ತಿ. ನರಸೀಪುರ:-ತುಂಬಲ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಉಮಾ ಅವಿರೋಧವಾಗಿ ಆಯ್ಕೆಯಾದರು
ತಾಲ್ಲೂಕು ತುಂಬಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಸರಸ್ವತಿ ರವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನ ಬಯಸಿ ಉಮಾ. ಒಬ್ಬರನ್ನು ಹೊರೆತು ಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸಿದ ಕಾರಣ ಉಮಾ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಘೋಷಣೆ ಮಾಡಿದರು.
ನೂತನ ಉಪಾಧ್ಯಕ್ಷ ಉಮಾ ಮಾತನಾಡಿ ಗ್ರಾ.ಪಂ.ಅಧ್ಯಕ್ಷರ ಜೊತೆಯಾಗಿ ಸದಸ್ಯರ ವಿಶ್ವಾಸದೊಂದಿಗೆ ಪಂಚಾಯತಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ನಾನು ಈ ಸ್ಥಾನ ಹೊಂದಲು ಕಾರಣ ಕರ್ತರಾದ
ಕಾಂಗ್ರೆಸ್ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ಆದ ಸಿದ್ದರಾಮಯ್ಯ ರವರಿಗೆ ಮತ್ತು ಎಂಎಲ್ ಸಿ ಡಾ.ಯತೀಂದ್ರ ಸಿದ್ರಾಮಯ್ಯ ಸೇರಿದಂತೆ ಎಲ್ಲಾ ಮುಖಂಡರು, ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮಾಜಿ ತಾಪಂ ಅಧ್ಯಕ್ಷ ಅಂದಾನಿ ಮಾತಾಡಿ ಈ ಪಂಚಾಯತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರಣಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವುದರಿಂದ ಸಾಹೇಬರಿಗೆ ಯಾವುದೇ ಕಪ್ಪು ಚುಕ್ಕೆ ಬರದಂತೆ ಕೆಲಸ ಮಾಡಬೇಕು ಹಾಗೂ ರಾಜ್ಯದಲ್ಲೇ ಮಾದರಿ ಗ್ರಾ.ಪಂ ಯಾಗಿ ರೂಪಿಸಲು ತಾವೇಲ್ಲರು ಪಣ ತೋಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಸದಸ್ಯರುಗಳಾದ ಪದ್ಮ, ಬಸವರಾಜು, ರತ್ನಮ್ಮ, ಅನಿತಾ, ಶೇಖರ್, ಕಂಬಯ್ಯ, ಸತೀಶ್, ಚಂದ್ರಶೇಖರ್, ಸುಲೋಚನಾ ಪಿಎಂ, ಮಣಿಯಮ್ಮ ಮುಖಂಡರುಗಳಾದ ಮಾಜಿ ತಾಪo ಅಧ್ಯಕ್ಷ ಅಂದಾನಿ, ಮಂಜುನಾಥ್, ಗುರುರಾಜು ಸಿದ್ದರಾಜು.ಸೋಮನಥಪುರ ಗಣೇಶ್, ಸುರೇಶ,ಮಲ್ಲಿಕಾ., ಮಹೇಶ್., ನಿರಂಜನ್,ಸೇರಿದಂತೆ ಮತ್ತಿತರರು ಇದ್ದರು.