ಜಾತಿ ವ್ಯವಸ್ಥೆಯನ್ನ ನಿರ್ಮೂಲನೆ ಮಾಡಬೇಕು ಎಂದು ಪಣತೊಟ್ಟಿದ ಕನಕದಾಸರು: ತಹಶೀಲ್ದಾರ್ ಕೆ ಮಂಜುನಾಥ್
ಕೊರಟಗೆರೆ;- ದೇಶದಲ್ಲಿ ನಾವೇಲ್ಲ ಒಂದೆ ಜಾತಿ ಎಂದು ಪ್ರತಿಪಾದಿಸಿದ ಮಹಾನ್ ಚೇತನ ಕನಕದಾಸರು, 16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯನ್ನ ನಿರ್ಮೂಲನೆ ಮಾಡಬೇಕು ಪಣತೊಟ್ಟಿದರು. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ ಎಂಬ ಕೀರ್ತನೆ ಸದಾಕಾಲಕ್ಕೂ ಪ್ರಸ್ತುತವಾಗಿದೆ. ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಏರ್ಪಡಿಸಲಾಗಿದ್ದ ದಾಸಶ್ರೇಷ್ಠ ಕನಕದಾಸರ 537 ನೇ ಜಯಂತಿಯನ್ನ ಆಚರಣೆ ಮಾಡಿ ಮಾತನಾಡಿದರು.
ಕಾಗಿನೆಲೆಯ ಆದಿಕೇಶವರಾಯ ಅಂಕಿತ ಮೂಲಕ ಕೀರ್ತನೆಗಳನ್ನ ರಚಿಸಿ, ದಾಸಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ಕನಕದಾಸರ ಜಯಂತಿ . ನವಂಬರ್ 18 ರಂದು ಆಚರಣೆ ಮಾಡಲಾಗುತ್ತದೆ, ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ ಎಂಬ ಕೀರ್ತನೆ ಸದಾಕಾಲಕ್ಕೂ ಪ್ರಸ್ತುತವಾಗಿದೆ. ಮೋಹನ ತರಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತ್ರೆ, ಹರಿಭಕ್ತಸಾರ, ನೃಸಿಂಹ ಸ್ತವ ಕನಕದಾಸರ 5 ಪ್ರಮುಖ ಕಾವ್ಯ ಕೃತಿಗಳು ಎಂದು ತಿಳಿಸಿದರು.
ಸಮುದಾಯದ ಮುಖಂಡ ನಾಗಭೂಷಣ್ ಮಾತನಾಡಿ ಕನಕದಾಸರು ಎಷ್ಟು ದೈವ ಭಕ್ತರು ಎಂದರೆ ಉಡುಪಿ ಶ್ರೀಕೃಷ್ಣರನ್ನೇ ದೇಗುಲದ ಗೋಡೆ ಹೊಡೆದು ಕನಕದಾಸರಿಗೆ ದರ್ಶನ ನೀಡಿದ್ದಾರೆ ಎಂದು ನಾವೇಲ್ಲ ತಿಳಿದುಕೊಂಡಿದ್ದೇವೆ. ಕನಕದಾಸರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡಿಗೆ ಅಪಾರವಾದುದ್ದು, ಸುಮಾರು 316 ಕೀರ್ತನೆಗಳನ್ನ ರಚಿಸಿದ್ದಾರೆ. ಅವರ ಕೀರ್ತನೆಗಳು ಬೋದನೆಗಳು ಇಂದಿಗೂ ಪ್ರಸ್ತುತ, ಪ್ರತಿಯೊಬ್ಬರು ಅದರ ಅರ್ಥವನ್ನ ಅರಿತು ಬಾಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ಅನಿಲ್, ಅಪೂರ್ವ ಮುಖಂಡರಾದ ಮೈಲಾರಪ್ಪ, ವೀರಣ್ಣ, ರಂಗಧಾಮಯ್ಯ,ರಂಗರಾಜು,ಲಕ್ಷ್ಮೀಕಾಂತ್, ಬೈರೇಶ್, ಗಂಗರಾಜು, ದೇವರಾಜು, ಸೌಮ್ಯ ಜಗನ್ನಾಥ್,ರಂಗಶಾಮಯ್ಯ ನಂಜುಂಡಯ್ಯ, ರಾಮಮೂರ್ತಿ, ಲಕ್ಷ್ಮೀಪ್ರಸಾದ್, ಶಿವಕುಮಾರ್ , ಶ್ರೀನಿವಾಸ್, ಕೆಂಚಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.