ಜಿಗಜಿಣಗಿ ಪರ ಮುಖಂಡರಿಂದ ಭರ್ಜರಿ ಪ್ರಚಾರ

ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಣಗಿ ಅವರ ಪರ ಮುಖಂಡ ದಶರಥಸಿಂಗ ಮನಗೂಳಿ ಅವರ ನೇತೃತ್ವದಲ್ಲಿ ಭರ್ಜರಿ ಮತಯಾಚನೆ ಮಾಡಲಾಯಿತು. ಪಟ್ಟಣದ ವಾರ್ಡ ಸಂಖ್ಯೆ 1-2 ರಲ್ಲಿ ಮನೆ ಮನೆಗೆ ತೆರಳಿದೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮತದಾರರಿಗೆ ದೇಶದ ಸುರಕ್ಷತೆ ಹಾಗೂ ಅಭಿವೃದ್ಧಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ವಿಜಯಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಇವರನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡರು.

ಈ ಸಮಯದಲ್ಲಿ ಮುಖಂಡರಾದ ದಶರಥಸಿಂಗ್ ಮನಗೂಳಿ ಕಾಶಿನಾಥ ಮುರಾಳ. ಮುರಿಗೆಪ್ಪ ಸರಶಟ್ಟಿ.ಅಮಿತಸಿಂಗ ಮನಗೂಳಿ. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮುರಾಳ. ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಸುವರ್ಣಾ ಬಿರಾದಾರ. ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ನದೀಮ ಕಡು.ವಿಠಲಸಿಂಗ ಹಜೇರಿ. ನಿತಿನ್ ಬಿಜಾಪುರ ಪ್ರಭು ಗೌಡಗೇರಿ. ರಾಹುಲ ಮೂಲಿಮನಿ. ಮಹೇಶ ಕಾಜಗಾರ. ಮಹಾಂತೇಶ ಪಟ್ಟಣಶೆಟ್ಟಿ. ರಾಜು ಮೂಲಿಮನಿ. ಮಲ್ಲು ಮುಕ್ಕಡ್ತೀಯಾಳ. ರಾಜೇಶ ಗೌಡಗೇರಿ ಸೋಹನ ಹಜೇರಿ. ರಾಹುಲ್ ನರಗುಂದ ಮತ್ತೀತರರು ಇದ್ದರು.