ಬಿಸಿಲಿನ ಧಗೆಗೆ ತಂಪೆರೆದ ವರುಣ: ಸಿಡಿಲಿಗೆ ಕಲ್ಪವೃಕ್ಷ ಸುಟ್ಟು ಕರಕಲು
ಗುಂಡ್ಲುಪೇಟೆ: ಮಳೆಯಾಗುತ್ತಿದ್ದ ವೇಳೆ ಸಿಡಿಲ ಬಡಿತಕ್ಕೆ ತೆಂಗಿನ ಮರವೊಂದು ಧಗದಗನೆ ಹೊತ್ತಿಹುರಿದ ಘಟನೆ ತಾಲೂಕಿನ ಭೀಮನಭೀಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣಶೆಟ್ಟಿ ಅವರ ಜಮೀನಿನಲ್ಲಿ ಘಟನೆ ನಡೆದಿದೆ ಸಂಜೆವೇಳೆ ಮಳೆಯೊಂದಿಗೆ ಬಡಿದ ಸಿಡಿಲಿಗೆ ತೆಂಗಿನ ಮರ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ
ಬೇಸಿಗೆಯ ಬಿಸಿಲಿಗೆ ದಣಿದಿದ್ದ ಪಟ್ಟಣದ ಜನತೆಗೆ ವರುಣ ಕೃಪೆ ತೋರಿ ಸುಮಾರು ಅರ್ದಗಂಟೆ
ಕಾಲ ಮಳೆ ಬರುವ ಮೂಲಕ ತಂಪೆರೆದಿದ್ದಾನೆ.
ಗುಂಡ್ಲುಪೇಟೆ ತಾಲ್ಲೂಕಿನ ವಾತವರಣ ಅರೆ ಮಲೆನಾಡಿನ ಹಾಗೇ ಇದ್ದು ಒಂದು ಭಾಗ ಬೇರಂಬಾಡಿ ,ಚನ್ನಮಲ್ಲಿಪುರ ಹೊಂಗಹಳ್ಳಿ ಮತ್ತು ಗೋಪಾಲಪುರದ ಭಾಗಗಳಲ್ಲಿ ಬೇಸಿಗೆಯ ಅವಧಿಯಲ್ಲಿ ಅಷ್ಟೆನು ಬಿಸಿಲಿನ ತಾಪ ತಟ್ಟದೆ ಇರುವುದರಿಂದ ಮಲೆನಾಡಿನ ವಾತಾವರಣ ಕಂಡು ಬರುತ್ತದೆ.
ತಾಲ್ಲೂಕಿನ ಹಂಗಳ,ಬಂಡೀಪುರ ಮಾದಪಟ್ಟಣ.ಸೋಮಹಳ್ಳಿ ಮತ್ತು ಕಬ್ಬಹಳ್ಳಿ ಭಾಗಗಳಲ್ಲಿ ಹೆಚ್ಚಾಗಿ ಒಣ ಹವೆ ವಾತಾವರಣದಿಂದ ಕೂಡಿದೆ.
ಸಂಜೆ ಸುರಿದ ಸಾಧರಣ ಮಳೆಗೆ ವಾತವರಣ ತಂಪಾಗಿದ್ದು ಕೆಂಪು ಮಣ್ಣಿನ ವಾಸನೆ ಮೂಗಿಗೆ ಬಡಿಯುತಿತ್ತು ರಾತ್ರಿಯ ವೇಳೆಗೆ ಶಾಖ ಹೆಚ್ಚಾಗುವ ಸಾಧ್ಯತೆ ಇದೆ.