ಆರೋಗ್ಯಇತ್ತೀಚಿನ ಸುದ್ದಿರಾಜ್ಯ
ಟೇಕಲ್ ಗ್ರಾಮದಲ್ಲಿ ಉಚಿತ ರಕ್ತದಾನ ಶಿಬಿರ

ಮಾಲೂರು:- ರಕ್ತದಾನ ಮಹಾದಾನ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು, ನಮ್ಮ ಒಂದೊಂದು ಹನಿರಕ್ತವು ಒಂದೊಂದು ಜೀವವನ್ನು ಬದುಕಿಸುತ್ತದೆ. ಇದರಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ ಎಂದು ಅಕ್ಷರ ತಂಡದ ಪದಾಧಿಕಾರಿಗಳು ತಿಳಿಸಿದರು.
ತಾಲೂಕಿನ ಟೇಕಲ್ ಗ್ರಾಮದಲ್ಲಿನ ಆಶ್ಲೇ ಶಾಲೆ ಹತ್ತಿರ ಅಕ್ಷರ ತಂಡ ಮತ್ತು ಎಸ್ ಎನ್ ಆರ್ ಜಿಲ್ಲಾ ಆಸ್ಪತ್ರೆ ಕೋಲಾರ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಅನೇಕ ದಾನಿಗಳು ರಕ್ತದಾನ ಮಾಡಿದರು. ಈ ಶಿಬಿರದಲ್ಲಿ ಅಕ್ಷರ ತಂಡದ ವತಿಯಿಂದ ಮುಖ್ಯ ಅತಿಥಿಗಳಾದ ಕ್ಯಾಪ್ಟನ್ ಶ್ರೀ ಸಿ.ಎಂ.ರಾಜೇಶ್ ಜಯಸಿಂಹ ಹಾಗೂ ಡಾ.ರೇವತಿ ರವರನ್ನು ಸನ್ಮಾನಿಸಲಾಯಿತು.
ಈ ಶಿಬಿರದಲ್ಲಿ ಮುಖ್ಯ ಅತಿಥಿಗಳಾದ ಕ್ಯಾಪ್ಟನ್ ಶ್ರೀ ಎಂ.ರಾಜೇಶ್ ಜಯಸಿಂಹ, ಡಾ. ರೇವತಿ ವೈದ್ಯಾಧಿಕಾರಿಗಳು ರಕ್ತ ನಿಧಿ ಕೇಂದ್ರ, ಎಸ್ ಎನ್ ಆರ್ ಆಸ್ಪತ್ರೆ ಕೋಲಾರ ಮತ್ತು ಅಕ್ಷರ ತಂಡದ ಎಲ್ಲಾ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.