ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥವನ್ನುಪೂರ್ಣ ಕುಂಭ ಕಳಸದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಸಂವಿಧಾನ ಜಾಗೃತಿ ಜಾತವನ್ನು ಬೈರೇನಹಳ್ಳಿ ಕ್ರಾಸ್ ಇಂದಲೇ ಸ್ವಾಗತಿಸಿ ಅರಸಾಪುರ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು
ಅರಸಾಪುರ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಲಕ್ಷ್ಮಿದೇವಮ್ಮ ಹಾಗೂ ಉಪಾಧ್ಯಕ್ಷರದ ಸಿದ್ದಗಂಗಮ್ಮ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಪೃಥ್ವಿಭ ಕೆ ಎನ್ ರವರು , ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಪೂಜೆ ಸಲ್ಲಿಸಿ, ಜಾಥಾವನ್ನು ಸ್ವಾಗತಿಸಿದರು.
ಕಳಶ ಹಿಡಿದ ಗ್ರಾಮದ ಮಹಿಳೆಯರು, ವಿವಿಧ ಕಲಾ ತಂಡಗಳು ಹಾಗೂ ಶಾಲಾ ವಿದ್ಯಾರ್ಥಿಗಳು ವಿವಿಧ ವೇಷ ಭೂಷಣಗಳನ್ನು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಭಾರತ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಸಂವಿಧಾನದ ಜಾಗೃತಿಯನ್ನು ಮೂಡಿಸಲಾಯಿತು.
ಬಾಕ್ಸ್ ಬಳಸಿ
ಅರಸಾಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಪೃಥ್ವಿಭ ಕೆ ಎನ್ ರವರು ಮಾತನಾಡಿ ಸಂವಿಧಾನ ನಮ್ಮ ಹೆಮ್ಮೆ ನಮ್ಮ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅನುಗುಣವಾಗಿ ಸುತ್ತಮುತ್ತಲಿನ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ನಮ್ಮ ನೆಲಕ್ಕೆ ಹೊಂದಿಕೊಳ್ಳುವಂತೆ ಸಂವಿಧಾನವನ್ನು ಅಳವಡಿಸಲಾಗಿದೆ ನಮ್ಮ ಹೆಮ್ಮೆಯ ಸಂವಿಧಾನಕ್ಕೆ 75ನೇ ವರ್ಷ ತುಂಬಿದ್ದು ಈ ಅಮೃತ ಮಹೋತ್ಸವದ ಅಂಗವಾಗಿ ನಮ್ಮ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥ ನಡೆಯುತ್ತಿದ್ದು ಈ ಜಾತವು ನಮ್ಮ ಗ್ರಾಮ ಪಂಚಾಯಿತಿಗೆ ಸ್ವಾಗತಿಸಿ ಚಾಲನೆ ಕೊಡಲಾಗಿದೆ ಇಂತಹ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಾಕ್ಷಿಭೂತರಾಗಿದ್ದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಅರಸಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೃಥ್ವಿಬಾ ಕೆ ಎನ್
ಬಾಕ್ಸ್ ಬಳಸಿ
ಅರಸಾಪುರ ಪ್ರೌಢಶಾಲೆಯ ಶಿಕ್ಷಕರಾದ ಸರೋಜ ರವರು ಮಾತನಾಡಿ ನಮ್ಮ ಸಂವಿಧಾನವು ಜಾರಿಗೆ ಬಂದು 75 ವರ್ಷ ತುಂಬಿದ ಸಂದರ್ಭದಲ್ಲಿ ನಮ್ಮ ಘನ ಸರ್ಕಾರ ಸಂವಿಧಾನದ 75ನೇ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ, ಮನುಷ್ಯನ ಜೀವನ ಉದ್ಯೋಗ ವಿದ್ಯಾಭ್ಯಾಸ ಸಾಂಸ್ಕೃತಿಕ ಉತ್ಸವ ಎಲ್ಲದಕ್ಕೂ ಅವಕಾಶ ಮಾಡಿಕೊಟ್ಟಿರುವುದೇ ನಮ್ಮ ಸಂವಿಧಾನ ನಮ್ಮ ಸಂವಿಧಾನವೇ ನಮ್ಮ ಬದುಕು ಇಂತಹ ನಮ್ಮ ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ಅರಸಾಪುರ ಪ್ರೌಢಶಾಲೆಯ ಶಿಕ್ಷಕಿ ಸರೋಜ
ರವರು
ಜಾಥಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಿದೇವಮ್ಮ ಉಪಾಧ್ಯಕ್ಷರಾದ ಸಿದ್ದಗಂಗಮ್ಮ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಪಿಡಿಒ ಪೃಥ್ವಿಬಾ ಕೆ ಎನ್, ಕಾರ್ಯದರ್ಶಿ ಗಂಗಾಧರ್ , ಮಾಜಿ ಅಧ್ಯಕ್ಷರಾದ ರಾಮಕೃಷ್ಣ, ವಿ ಎಸ್ ಎಸ್ ಎನ್ ಅಧ್ಯಕ್ಷರಾದ ಬಿ ಎಸ್ ರಾಜಣ್ಣ, ಗ್ರಾಮದ ಮುಖಂಡರಾದ ರಮೇಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಅರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
ವರದಿ:- ಶ್ರೀನಿವಾಸ್ ಕೊರಟಗೆರೆ