ಇತ್ತೀಚಿನ ಸುದ್ದಿರಾಜ್ಯ

ಗೃಹ ಸಚಿವರ ಆದೇಶದಂತೆ ವಿಧಾನಸೌಧ ವೀಕ್ಷಿಸಿದ ಸರ್ಕಾರಿ ಶಾಲಾ ಮಕ್ಕಳು.

ಕೊರಟಗೆರೆ ;- ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರ ಅದೇಶದಮೇರೆಗೆ ತಾಲೂಕಿನ ತೋವಿನಕೆರೆ ಸರ್ಕಾರಿ ಶಾಲೆಯ ಮಕ್ಕಳು ವಿಧಾನ ಸೌಧ ವೀಕ್ಷಿಸಿ ಸಚಿವರಿಗೆ ಶಾಲಾ ಮಕ್ಕಳು ಸಂತೋಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ತಾಲೂಕಿನ ತೋವಿನಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯ 106 ಮಂದಿ ವಿದ್ಯಾರ್ಥಿಗಳು ತಮ್ಮ ಶಾಲೆಯ 12 ಮಂದಿ ಶಿಕ್ಷಕರ ನೇತೃತ್ವದಲ್ಲಿ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಗೃಹ ಸಚಿವರ ಆದೇಶದ ಮೇರೆಗೆ ಬೆಂಗಳೂರಿಗೆ ತೆರಳಿ ವಿಧಾನ ಸೌದ ಮತ್ತು ವಿಶ್ವೇಶ್ವರಯ್ಯ ಮ್ಯೂಸಿಯಂ ಯನ್ನು ವೀಕ್ಷಿಸಿದರು, ವಿಧಾನಸೌಧ ವೀಕ್ಷಣೆಯ ವೇಳೆ ತಮ್ಮೋಂದಿಗೆ ಇದ್ದು ವಿಧಾನ ಸೌಧದಲ್ಲಿ ಸಂಪುಟ ಸಭೆ ನಡೆಯುವ ಕಾರ್ಯಕಲಾಪ ಸೇರಿದಂತೆ ಮುಖ್ಯಮಂತ್ರಿಗಳ ಕೊಠಡಿ, ಶಾಸಕರ ಕೊಠಡಿಗಳನ್ನು ವೀಕ್ಷಿಸಲು ಸಹಕರಿಸಿ ವಿವರಣೆ ನೀಡಿದ ಗೃಹ ಸಚಿವರ ವಿಶೇಷ ಕರ್ತವ್ಯಾದಿಕಾರಿ ಲತಾ ರವರು ಮಕ್ಕಳೊಂದಿಗೆ ಇದ್ದು ಸಹಕರಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರ ಮಾರ್ಗದರ್ಶನದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಪುಸ್ತಕ ನೀಡುವುದರೊಂದಿಗೆ ಊಟದ ವ್ಯವಸ್ಥೆ ಮಾಡಿದರು.
ವಿಧಾನ ಸೌಧ ವೀಕ್ಷಣೆ ಮಾಡಿ ಸಂತೋಷ ವ್ಯಕ್ತ ಪಡಿಸಿ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಗೆ ಶಾಲಾ ಮಕ್ಕಳು, ಇದರೊಂದಿಗೆ ಗ್ರಾಮೀಣ ಭಾಗದ ಮಕ್ಕಳು ವಿಧಾನ ಸೌಧ ವೀಕ್ಷಣೆಗೆ ಅನುವುಮಾಡಿಕೊಟ್ಟ ಸಚಿವರಿಗೆ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕರು ಅಭಿನಂದಿಸಿದರು. ಶಾಲಾ ಮಕ್ಕಳ ವಿಧಾನಸೌಧಾ ವೀಕ್ಷಣಾ ಸಮಯದಲ್ಲಿ ಕಾಂಗ್ರೆಸ್ ಮುಖಂಡ ನಿಕೇತ್ ರಾಜ್ ಮೌರ್ಯ, ಶಾಲೆಯ ಮುಖ್ಯ ಶಿಕ್ಷಕ ಸಿದ್ದಪ್ಪ, ಶಿಕ್ಷಕರುಗಳಾದ ರಂಗನಾಥ್, ಧನಂಜಯ, ರತ್ನಾದೇವಿ, ಶೈಲಾ, ರಮ್ಯ, ನಾಗರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ವಾಜೀದ್, ವಸಂತ, ಶ್ವೇತ, ನಳಿನಾ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button