ಇತ್ತೀಚಿನ ಸುದ್ದಿ
Trending

ಖ್ಯಾತ ಜ್ಯೋತಿಷಿ ಗಾಯತ್ರಿ ದೇವಿ ಅವರಿಂದ ವಿಶ್ವಾವಸು ಸಂವತ್ಸರ ಯುಗಾದಿ ಭವಿಷ್ಯ

ಮಾಡರ್ನ್ ಅಸ್ಟ್ರಾಲಜಿ ಎಂಬ ಜ್ಯೋತಿಷ್ಯ ಮಾಸಪತ್ರಿಕೆ ಇಂಗ್ಲಿಷ್ ನಲ್ಲಿ ಹೊರಬರುತ್ತದೆ. ಇದು ಬೆಂಗಳೂರು ಮೂಲದ್ದಾಗಿದ್ದು, ಗಾಯತ್ರಿ ದೇವಿ ವಾಸುದೇವ್ ಅವರು ಇದರ ಸಂಪಾದಕಿ. ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆಯೇ ಅವರಿಗೆ ಐವತ್ತು ವರ್ಷಕ್ಕೂ ಹೆಚ್ಚು ಅನುಭವ ಇದೆ. ಯುಗಾದಿ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ವೆಬ್ ಸೈಟ್ ಅವರನ್ನು ಸಂದರ್ಶನ ಮಾಡಿದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ನಡೆಯಬಹುದಾದ ವಿದ್ಯಮಾನಗಳ ಕುರಿತು ವೈದಿಕ ಜ್ಯೋತಿಷ್ಯ ಪದ್ಧತಿಯಲ್ಲಿ ಭವಿಷ್ಯ ನುಡಿದಿದ್ದಾರೆ. ಆ ವಿವರಗಳು ಇಲ್ಲಿವೆ.ಶುಭವಾದದ್ದು ನಡೆಯುವಾಗ ಎಲ್ಲರಿಗೂ ಸಂತೋಷವೇ. ಆದರೆ ಅಹಿತವಾದದ್ದು, ಅಶುಭವಾದದ್ದು ನಡೆಯುವ ಮುನ್ಸೂಚನೆ ಸಿಕ್ಕಿದ್ದರೆ ಎಚ್ಚರಿಕೆ ವಹಿಸಬಹುದಿತ್ತು ಎನಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಜ್ಯೋತಿಷಿ ಗಾಯತ್ರಿ ದೇವಿ ವಾಸುದೇವ್ ಅವರು ತಮ್ಮ ಮಾಡರ್ನ್ ಅಸ್ಟ್ರಾಲಜಿ ಇಂಗ್ಲಿಷ್ ಮಾಸಪತ್ರಿಕೆಯ ಜನವರಿ ಸಂಚಿಕೆಯಲ್ಲಿಯೇ ಮುಂದಿನ ಯುಗಾದಿ, ಅಂದರೆ 2026ನೇ ಇಸವಿಯ ತನಕ ಏನೇನು ಒಳ್ಳೆಯದು ಹಾಗೂ ಕೆಟ್ಟದ್ದು ಸಂಭವಿಸಬಹುದು ಎಂಬ ಬಗ್ಗೆ ಲೇಖನ ಬರೆದಿದ್ದಾರೆ ಹಾಗೂ ಅದು ಪ್ರಕಟವಾಗಿದೆ. ಅದರಲ್ಲಿ ಎಚ್ಚರಿಕೆ ಎನಿಸುವಂಥದ್ದು ಹಾಗೂ ಪ್ರಮುಖ ಎನಿಸುವಂಥದ್ದು ಆಯ್ದು ಇಲ್ಲಿ ಪ್ರಕಟಿಸಲಾಗಿದೆ.

1.ಮಾರ್ಚ್ ಹದಿಮೂರು/ಹದಿನಾಲ್ಕರಂದು ಸಂಭವಿಸುವ ಗ್ರಹಣದಿಂದಾಗಿ ಟರ್ಕಿ- ಟೋಕಿಯೋದಲ್ಲಿ ಭೂಕಂಪನವೂ ಒಳಗೊಂಡಂತೆ ಪರಿಸರ ವಿಕೋಪಗಳು ಸಂಭವಿಸಬಹುದು. ಇದರಿಂದ ಭಾರೀ ಪ್ರಮಾಣದಲ್ಲಿ ಜೀವಹಾನಿ, ಆಸ್ತಿ ಹಾನಿ ಆಗಬಹುದು. ವ್ಯಾಟಿಕನ್ ಸಿಟಿಯಿಂದ ಕೆಟ್ಟ ಸುದ್ದಿ ಬರಬಹುದು. ಉತ್ತರ ಕೊರಿಯಾದ ಆಕ್ರಮಣಕಾರಿ ಧೋರಣೆ ಜಾಗತಿಕವಾಗಿ ಆತಂಕಕ್ಕೆ ಕಾರಣವಾಗಲಿದೆ.

2.ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕು ಸಹ ಗ್ರಹಣ ಇದ್ದು, ಉಕ್ರೇನ್- ರಷ್ಯಾ ಮಧ್ಯದ ಯುದ್ಧ ಇನ್ನಷ್ಟು ಕಾವೇರುತ್ತದೆ. ಉಕ್ರೇನ್ ನ ಝೆಲೆನ್ ಸ್ಕಿಗೆ ಹಿನ್ನಡೆ ಆಗುತ್ತದೆ.

3.ಬ್ರೆಜಿಲ್ ನಲ್ಲಿ ಪ್ರಮುಖ ಭೂಕಂಪನ ಆಗಬಹುದು. ಅಲ್ಲಿನ ಕಾಫೀ ಬೆಳೆಗೆ ಹೊಸದಾದ ಕೀಟಬಾಧೆ ಕಾಣಿಸಿಕೊಳ್ಳಲಿದೆ.

4.ಖಾಲಿಸ್ತಾನಿ ಚಳವಳಿ ತೀವ್ರತೆ ಹೆಚ್ಚಿ, ಕೆನಡಾ ದೇಶಕ್ಕೆ ಸಂಕಷ್ಟ ಎದುರಾಗಲಿದೆ. ಭಾರತ ಸಹ ಒತ್ತಡ ಹಾಕಲಿದೆ.

5.ಅನ್ಯ ಜನಾಂಗ ಅಥವಾ ವಲಸಿಗರ ಮೇಲಿನ ಸಿಟ್ಟಿನಿಂದ ಅಮೆರಿಕದಲ್ಲಿ ಭಾರೀ ಹಿಂಸಾಚಾರ ಹಾಗೂ ಭಾರೀ ಆತಂಕದ ಸನ್ನಿವೇಶ ಕಾಣುವ ಸಾಧ್ಯತೆಗಳಿವೆ.

6.ಅಟ್ಲಾಂಟಿಕ್ ಹಾಗೂ ಆರ್ಟಿಕ್ ಸಾಗರದಲ್ಲಿ ದೊಡ್ಡ ಗ್ಲೇಷಿಯರ್ ಗಳು ಕರಗುವುದಕ್ಕೆ ಆರಂಭವಾಗುವ ಸಾಧ್ಯತೆ ಇದೆ.

7.ಫ್ರಾನ್ಸ್ ದೇಶಕ್ಕೆ ಭಯೋತ್ಪಾದಕರ ಆತಂಕ ತಟ್ಟಲಿದೆ.

8.ಸೆಪ್ಟೆಂಬರ್ ನಲ್ಲಿ ನಡೆಯುವ ಗ್ರಹಣದಿಂದ ಮ್ಯಾನ್ಮಾರ್ ನಲ್ಲಿ ಭಾರೀ ಹಿಂಸಾಚಾರ – ರಕ್ತಪಾತ ಕಾಣುವಂತಾಗಬಹುದು. ಇನ್ನು ಆಂಗ್ ಸುನ್ ಸೂ ಕಿ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಳ್ಳಬಹುದು.

9.ಜರ್ಮನಿಯಲ್ಲಿಯೂ ಭಯೋತ್ಪಾದನೆ ಆತಂಕ ಕಾಣಿಸಿಕೊಳ್ಳಲಿದೆ. ಒಟ್ಟಾರೆ ಯುರೋಪಿಯನ್ ದೇಶಗಳ ಮೇಲೆ ಭಯೋತ್ಪಾದಕರಿಂದ ದಾಳಿಗಳಾಗಲಿವೆ.

10.ರಷ್ಯಾದ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಮೇಲೆ ಹಿಂಸಾತ್ಮಾಕ ದಾಳಿ ಯತ್ನಗಳು ಆಗಬಹುದು.

11.ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಹದಗೆಡುತ್ತದೆ. ಕೆಟ್ಟ ಕಾರಣದಿಂದಾಗಿ ಕೋಲ್ಕತ್ತಾ ಸುದ್ದಿಯಲ್ಲಿ ಇರಲಿದೆ.

12.ಫಿಲಿಪೈನ್ಸ್ ನಲ್ಲಿ ಜ್ವಾಲಾಮುಖಿ ಕಾಣಿಸಿಕೊಳ್ಳುವ- ಉಲ್ಬಣಿಸುವ ಸಾಧ್ಯತೆ ಇದೆ.

13.ಗಾಜಾದ ಮೇಲಿನ ಇಸ್ರೇಲ್ ಕದನ ವಿರಾಮ ತಾತ್ಕಾಲಿಕವಾಗಿದ್ದು, ಯುದ್ಧ ಮುಂದುವರಿಯಲಿದೆ.

14.ಪಾಕಿಸ್ತಾನದಲ್ಲಿ ನಂಬಲು ಸಾಧ್ಯವಿಲ್ಲದ ಮಟ್ಟಕ್ಕೆ ಸಾಮಾಜಿಕ ಅಶಾಂತಿ ಕಾಣಿಸಿಕೊಳ್ಳಲಿದೆ. ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ತೀವ್ರ ಅಭಾವ ಕಾಣಿಸಿಕೊಳ್ಳುತ್ತದೆ.

15.ಅಮೆರಿಕವು ತನ್ನ ವಿದೇಶಿ ನೀತಿಗಳ ಕಾರಣಕ್ಕೆ ಭಾರೀ ಟೀಕೆಗೆ ಗುರಿ ಆಗಲಿದೆ.

16.ಯುನೈಟೆಡ್ ಕಿಂಗ್ ಡಂನಲ್ಲಿ ಪ್ರಮುಖ ವ್ಯಕ್ತಿಗಳ ಅಗಲಿಕೆಯಿಂದ ಶೋಕ ಆವರಿಸಲಿದೆ.

17.ಮುಂದಿನ ವರ್ಷ ಮಾರ್ಚ್ ನಲ್ಲಿ ಮತ್ತೆ ಮಿಥುನಕ್ಕೆ ಗುರು ಗ್ರಹದ ಪ್ರವೇಶ ಆಗುತ್ತದೆ. ಆ ವೇಳೆ ತಾಲಿಬಾನ್ ನಿಂದ ಹಿಂಸಾಚಾರಗಳು, ದಾಳಿಗಳು ವಿಪರೀತ ಹೆಚ್ಚಾಗಲಿದೆ. ಅದರ ರೆಕ್ಕೆಗಳು ಯುರೋಪಿನ ಅನೇಕ ಭಾಗಗಳಿಗೆ ವಿಸ್ತರಣೆ ಆಗಲಿದ್ದು, ಅದರಲ್ಲೂ ಜರ್ಮನಿ ಹಾಗೂ ಫ್ರಾನ್ಸ್ ಭಾರೀ ಎಚ್ಚರಿಕೆ ವಹಿಸಬೇಕಾಗುತ್ತದೆ. ಭಯೋತ್ಪಾದನೆಯಿಂದ ಈ ದೇಶಗಳಿಗೆ ಅತಿ ಹೆಚ್ಚು ಸಮಸ್ಯೆಗಳಾಗುತ್ತವೆ.

18.ಜೂನ್ ತಿಂಗಳಲ್ಲಿ ಅಮೆರಿಕಾದಲ್ಲಿ ರಾಜಕೀಯ ಚಿತ್ರಣಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ಚೀನಾ ಜಾಗತಿಕ ಮಟ್ಟದಲ್ಲಿ ಬಲಿಷ್ಠ ಆಗಲಿದ್ದು, ಅಮೆರಿಕದ ಜೊತೆಗಿನ ಅದರ ಹಗೆತನ ಹೆಚ್ಚಾಗಿ, ಹೊಸ ಬೆಳವಣಿಗೆಗಳು ಕಾಣುವಂತಾಗುತ್ತವೆ.

19.ಮುಂದಿನ ವರ್ಷದ ಏಪ್ರಿಲ್ ನಲ್ಲಿ ಮೀನ ರಾಶಿಯಲ್ಲಿ ಕುಜ- ಶನಿ ಇರುವ ವೇಳೆ ಸಾಮಾಜಿಕ ಅಶಾಂತಿ, ಗಡಿ ವ್ಯಾಜ್ಯಗಳು, ಆರ್ಥಿಕ ಹಿನ್ನಡೆ, ಈಗಾಗಲೇ ಸಮಸ್ಯೆ ಇರುವ ಗಡಿ ಪ್ರದೇಶಗಳಲ್ಲಿ ಸೇನೆ ಜಮಾವಣೆ ಆಗಲಿದೆ. ಆಯಾ ದೇಶಗಳ ಗ್ರಹಸ್ಥಿತಿ ಆಧಾರದಲ್ಲಿ ಈ ಸನ್ನಿವೇಶದಲ್ಲಿನ ಬದಲಾವಣೆ, ಸಮಸ್ಯೆ ನಿವಾರಣೆ ಅವಲಂಬನೆ ಆಗಿರುತ್ತದೆ.

20.ಎಲ್ಲ ಕಡೆಯೂ (ವಿಶ್ವಾದ್ಯಂತ) ರಾಷ್ಟ್ರಾಧ್ಯಕ್ಷರು, ಪ್ರಧಾನಿಗಳು ಆಂತರಿಕ ಭಿನ್ನಮತೀಯರು ಹಾಗೂ ದಂಗೆಗಳಿಂದ ಸಮಸ್ಯೆಗಳಿಗೆ ಸಿಲುಕಲಿದ್ದಾರೆ.

21.ಯುಗಾದಿ ದಿನದಂದು ಐದು ಗ್ರಹಗಳು ಮೀನ ರಾಶಿಯಲ್ಲಿ ಇರಲಿದೆ. ಅಲ್ಲಿಯೇ ರಾಹು ಇರುವುದರಿಖದ ಭಯೋತ್ಪಾದನಾ ಶಕ್ತಿಗಳು ಒಗ್ಗೂಡಿ, ತಮ್ಮ ಅಜೆಂಡಾ ಜಾರಿಗೆ ಹೊರಡಲಿವೆ. ಕ್ಯಾಲಿಫಟ್ ಎಂಬ ಸಿದ್ಧಾಂತ ಇನ್ನೂ ಹೆಚ್ಚು ತೀವ್ರವಾಗಿ ಸಕ್ರಿಯಗೊಳ್ಳಲಿದೆ. ಹೊಸ ಭೂ ಪ್ರದೇಶಗಳಲ್ಲಿ ತಮ್ಮ ಭಯೋತ್ಪಾದನಾ ಚಟುವಟಿಕೆಯನ್ನು ವಿಸ್ತರಿಸಲಿದ್ದಾರೆ. ಉಗ್ರವಾದಿ ಶಕ್ತಿಗಳು ವಿಶ್ವವನ್ನೇ ತಲ್ಲಣಗೊಳಿಸಲಿದೆ.

22.ಬಾಂಗ್ಲಾದೇಶದಲ್ಲಿ ಮೊಹಮದ್ ಯೂನಸ್ ಪ್ರಭಾವ ಮುಗಿಯಲಿದೆ.

23.ಮುಜಿಬುರ್ ರೆಹಮಾನ್ ಅವರ ಬದುಕು ಅಂತ್ಯ ಕಂಡು ರೀತಿಯಲ್ಲಿಯೇ ಶೇಖ್ ಹಸೀನಾರಿಗೂ ಆಗುವಂತೆ ಗ್ರಹ ಸ್ಥಿತಿಗಳು ಇವೆ.

ಗಾಯತ್ರಿ ದೇವಿ ವಾಸುದೇವ್ (ಜ್ಯೋತಿಷ್ಯದಲ್ಲಿ ಐವತ್ತು ವರ್ಷಕ್ಕೂ ಹೆಚ್ಚು ಅನುಭವ ಇರುವಂಥ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಜ್ಯೋತಿಷಿ. ಮಾಡರ್ನ್ ಅಸ್ಟ್ರಾಲಜಿ ಮಾಸಪತ್ರಿಕೆಯ ಸಂಪಾದಕಿ ಹಾಗೂ ಖ್ಯಾತ ಜ್ಯೋತಿಷಿ ದಿವಂಗತ ಬಿ.ವಿ. ರಾಮನ್ ಅವರ ಮಗಳು)

Related Articles

Leave a Reply

Your email address will not be published. Required fields are marked *

Back to top button