ಫೆ. ೧೦ ರಂದು ಬ್ರಿಲಿಯಂಟ್ ಶಾಲಾ ಉತ್ಸವ ಕರ‍್ಯಕ್ರಮ
ಪಟ್ಟಣದ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಮೈಲೇಶ್ವರ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಇದರ ವರ‍್ಷಿಕ ಶಾಲಾ ಉತ್ಸವ ಕರ‍್ಯಕ್ರಮ ಫೆಬ್ರವರಿ೧೦ ರಂದು ನಡೆಯಲಿದೆ. ಅಂದು ಸಾಯಂಕಾಲ ೪:೦೦ ಗಂಟೆಗೆ ಬ್ರಿಲಿಯಂಟ್ ಶಾಲಾ ಆವರಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಕೊಡೆಕಲ್ ದುರದುಂಡೇಶ್ವರ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸುವರು. ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿಎಸ್ ಸಾವಳಗಿ ಸಮಾರಂಭವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಎಲ್ಲಾಪುರ(ಉ. ಕ.) ವಿಶ್ವ ರ‍್ಶನ ಕಾಲೇಜ ಪ್ರಾಚರ‍್ಯ ಡಾ. ದತ್ತಾತ್ರೇಯ ಗಾಂವ್ಕರ ಹಾಗೂ ಚಿಕ್ಕೋಡಿಯ ಬಿ.ಸಿ. ಗಂಗಾಲ ಶಿಕ್ಷಣ ಮಹಾವಿದ್ಯಾಲಯ ಪ್ರಾಚರ‍್ಯ ಡಾ. ಸುರೇಶ ಉಕ್ಕಲಿ ಆಗಮಿಸಲಿದ್ದು ತಾಳಿಕೋಟಿ ಎಸ್. ಎಸ್. ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್. ಎಸ್. ಪಾಟೀಲ ಅತಿಥಿಯಾಗಿ ಆಗಮಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ಬಿ. ನಡುವಿನಮನಿ ವಹಿಸುವರು. ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಯು. ಬಿ. ಧರಿಕಾರ. ತಾಳಿಕೋಟಿ ವಲಯ ಶಿಕ್ಷಣ ಸಂಯೋಜಕ ಎಸ್.ಎಸ್. ಹಿರೇಮಠ. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಎಸ್. ಸಜ್ಜನ.ಬ.ಸಾಲವಾಡಗಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ರಾಜು ಮೂರಮಾನ ಸಂಸ್ಥೆ ಉಪಾಧ್ಯಕ್ಷ ಆರ್ ಬಿ ನಡುವಿನಮನಿ ಕರ‍್ಯರ‍್ಶಿ ಎಂ.ಬಿ. ಮಡಿವಾಳರ ನರ‍್ದೇಶಕರಾದ ಎಸ್. ಹೆಚ್. ಪಾಟೀಲ. ಶ್ರೀಮತಿ ಎಲ್. ಎಂ. ಬಿರಾದಾರ. ಶ್ರೀಮತಿ ಎನ್.ಎಸ್. ಗಡಗಿ .ಶಶಿಧರ್ ಎಂ ಬಿರಾದಾರ ಉಪಸ್ಥಿತರಿರುವರು.
ವರದಿ ಸುನೀಲ್ ಎಲ್ ತಳವಾರ
ತಾಳಿಕೋಟಿ