ಡಾ.ಸಿ.ಎನ್.ಮಂಜುನಾಥ್ ಅವಧಿ ಮುಕ್ತಾಯ, ಯಾರಾಗಲಿದ್ದಾರೆ ಮುಂದಿನ ಜಯದೇವ ಆಸ್ಪತ್ರೆ ನಿರ್ದೇಶಕ?
ಜಯದೇವ ಆಸ್ಪತ್ರೆ ರಾಜಧಾನಿ ಬೆಂಗಳೂರಿನ ಪ್ರಖ್ಯಾತ ಹೃದ್ರೋಗ ಸಂಸ್ಥೆ. ಈ ಆಸ್ಪತ್ರೆ ಇಷ್ಟು ಖ್ಯಾತಿ ಗಳಿಸೋಕ್ಕೆ ಡಾ.ಸಿ.ಎನ್. ಮಂಜುನಾಥ್ ಅವರು ಕೂಡ ಕಾರಣ ಅಂದ್ರೆ ತಪ್ಪಾಗ್ಲಿಕ್ಕಿಲ್ಲ. ಹೃದಯದ ಡಾಕ್ಟರ್ ಅಂತಾನೇ ಫೆಮಸ್ ಆಗಿರುವ ಡಾ.ಸಿ.ಎನ್.ಮಂಜುನಾಥ್ ಅವರ ಅವಧಿ ಈ ತಿಂಗಳ 31 ಕ್ಕೆ ಮುಕ್ತಾಯಗೊಳ್ಳಲಿದೆ.
ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ಕೊಟ್ಟವರು, ತಮ್ಮೊಂದಿಗೆ ಸಂಸ್ಥೆಯನ್ನು ಕಟ್ಟಿಬೆಳೆಸಿದವರು, ಹೃದ್ರೋಗ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ ಡಾ.ಸಿ.ಎನ್.ಮಂಜುನಾಥ್ ಈ ನಾಡು ಕಂಡ ಶ್ರೇಷ್ಠ ಮಟ್ಟದ ಹೃದ್ರೋಗ ತಜ್ಞರು. ಕಳೆದ ಬಾರಿ ಜಯದೇವ ಆಸ್ಪತ್ರೆ ನಿರ್ದೇಶಕರ ಅವಧಿ ಮುಗಿಯುತ್ತಿದೆ ಅಂದಾಗ ಸಾವಿರಾರು ರೋಗಿಗಳು ಆತಂಕಗೊಂಡಿದ್ದರು, ಸಿಬ್ಬಂದಿ ಕಣ್ಣೀರಿಟ್ಟಿದ್ದರು. ಆದರೆ ಆಗಿನ ಬಿಜೆಪಿ ಸರ್ಕಾರ ಇವರ ಸೇವೆಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಿತ್ತು. ಆದರೆ ಈಗಿನ ಸರ್ಕಾರಕ್ಕೆ ಅಂತಹ ಯಾವ ಆಲೋಚನೆಯೂ ಇಲ್ಲದಿರುವುದು ಸ್ಪಷ್ಟವಾಗಿದೆ.
ಡಾ.ಸಿ.ಎನ್.ಮಂಜುನಾಥ್ ಅವರ ಅವಧಿ ಈ ತಿಂಗಳ 31 ಕ್ಕೆ ಮುಕ್ತಾಯಗೊಳ್ಳಲಿದೆ. ಸರ್ಕಾರವೂ ಮಂಜುನಾಥ್ ಅವರ ಅವಧಿಯನ್ನ ಮುಂದುವರೆಸುವು ನಿರ್ಧಾರದಿಂದ ಹಿಂದೆ ಸರಿದಿದ್ದು ಹೊಸ ನಿರ್ದೇಶಕರ ಆಯ್ಕೆಗೆ ಪತ್ರಿಕಾ ಪ್ರಕಟನೆಯ ಮೂಲಕ ಅರ್ಜಿ ಸಲ್ಲಿಕೆಗೆ ತಿಳಿಸಿತ್ತು. ಇದರಂತೆ ನಿನ್ನೆ ಅರ್ಜಿ ಸಲ್ಲಿಕೆಯ ಅವಧಿ ಕೂಡಾ ಮುಗಿದಿದ್ದು ಹತ್ತಾರು ಅರ್ಜಿಗಳು ಕೂಡಾ ಈ ಹುದ್ದೆಗೆ ಬಂದಿವೆ. ಆದ್ರೆ ಈ ನಡುವೆ ಈ ಜಾಗಕ್ಕೆ ಮೈಸೂರಿನ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ದಿನೇಶ್ ಅವರನ್ನು ನೇಮಿಸಲು ಚಿಂತನೆ ನಡೆದಿದೆ. ಎಲ್ಲಾ ಪ್ರೊಸಿಜರ್ ಮುಗಿದಿದೆ ಅಂತಾ ಕೂಡಾ ಹೇಳಲಾಗುತ್ತಿದೆ.