ಇತ್ತೀಚಿನ ಸುದ್ದಿರಾಜ್ಯ

ಗುಂಡ್ಲುಪೇಟೆ:ಬಂಡೀಪುರದಲ್ಲಿ ವಾರ್ಷಿಕವಾಗಿ ಇಪ್ಪತ್ತು ಕೋಟಿ ಆದಾಯದಲ್ಲಿ ನಂಬರ್ ಒನ್ ಸ್ದಾನ ಬಂಡೀಪುರ‌ಪಡೆದಿದೆ.

ದೇಶದ ಪ್ರತಿಷ್ಠಿತ ಹುಲಿ ಸಂರಕ್ಷಿತಾರಣ್ಯ50 ವರ್ಷದ ಸಂಭ್ರಮಾಚರಣೆ ಹಿನ್ನಲೆ ದೇಶದ ಪ್ರಧಾನಿ ನಮೋ ಈ ಅರಣ್ಯದಲ್ಲಿ ಸಫಾರಿ ನಡೆಸಿ ಹೋಗಿದ್ದರು. ಅಲ್ಲಿಂದ ಬಂಡೀಪುರದ ಚಾರ್ಮ್ ಸಂಪೂರ್ಣ ಹೋಗಿದೆ.ಸಫಾರಿಗೆ ಆಗಮಿಸುವರ ಸಂಖ್ಯೆಯೂ ಹೆಚ್ಚಿದ್ದು,ಆದಾಯ ಕೂಡ ಹಿಂದಿಗಿಂತಲೂ ಡಬಲ್ ಆಗ್ತಿದೆ.

ಹುಲಿಗಳ ನಾಡು ಎಂದು ಕರೆದಿಕೊಳ್ಳುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ದೇಶದ ಪ್ರಧಾನಿ ಮೋದಿ ಒಂದೂವರೆ ತಾಸು ಸಫಾರಿ ನಡೆಸಿ ಹೋಗಿದ್ದರು.ಇದೀಗಾ ಅವರು ಸಫಾರಿ ನಡೆಸಿ ಹೋದ ಬಳಿಕ ಬಂಡೀಪುರದ ಚಿತ್ರಣವೇ ಕಂಪ್ಲೀಟ್ ಬದಲಾಗಿದೆ.ದೇಶದ ವಿವಿಧ ರಾಜ್ಯಗಳು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದಲೂ ವನ್ಯ ಪ್ರಾಣಿ ವೀಕ್ಷಣೆಗೆ ಹಾಗೂ ಬಂಡೀಪುರದ ಸೌಂದರ್ಯ ಕಣ್ತುಂಬಿಕೊಳ್ಳಲೂ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಪ್ರವಾಸಿಗರು ಬಂಡೀಪುರಕ್ಕೆ ಬರುತ್ತಿದ್ದಾರೆ. ಕಾಡು ಕೂಡ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಒಳ್ಳೆಯ ನೇಚರ್ , ಮೈ ರೋಮಾಂಚನ ಗೊಳಿಸುವ ಮಂಜಿನ ನಡುವೆ ಸಫಾರಿ ಗೆ ಹೋದ್ರೆ ಕಾಣಾ ಸಿಗುತ್ತಿರುವ ಪ್ರಾಣಿಗಳು ಪ್ರವಾಸಿಗರಿಗೆ ಖುಷಿ ನೀಡಿದಂತೆ ಇದೆ. ಹಾಗಾಗಿ ಸಫಾರಿ ಮಾಡಿದ ಪ್ರವಾಸಿಗರು ಮತ್ತೆ ಮತ್ತೆ ನಾವು ಬಂಡೀಪುರಕ್ಕೆ ಕಾಡಿಗೆ ಬರ್ತಿವಿ, ಸ್ನೇಹಿತರನ್ನು ಕರೆದುಕೊಂಡು ಬರ್ತಾಇದ್ದಾರೆ. ಇದರಿಂದ ಬಂಡೀಪುರ ಆದಾಯದಲ್ಲೂ ಕೂಡ ಏರಿಕೆಯಾಗಿದ್ದು ರಾಜ್ಯದಲ್ಲಿ ನಂಬರ್ ಓನ್ ಆಗಿದೆ.ರಾಜ್ಯದಲ್ಲಿ ಐದು ಹುಲಿ ಸಂರಕ್ಷಿತಾರಣ್ಯವಿದೆ. ನಾಗರಹೊಳೆ, ಬಿಆರ್ಟಿ, ಮಲೆ ಮಹದೇಶ್ವರ ವನ್ಯಧಾಮ, ಭದ್ರಾ ಟೈಗರ್ ರಿಸರ್ವ್ ಸೇರಿ ಎಲ್ಲಾ ಕಡೆಯೂ ಸಫಾರಿ ಕೇಂದ್ರವಿದ್ದು ಬೇರೆ ಎಲ್ಲಾ ಸಫಾರಿ ಕೇಂದ್ರಗಳಿಗಿಂತ ಬಂಡೀಪುರಕ್ಕೆ ಅತಿ ಹೆಚ್ಚಿನ ಪ್ರವಾಸಿಗರು ಈ ವರ್ಷ ಸಫಾರಿಗೆ ಬಂದಿದ್ದಾರೆ.

ಬಂಡೀಪುರಕ್ಕೆ ಪ್ರತಿ ವರ್ಷ 8 ರಿಂದ 9 ಕೋಟಿ ರೂಪಾಯಿಯಷ್ಟು ಆದಾಯ ಹರಿದು ಬಂದಿದೆ.ಆದ್ರೆ ಈ ವರ್ಷ ಪ್ರಧಾನಿ ಮೋದಿ ಸಫಾರಿ ಬಳಿಕ ಆದಾಯ ಡಬಲ್ ಆಗಿದ್ದು 20 ಆದಾಯಗಳಿಸಿದೆ
2023 ಜನವರಿರಿಂದ ಡಿಸೆಂಬರ್31 ವರಗೆ 1 ಲಕ್ಷ 46 ಸಾವಿರದ500 ,ಜನರು ಬಂಡೀಪುರ ಸಫಾರಿ ವಿಕ್ಷಣೆ ನಡೆಸಿದ್ದಾರೆ ವರಮಾನದಲ್ಲಿ ರಾಜ್ಯದ ಎಲ್ಲಾ ಸಫಾರಿ ಕೇಂದ್ರಗಳಿಗೆ ಹೋಲಿಕೆ ಮಾಡಿದ್ರೆ ಬಂಡೀಪುರವೇ ನಂಬರ್ ಓನ್ ಹುಲಿ ಸೇರಿದಂತೆ ಪ್ರಾಣಿಗಳ ದರ್ಶನ ಪ್ರವಾಸಿಗರಿಗೆ ಸಿಕ್ತಿದ್ದು ಬಂಡೀಪುರದ ಆದಾಯ ಮತ್ತೇ ಹೆಚ್ಚಾಗುತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪೀಯ ಎರಡು ರಾಷ್ಟ್ರೀಯ ಹೆದ್ದಾರಿ ಗಳು ವ್ಯಾಪೀಯ ಮೇಲುಕಾಮನಹಳ್ಳಿ, ಕೆಕ್ಕನಹಳ್ಳಿ ಮದ್ದೂರು ಹಾಗೂ ಮೂಲೆಹೊಳೆ ಚೆಕ್ ಗಳಲ್ಲಿ ಚಾಮರಾಜನಗರ ಜಿಲ್ಲೆಯ ಪ್ರವಾಸಿಗರು ಹೊರತು ಪಡಿಸಿ ಉಳಿದ ವಾಹನ ಸವಾರುಗಳಿದ ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತಿದೆ ಅಲ್ಲದೆ ಬಂಡೀಪುರ ವಸತಿ ಗೃಹಗಳು ಹಾಗೂ ಸಫಾರಿಯಿಂದ 20 ಕೋಟಿ ಆದಾಯ ಬಂದಿದೆ

ಬಂಡೀಪುರ ಇತಿಹಾಸದಲ್ಲಿ ವಾರ್ಷಿಕವಾಗಿ ವಸತಿಗೃಹ ಪ್ರವೇಶ ಶುಲ್ಕ ಹಾಗೂ ಸಫಾರಯಿಂದ 2೦ ಕೋಟಿ ಆದಾಯ ಬಂದಿದೆ ಹಿಂದಿನ ಸಾಲಿಗೆ ಹೋಲಿಕ ಮಾಡಿದರೆ ಈ ಬಾರಿ ಡಬಲ್ ಆದಾಯ ಬಂಡೀಪುರಕ್ಕೆ ಹರಿದು ಬಂದಿದೆ ಎಂದು ಬಂಡೀಪುರ ಸಿ.ಎಫ್.ಡಾ.ರಮೇಶ್ ಕುಮಾರ್ ತಿಳಿಸಿದ್ದಾರೆ

ಒಟ್ನಲ್ಲಿ ಪ್ರಕೃತಿಯ ಸೌಂದರ್ಯ ಹಾಗೂ ವನ್ಯ ಪ್ರಾಣಿಗಳ ದರ್ಶನಕ್ಕೆ ಪ್ರವಾಸಿಗರ ದಂಡು ಬಂಡೀಪುರಕ್ಕೆ ಹರಿದು ಬಂದಿದ್ದು,ಪ್ರಧಾನಿ ಮೋದಿ ಸಫಾರಿ ಬಳಿಕ ರಾಜ್ಯದ ಮೂಲೆ ಮೂಲೆ ಹಾಗೂ ದೇಶದ ನಾನಾ ಭಾಗದ ಪ್ರವಾಸಿಗರಿಗೂ ಬಂಡೀಪುರದ ಸಫಾರಿ ಬಗ್ಗೆ ಗೊತ್ತಾಗಿದ್ದು,ಮುಂದಿನ ದಿನಗಳಲ್ಲಿ ಮತ್ತಷ್ಟು ಆದಾಯದ ನಿರೀಕ್ಷೆಯಲ್ಲಿದ್ದಾರೆ ಬಂಡೀಪುರ ಅರಣ್ಯಾಧಿಕಾರಿಗಳು.

Related Articles

Leave a Reply

Your email address will not be published. Required fields are marked *

Back to top button