀಧರ್, ಸಾಲಗಾರರಲ್ಲದ ಕ್ಷೇತ್ರದಿಂದ ದರ್ಶನ್, ಹಿಂದುಳಿದ ವರ್ಗ ಬಿ.ಶಿವೇಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಭಾಗ್ಯಮ್ಮ, ಪರಿಶಿಷ್ಟ ಜಾತಿ ಶಂಕರಯ್ಯ ಜಯಗಳಿಸಿದ್ದಾರೆ.
ಈ ಪೈಕಿ ಬಂಡಿಹೊಳೆ ಹರೀಶ್ ಎರನೇ ಭಾರಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್- ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಮತ ನೀಡಿದ ಮತದಾರರಿಗೆ ಗೆಲುವಿಗೆ ಸಹಕರಿಸಿದ ನಾಯಕರಿಗೆ ಕೃತಜ್ಞತೆ ನಡೆಸಿದರು.
ಸಂದರ್ಭದಲ್ಲಿ ಮುಖಂಡರಾದ ರಂಗನಾಥೇಗೌಡ, ರಮೇಶ್ ವಿಶ್ವನಾಥ್ ದೇವರಸೇಗೌಡ,ಕಾಯಿ ಮಂಜೇಗೌಡ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ನಾಗೇಶ್, ದೇವರಾಜು, ಮಂಜೇಗೌಡ,ವಿಶ್ವನಾಥ್ ಸುರೇಶ್, ಹಾಲು ಉತ್ಪಾದಕರ ನೌಕರರ ಸಂಘದ ತಾಲೂಕು ಅಧ್ಯಕ್ಷ ಕುಪ್ಪಹಳ್ಳಿ ಲವಕುಮಾರ್, ಪ್ರಭುದೇವ್, ಪ್ರಕಾಶ್,ಸಣ್ಣ ಮಂಜೇಗೌಡ, ಮಹೇಶ್, ಲಕ್ಷ್ಮಿಪುರ ಕಿಶೋರ್, ತುಕಾರಾಂ,ಹೆಗ್ಗಡಹಳ್ಳಿ ಕುಮಾರ್, ಯುವ ಮುಖಂಡರಾದ ದೇವರಸೆೇಗೌಡ ರಾಘು, ಪ್ರಮೋದ್, ರಘು, ಹೃತ್ವಿಕ್, ಕಾರ್ತಿಕ್, ಲಕ್ಷ್ಮಿಪುರ ದೀಪು, ಯತೀಶ್,ರಂಗ, ತಾಂಡವಮೂರ್ತಿ, ಪ್ರಸನ್ನ,ಚಂದ್ರ,ರಾಘವೇಂದ್ರ, ಪ್ರವೀಣ್, ಸೇರಿದಂತೆ ಉಪಸ್ಥಿತರಿದ್ದರು.