ಇತ್ತೀಚಿನ ಸುದ್ದಿ

ಕೊರಟಗೆರೆ ;- ಗುಡಿಸಿಲು ಸುಟ್ಟು ಹೋಗಿದ್ದ ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಬೇಟಿ

ಕೊರಟಗೆರೆ ;- ಗುಡಿಸಿಲು ಸುಟ್ಟು ಹೋಗಿದ್ದ ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಸ್ವಂತ ಪರಿಹಾರ ನೀಡಿ ನೀತಿ ಸಂಹಿತೆ ಮುಗಿದ ನಂತರ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಚಿಂಪುಗಾನಹಳ್ಳಿಯ ಹೊರವಲಯದಲ್ಲಿ ಏ.26 ರ ಮತದಾನದ ದಿನದಂದು 10 ಗುಡಿಸಿಲುಗಳಿಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿದ್ದವು, ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ ಕಲಬುರ್ಗಿ ಪ್ರವಾಸ ಮುಗಿಸಿ ಗುಡಿಸಿಲು ಸುಟ್ಟ ಸ್ಥಳಕ್ಕೆ ಬೇಟಿ ನೀಡಿದರು, ನಂತರ ಗುಡಸಲು ಸುಟ್ಟ ಪ್ರತಿಯೊಂದು ಕುಟುಂಬದ ಪಟ್ಟಿ ಪಡೆದು ನೊಂದ ಕುಟುಂಬಗಳಿಗೆ ಸದ್ಯಕ್ಕೆ ಸ್ವಂತ ಪರಿಹಾರ ನೀಡಿದರು, ನಂತರ ಪತ್ರಕರ್ತರೊಂದಿಗೆ ಮಾತನಾಡಿ ಈ ಸ್ಥಳದಲ್ಲಿ ಈ ಬೆಂಕಿ ಅನಾಹುತ ಎರಡನೇ ಬಾರಿ ಆಗಿದೆ ಮೊದಲ ಬಾರಿಯೂ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಇವರು ಗಳಿಗೆ ಮನೆ ಕಟ್ಟಿಕೊಳ್ಳಲು ನೀವೇಶನಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೆ, ಗುಡಿಸಿಲು ಸುಟ್ಟ ಕುಟುಂಬದ ಬಹುತೇಕರು ಪರಿಶಿಷ್ಠ ಜಾತಿ ಮತ್ತು ಹಾವಾಡಿಗ ಕುಟುಂಬಗಳಾಗಿದ್ದಾವೆ, ಈಗ ನಮ್ಮ ಆದಿಕಾರಿಗಳು ಈ ಗ್ರಾಮಕ್ಕೆ ಹೊಂದಿಕೊಂಡಿರುವ 9 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿದ್ದಾರೆ, ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣ ಈ ಭಾಗದಲ್ಲಿ ಗುಡಿಸಿಲಿನಲ್ಲಿ ಇರುವ ಕುಟುಂಬಗಳಿಗೆ ಮೊದಲು ನಿವೇಶನಗಳನ್ನು ನೀಡಿ ಆಶ್ರಯ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಡಲಾಗುವುದು, ನಂತರ ಉಳಿದ ನಿವೇಶನಗಳನ್ನು ಗ್ರಾಮದಲ್ಲಿ ಬಡವರನ್ನು ಗುರುತಿಸಿ ನೀಡಲಾಗುವುದು ಎಂದರು.
ಕ್ಷೇತ್ರಕ್ಕೆ ಸಾವಿರಾರು ಮನೆಗಳನ್ನು ತಂದರೂ ನಮ್ಮಲ್ಲಿ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಎಲ್ಲರೂ ಚಿಕ್ಕ ಚಿಕ್ಕ ಕುಟುಂಬಗಳಾಗಿ ಹೊರಬರುತ್ತಿದ್ದಾರೆ ಅದಕ್ಕಾಗಿ ನಾವುಗಳು ಕ್ಷೇತ್ರದಾಂದ್ಯತ ನಿವೇಶನಗಳನ್ನು ಗುರುತಿಸಿ ಮನೆ ಕಟ್ಟಿಕೊಡುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ, ಆದರೆ ಹಲವು ಕಡೆ ಖಾಲಿ ಇರುವ ಸರ್ಕಾರಿ ಜಮೀನುಗಳಲ್ಲಿ ಗುಡಿಸಿಲು ಹಾಕಿಕೊಂಡರೆ ನಿವೇಶನ ನೀಡುತ್ತಾರೆ ಎನ್ನುವ ಮನೋಭಾವ ಹಲವರಲ್ಲಿ ಬಂದಿದ್ದು ಇದಕ್ಕೆ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದ್ದು ಇವುಗಳು ಉರ್ಜಿತವಾಗುವುದಿಲ್ಲ, ನಮ್ಮ ಆಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಸ್ಥಳ ಪರಿಶೀಲನೆ ಮಾಡಿ ಅರ್ಹತೆ ಉಳ್ಳವರಿಗೆ ಮಾತ್ರ ನೀವೇಶನ ನೀಡಲಾಗುವುದು, ಸದ್ಯಕ್ಕೆ ಗುಡಿಸಿಲು ಸುಟ್ಟ ಕುಟುಂಬಗಳಿಗೆ ಬದುಕಲು ತಾತ್ಕಾಲಿಕ ಸಹಾಯ ಮಾಡಲಾಗಿದೆ, ಈ ಕುಟುಂಬಗಳಿಗೆ ಪಾವಗಡದ ಶ್ರೀ ಜಪಾನಂದ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ, ಎಲೆರಾಂಪುರದ ಡಾ. ಹುನುಮಂತನಾಥಸ್ವಾಮೀಜಿ, ಗೊರವನಹಳ್ಳಿ ಮಹಾಲಕ್ಷ್ಮೀ ಟ್ರಸ್ಟ್, ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ ಇನ್ನಿತರರು ಸಹಾಯ ಮಾಡಿದ್ದು ಅವರಿಗೆಲ್ಲ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ ಮಾತನಾಡಿ ಈ ರೀತಿ ಅವಘಡಗಳು ತುಂಬಾ ದುಃಖ ತರುತ್ತವೆ ಗುಡಿಸಿಲು ಸುಟ್ಟುಕೊಂಡ ಕುಟುಂಬಗಳಿಗೆ ಶ್ರೀ ಮಠದಂದ ಅಡಿಗೆ ಪಾತ್ರೆಗಳು, ಬಟ್ಟೆಗಳು, ದಿನಸಿ ಸಾಮಗ್ರಿಗಳನ್ನು ನೀಡಲಾಗಿದೆ, ಈಗಾಗಲೆ ಗೃಹ ಸಚಿವರು ನೊಂದಕುಟುಂಬಗಳಿಗೆ ಶೀರ್ಘವಾಗಿ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದು ನೋಂದವರ ಪರವಾಗಿ ಶ್ರೀ ಮಠವು ಸದಾ ಇರುತ್ತದೆ ಎಂದರು.
ಈ ಸಂದರ್ಭಧಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ, ಅರಕೆರೆ ಶಂಕರ್, ಮುಖಂಡರುಗಳಾದ ಮಹಾಲಿಂಗಪ್ಪ, ಗ್ರಾ.ಪಂ. ಅಧ್ಯಕ್ಷ ನಾಗರಾಜು, ಜಯರಾಂ. ದೇವರಾಜು, ರಘು, ದರ್ಶನ್, ಕೆಂಪರಾಜು, ಶಿವಕುಮಾರ್, ಸೇರೆದಿಂತೆ ಇನ್ನಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button