ಇತ್ತೀಚಿನ ಸುದ್ದಿರಾಜ್ಯ
ಡಿಕೆಶಿಯನ್ನು ಭೇಟಿ ಮಾಡಿದ ಕಿಚ್ಚ ಸುದೀಪ್!

ಸಿನಿಮಾ ನಟ ಸುದೀಪ್ ಜೊತೆಗೆ ಕೇವಲ ಸೌಜನ್ಯದ ಭೇಟಿ, ಮಾತುಕತೆ ಅಷ್ಟೇ ಮಾಡಲಾಗಿದೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಸುದೀಪ್ ಭೇಟಿ ವಿಚಾರವಾಗಿ ಸ್ಪಷ್ಟನೆ ನೀಡಿ, ಅವರು ಸಿನಿಮಾದ ವೈಯಕ್ತಿಕ ವಿಚಾರವಾಗಿ ಮಾತನಾಡಲು ಬಂದಿದ್ದರು. ಅದರ ಹೊರತಾಗಿ ಬೇರೇನೂ ಮಾತುಕತೆ ನಡೆದಿಲ್ಲ ಎಂದರು.ನಟ ಸುದೀಪ್ ಅವರ ಭೇಟಿಯ ವಿಚಾರ ಕೇಳಿದಾಗ, “ನಟ ಸುದೀಪ್ ಅವರದ್ದು ಸೌಜನ್ಯಯುತ ಭೇಟಿ. ಚಿತ್ರೀಕರಣಕ್ಕೆ ತೊಂದರೆಯಾದ ಕಾರಣಕ್ಕೆ ಬಂದಿದ್ದರು. ಸಂಬಂಧಪಟ್ಟವರಿಗೆ ತಿಳಿಸುತ್ತೇನೆ ಎಂದು ಹೇಳಿದ್ದೇನೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರು ಒಬ್ಬ ಗೆಳೆಯರಾಗಿ ಬಂದು ಭೇಟಿಯಾಗಿದ್ದಾರೆ” ಎಂದರು.