ಗುರುವಾರದಿಂದ ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ನಿಕಟಪೂರ್ವ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಶುಕ್ರವಾರ ಬೇಟಿ
ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನ ಸೌಧ ಆವರಣದಲ್ಲಿರುವ ತಾಲೂಕಿನ ಕುಂಟೋಜಿ ಹಾಗೂ ಬಿದರಕುಂದಿ ಗ್ರಾಮದ ರೈತರು ಹಾಗೂ ಮುಖಂಡರು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಸರಕಾರ ಎಂದು ಭೋಜಾ ಹೆಸರನ್ನು ಕೈಬಿಡಬೇಕೆಂದು ಆಗ್ರಹಿಸಿ ಗುರುವಾರದಿಂದ ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ನಿಕಟಪೂರ್ವ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಶುಕ್ರವಾರ ಬೇಟಿ ನೀಡಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಮಾತನಾಡಿದರು.
(ಬಾಕ್ಸ್ ಫೇಜ್ )
ಮುದ್ದೇಬಿಹಾಳ: ರಾಜ್ಯದಲ್ಲಿ
ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಬಡವರ, ರೈತ ವಿರೋಧಿ, ಹಿಂದೂ ವಿರೋಧಿ ಸರಕಾರವಾಗಿದೆ ಕಳೇದ ಎರಡೇ ತಿಂಗಳಲ್ಲಿ ರಾಜ್ಯದಲ್ಲಿ ಶೇಕಡಾ ೩೮ ರಷ್ಟು ರೈತರ ಜಮೀನುಗಳ ಮೇಲೆ ವಕ್ಫ್ ಸರಕಾರ ಎಂದು ನಮೂದಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ. ಸರಕಾರದ ಈ ನೀತಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಮಾತ್ರವಲ್ಲದೇ ಈ ಕೂಡಲೇ ರೈತರ ಜಮೀನುಗಳ ಉತಾರದಲ್ಲಿ ನಮೂದಿಸಿದ ವಕ್ಪ್ ಸರಕಾರ ಎಂಬುದನ್ನು ತೆಗೆದು ರೈತರ ಹಕ್ಕು ಬಿಟ್ಟು ಕೋಡಬೇಕು ಇಲ್ಲದಿದ್ದರೇ ರೈತರೊಂದಿಗೆ ಬೀದಿಗಿಳಿದು ಇಡೀ ರಾಜ್ಯದಾಧ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ನಿಕಟಪೂರ್ವ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ವಾಗ್ದಾಳಿ ನಡೆಸಿದರು
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನ ಸೌಧ ಆವರಣದಲ್ಲಿರುವ ತಾಲೂಕಿನ ಕುಂಟೋಜಿ ಹಾಗೂ ಬಿದರಕುಂದಿ ಗ್ರಾಮದ ರೈತರು ಹಾಗೂ ಮುಖಂಡರು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಸರಕಾರ ಎಂದು ಭೋಜಾ ಹೆಸರನ್ನು ಕೈಬಿಡಬೇಕೆಂದು ಆಗ್ರಹಿಸಿ ಗುರುವಾರದಿಂದ ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಬೇಟಿ ನೀಡಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಮಾತನಾಡಿದ ಅವರು.
ಮೊದಲಿನಂತೆ ಮುಖ್ಯಮಂತ್ರಿ ಸಿದ್ರಾಮಯ್ಯನವರು ಸಧ್ಯ ಉಳಿದಿಲ್ಲ ಸಧ್ಯ ಅವರು ಮೂಡಾ ಹಗರಣದಲ್ಲಿ ಸಿಲುಕಿಕೊಂಡಾಗಿನಿಂದ ಬುದ್ದೀ ಬ್ರಮಣಿಯಾದಂತೆ ಕಾಣಿಸುತ್ತದೆ ವಿಚಿತ್ರ ಆಡಳಿತ ನಡೆಸುತ್ತಿದ್ದಾರೆ ಇವರಿಂದ ಉತ್ತಮ ಜಿನಪರ ಆಡಳಿತ ನೀರಿಕ್ಷೀಸಲು ಸಾಧ್ಯವಿಲ್ಲದಂತಾ ವಾತಾವರಣ ನಿರ್ಮಾಣಗೊಂಡಿದೆ. ರಾಜಕಾರಿಣಿಗಳ ಹಾಗೂ ವಿರೋಧ ಪಕ್ಷದವರ ಮೇಲೆ ದ್ವೇಷದ ರಾಜಕಾರಣ ಮಾಡಲಿ ಅದನ್ನು ಎದುರಿಸುವ ತಾಕತ್ತು ಹೊಂದಿರುತ್ತಾರೆ ಆದರೇ ದೇಶಕ್ಕೆ ಅನ್ನು ಕೊಡುವ ರೈತರ ಮೇಲೆ ದ್ವೇಷದ ರಾಜಕಾರಣ ಪ್ರಾರಂಭಿಸಿರುವುದು ಯಾವ ನ್ಯಾಯ,?
ವಸತಿ ಸಚಿವ ಜಮೀರಹ್ಮದ ಖಾನ ಅವರು ವಿಜಯಪುರ ಜಿಲ್ಲೆಗೆ ಬಂದಾಗ ಸ್ವತಃ ಮುಖ್ಯಮಂತ್ರಿ ಸಿದ್ರಾಮಯ್ಯನವರೇ ಹಿಂದೂ ಮಠಗಳ, ದೇವಸ್ಥಾನಗಳ, ರೈತರ ಜಮೀನುಗಳ ಮೇಲೆ ವಕ್ಫ್ ಸರಕಾರ ಎಂದು ಸೇರ್ಪಡೆ ಮಾಡಬೇಕೇಂದು ಆದೇಶಿಸಿದ್ದಾರೆ ಕಾರಣ ಅಧಿಕಾರಿಗಳು ವಕ್ಫ್ ಎಂದು ನಮೂದಿಸಿ ಎಂದು ತಿಳಿಸುತ್ತಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ಭಾರತಿಯ ಜನತಾ ಪಕ್ಷ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರವರ ನೇತೃತ್ವದಲ್ಲಿ ಸತ್ಯ ಶೋಧನಾ ಸಮೀತಿ ಪ್ರಾರಂಭಿಸಿ ಬಿಜೆಪಿ ಪಕ್ಷ ಹಾಗೂ ವಿವಿಧ ಮಠಾಧೀಶರು, ರೈತಪರ ಸಂಘಟನೆಗಳು ಈ ಕಾಂಗ್ರೇಸ್ ಸರಕಾರ ಜನ ವಿರೋಧಿ ರೈತ ವಿರೋಧಿ ನೀಲುವುಗಳ ಬಗ್ಗೆ ಹೋರಾಟಗಳನ್ನು ಕೈಗೊಂಡು ರೈತರ ಪರವಾದ ಧ್ವನಿ ಎತ್ತುವಲ್ಲಿ ಮುಂದಾದಾರರೂ ಆಗ
ಮುಖ್ಯಮಂತ್ರಿ ಸಿದ್ರಾಮಯ್ಯನವರ ಅಧಿಕಾರಿಗಳ ಸಭೆ ಕರೆದು ರೈತರ ಪಹಣಿಯಲ್ಲಿ ವಕ್ಫ್ ಸರಕಾರ ಎಂದು ನಮೂದಿಸಿದ್ದು ಕಂಡುಬಂದರೆ ಅಂತಹ ಪ್ರಕರಣಗಳನ್ನು ಗಂಭಿರವಾಗಿ ಪರಿಗಣಿಸಿ ಈ ಕೂಡಲೆ ವಕ್ಫ್ ಸರಕಾರ ಇದ್ದದ್ದು ಕಂಡುಬಂದರೆ ಆ ಹೆಸರನ್ನು ತೆಗೆದು ಹಾಕಬೇಕು ಎಂದು ಸೂಚಿಸುತ್ತಾರೆ ಯಾವೂದು ಸತ್ಯ ಯಾವೂದು ಸುಳ್ಳು ಎಂಬುದನ್ನು ರೈತರೇ ಅರ್ಥೈಸಿಕೊಳ್ಳಬೇಕು.
ಸಧ್ಯ ತಾಲೂಕಿನ ಕುಂಟೋಜಿ ಹಾಗೂ ಬಿದರಕುಂದಿ ಗ್ರಾಮಗಳ ರೈತರು ಕೂಡಾ ತಮಗೂ ಹೀಗೇ ಅನ್ಯಾಯವಾಗಿದೆ ನಮಗೆ ನ್ಯಾಯ ನೀಡಿ ಎಂದು ತಹಶಿಲ್ದಾರವರಿಗೆ ಮನವಿ ಸಲ್ಲಿಸಿದರೂ ಸಂಬಂಧ ಪಟ್ಟ ತಹಶಿಲ್ದಾರವರು ರೈತರ ಬೇಡಿಕೆಗೆ ಸ್ಪಂದಿಸದೇ ಕ್ಯಾರೆ ಎನ್ನುತ್ತಿಲ್ಲ ಅಧಿಕಾರಿಗಳು ಯಾರದೋ ಒಬ್ಬರ ಕೈಗೊಂಬೆಯಂತೆ ಆಡಳಿತ ನಡೆಸಬೇಡಿ ಜನರ ಪರವಾಗಿ ಆಡಳಿತ ನಡೆಸಿ. ಯಾವ ರೈತರಿಗೂ ನೋಟಿಸ ನೀಡದೇ ಏಕಾಏಕಿ ವಕ್ಫ್ ಸರಕಾರ ಎಂದು ರೈತರ ಆಸ್ತಿಯ ಪಹಣಿಯಲ್ಲಿ ನಮೂದಿಸುವುದು ಸರಿಯಲ್ಲ ಇದು ರೈತರ ಆಸ್ತಿಯೇ ವಿನಃ ಸಚಿವ ಜಮೀರಹಮ್ಮದ ಅವರ ಅಪ್ಪನ ಆಸ್ತಿಯಲ್ಲ ಎಂದು ಹರಿಹಾಯ್ದರು.
ಇಂತಹ ಪ್ರಕರಣ ಬಗ್ಗೆ ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಸರ್ವ ಪಕ್ಷಗಳ ಜಂಟಿ ಆಯೋಗ ಸಮೀತಿ ರಚಿಸಿ ಎಲ್ಲೇಲ್ಲಿ ಯಾವ ಯಾವ ರಾಜ್ಯದಲ್ಲಿ ಈರೀತಿ ಅಕ್ರಮವಾಗಿ ರೈತರ ಆಸ್ತಿಗಳನ್ನು ಲೋಟಿ ಹೋಡುತ್ತಿವೆ ಎಂಬುದನ್ನು ಅರಿತು ಜಗದಂಬಿಕಾ ಪೌಲ್ ಎನ್ನುವವರನ್ನು ಆ ಸಮೀತಿ ಅಧ್ಯಕ್ಷರನ್ನಾಗಿ ಮಾಡಿ ತನಿಖೆ ನಡೆಸಿ ಅಂತಹವುಗಳನ್ನು ತಡೆಗಟ್ಟುವ ಮೂಲಕ ರೈತರಿಗೆ ನ್ಯಾಯ ಒದಗಿಸಲು ಕೇಂದ್ರದ ನರೇಂದ್ರ ಮೋದಿಯವರ ಸರಕಾರ ಮುಂದಾಗಿದೆ ಕಾರಣ ಯಾವ ರೈತರು ಧೈರ್ಯ ಕಳೆದುಕೊಳ್ಳಬಾರದು ಎಂದರು.
ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ಮತಕ್ಷೇತ್ರದಲ್ಲಿನ ಅಭಿವೃದ್ಧಿಗಾಗಿ ನಮ್ಮ ಸರಕಾರದ ಅವಧಿಯಲ್ಲಿ ನಾನು ತಂದಿರುವ ಒಂದೂವರೇ ಸಾವಿರ ಕೋಟಿ ರೂಗಳ ಅನುದಾನ ಬಾಕಿ ಉಳಿದಿದೆ ಆದರೇ ಸಧ್ಯ ಕಾಂಗ್ರೇಸ್ ಶಾಸಕರಾದಾಗಿನಿಂದಲೂ ಪಟ್ಟಣ ಸೇರಿದಂತೆ ಮತಕ್ಷೇತ್ರದಲ್ಲಿ ಒಂದು ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಪಟ್ಟಣದ ಕೆರೆ ಸುತ್ತಲೂ ಯಾರೂ ಮನೆ ಕಟ್ಟಬಾರದು ಎಂದು ಸುಪ್ರಿಂ ಕೋರ್ಟ ಆದೇಶವಿದೇ ಆದರೇ ಒಂದಿAಚು ಜಾಗೆ ಬಿಡದಂತೆ ಬಹುತೇಕ ಜನರು ಮನೆ ಕಟ್ಟಿಕೊಂಡು ಒತ್ತುವರಿ ಮಾಡಿಕೊಂಡಿದ್ದಾರೆ ಅವರನ್ನು ತೆರವುಗೊಳಿಸಲು ಸಾಧ್ಯವಿಲ್ಲದೇ ಹಿಂದೂ ದಲಿತ ಸಮೂದಾಯದವರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೇ ಅಂಹತ ಮನೆಗಳನ್ನು, ಪುಟ್ಬಾತ್ ಮೇಲೆ ಹಣ್ಣು, ತರಕಾರಿ, ಹೂ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಬೀದಿ ವ್ಯಾಪಾರಸ್ತರ ಬಡವರ ಅಂಗಡಿಗಳನ್ನು ಪೋಲಿಸ್ ತಂಡವನ್ನು ಕರೆಯಿಸಿ ಅಂತಹ ಮನೆಗಳನ್ನು ರಾತ್ರೋರಾತ್ರಿ ಜೇಸಿಬಿ ಯಿಂದ ತೆರವುಗೊಳಿಸಿದ್ದಿರಿ. ಯಾಕೆಂದರೇ ಆ ಸಮೂದಾಯ ಕಾಂಗ್ರೇಸ್ಸಿನ ಓಟ ಬ್ಯಾಂಕ ಅಲ್ವಾ ಅದಕ್ಕೆ ಅವುಗಳನ್ನು ಬಿಟ್ಟು ಬರಿ ಹಿಂದೂಗಳನ್ನು ಟಾರ್ಗೇಟ ಮಾಡಿ ಅನ್ಯಾಯ ಧೌರ್ಜನ್ಯ ನಡೆಸುತ್ತಿದ್ದಿರಿ, ಬಜಾರಲ್ಲಿನ ಕೆಲ ಪುಡಾರಿಗಳಿದ್ದರಲ್ಲ ಎಲ್ಲಿದ್ದಿರಿ, ಯಾಕೇ ಬಡವರ ಪರ ನಿಲ್ಲುತ್ತಿಲ್ಲ ನೀವೇ ನಿಂತು ಈಗೀನ ಶಾಸಕರಿಗೆ ಓಟ ಹಾಕಿಸಿದ್ದರಲ್ಲಿ ಸಧ್ಯ ಪರಿಸ್ಥಿತಿ ಏನಾಗಿದೆ ಬಡವರ ಮೇಲೆ ಅನ್ಯಾಯ ನಡೆಯುತ್ತಿದ್ದರೂ ಎಲ್ಲ ಮಲಗಿಕೊಂಡಿದ್ದಿರಾ,? ಒಂದಾದರೂ ಅಭಿವೃದ್ಧಿ ಕಾಮಗಾರಿ ಮಾಡಿದ್ದಿರಾ, ಒಂದು ರಸ್ತೆ ಮಾಡೋ ಕಾಗಿಲ್ಲ ನಿಮ್ಮಿಂದ ಬರಿ ಬಡವರ ಹೊಟ್ಟೆ ಮೇಲೆ ಹೊಡೆಯೋದೆ ನಿಮ್ಮ ಉದ್ದೇಶನಾ,? ಹೀಗೆ ಬಡವರ ಮೇಲೆ ಆಗುತ್ತಿರುವ ಅನ್ಯಾಯವನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ಸ್ವಭಾವ ನನ್ನದಲ್ಲ ನಾನು ಆರೋಗ್ಯವಂತನಾಗಿ ಗುಣಮುಖನಾಗಿ ಬಂದಮೇಲೆ ನಿಮ್ಮ ಮುಖವಾಡ ಕಳಚುತ್ತೇನೆ ಬಡ ಹಿಂದೂಗಳ ರಕ್ಷಣೆಗೆ ನಿಲ್ಲುತ್ತೇನೆ.
ಈ ವೇಳೆಮುಖಂಡರಾದ ಮುನ್ನಾಧನಿ ನಾಡಗೌಡ, ಕೆಂಚಪ್ಪ ಬಿರಾದಾರ, ಗುರುಲಿಂಗ ಸುಳ್ಳಳ್ಳಿ,ನಾಗಲಿಂಗಯ್ಯಾ ಮಠ, ರವಿ ಜಗಲಿ ಬಸಯ್ಯ ಮಠ, ಸಂಗಣ್ಣ ಕುಂಬಾರ, ರಮೇಶ ಉಗರಗೋಳ, ಬಸವರಾಜ ಕೋಳುರ, ಪಾಶ್ಯಾಜಾನಿ ರಕ್ಕಸಗಿ, ಚಂದ್ರಶೇಖರ ಕೋಳುರ, ಸಿದ್ರಾಮ ಕೋಳುರ, ಸೇರಿದಂತೆ ಹಲವರು ಇದ್ದರು.