ಇತ್ತೀಚಿನ ಸುದ್ದಿರಾಜ್ಯ

ಪದೇ ಪದೇ ಅಮೆರಿಕಕ್ಕೆ ಹೋಗುವುದು ತಪ್ಪೆಂದು ಗೊತ್ತಿದೆ, ಆದರೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೊಟ್ಟ ಕಾರಣ ಇಲ್ಲಿದೆ

 ಪದೇ ಪದೇ ಅಮೇರಿಕಾಕ್ಕೆ ಹೋಗಿ ತಪ್ಪು ಮಾಡುತ್ತಿದ್ದೇನೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಒಪ್ಪಿಕೊಂಡರು. ಮಂಡ್ಯದಲ್ಲಿ ಮಾತನಾಡಿದ ಅವರು, ಶಾಸಕರಾಗಿ ಆಯ್ಕೆಯಾದ ಏಳು ತಿಂಗಳಲ್ಲಿ ನಾಲ್ಕು ಬಾರಿ ಅಮೇರಿಕಾಗೆ ಹೋಗಿರುವುದು ನಿಜ. ಹೀಗೆ ಮಾಡುವುದು ತಪ್ಪೆಂದು ಗೊತ್ತಿದೆ. ನನ್ನ ಕೆಲವು ವೈಯಕ್ತಿಕ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಿಕೊಳ್ಳಲು ಹೋಗುತ್ತಿದ್ದೇನೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.

ಪದೇ ಪದೇ ಅಮೇರಿಕಾಗೆ ತೆರಳಿದ್ದ ಶಾಸಕರ ಮೇಲೆ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಕ್ಷೇತ್ರದಲ್ಲಿ ಅವರ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಶಾಸಕರು ಜನರ ಕೈಗೆ ಸಿಗುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿದ್ದವು.

ಪದೇ ಪದೇ ಅಮೆರಿಕಕ್ಕೆ ಭೇಟಿ ನೀಡುತ್ತಿರುವುದು ತಪ್ಪೆಂದು ಗೊತ್ತಿದೆ. ಆದರೆ, ಕೆಲವು ವೈಯಕ್ತಿಕ ಸಮಸ್ಯೆಗಳ ಕಾರಣ ಅನಿವಾರ್ಯವಾಗಿದೆ. ನನ್ನ ಹೆಂಡತಿ-ಮಕ್ಕಳು ಇದ್ದು ಅಲ್ಲಿಗೆ ತೆರಳಬೇಕಾಗಿ ಬಂದಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳುತ್ತೇನೆ. ನಾನು ಹೋಗುತ್ತಿರುವುದನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು.

ನಾನು ಅಮೆರಿಕಕ್ಕೆ ತೆರಳಿದ್ದರೂ ಇಲ್ಲಿ ಕೆಲಸ ಮಾಡಲು ತಂಡವನ್ನು ಇಟ್ಟಿದ್ದೇನೆ. ಇಲ್ಲಿ ನನ್ನ ತಂಡದವರು ಆಗಬೇಕಾದ ಕೆಲಸ ಮಾಡುತ್ತಿದ್ದಾರೆ. ನಾವು ಇಲ್ಲಿಯವರೆಗೆ ಬ್ಯಾಂಡೆಡ್ ಹಾಕೋಂಡು ಬರ್ತಿದ್ದೇವೆ. ಕ್ಷೇತ್ರದಲ್ಲಿ ಫೋನ್ ಮಾಡಿ ಹೇಳಿದ್ರೆ ಮಾತ್ರ ಯಾವುದಾದರು ಕೆಲಸ ಆಗೋದು. ನಮ್ಮ ಕ್ಷೇತ್ರದಲ್ಲಿ 5 ರಿಂದ 10 ಸಾವಿರ ಜನಕ್ಕೆ ಕೆಲಸ ಮಾಡಿಕೊಡಲು ಅಷ್ಟೇ ಸಾಧ್ಯ. ಜನರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ನಾನು ಅದನ್ನು ಅಧಿಕಾರಿಗೆ ಹೇಳಿ ಮಾಡಿಸುತ್ತೇನೆ ಅಷ್ಟೆ‌. ಜನರ ಸಮಸ್ಯೆಗಳು ಬೇಗ ಪರಿಹಾರ ಆಗಬೇಕು. ಶಾಸಕನ ಬಳಿ ಬರುವುದಕ್ಕಿಂತ ಸರ್ಕಾರಿ ಕಚೇರಿ ಬಳಿಗೆ ಹೋಗಬೇಕು‌. ವ್ಯವಸ್ಥೆ ಬದಲಾವಣೆಯಾಗಬೇಕು ಎಂದು ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button