ಕೊನೆಯ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಂಜನಗೂಡಿನಲ್ಲಿ …
ಮೈಸೂರು:ಕರ್ನಾಟಕ ವಿಧಾನಸಭೆ ಚುನಾವಣೆಯ ಕೊನೆಯ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಎಲಚೆಗೆರೆ ಬೋರೆ ಗ್ರಾಮದಲ್ಲಿ ನಡೆಸಲಿದ್ದಾರೆ.
ಉತ್ತರದ ಕಾಶಿಯ ಸಂಸದರಾಗಿ, 9 ವರ್ಷಗಳ ಕಾಲ ಯಶಸ್ವಿಯಾಗಿ ವಿಶ್ವವೇ ಮೆಚ್ಚುವಂತೆ ಆಡಳಿತ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರದ ಕಾಶಿಯಿಂದ ದಕ್ಷಿಣ ಕಾಶಿ ನಂಜನಗೂಡಿಗೆ ಭಾನುವಾರ ಆಗಮಿಸಲಿದ್ದು, ಎಲಚಿಗೆರೆಯಲ್ಲಿ ನಡೆದ ಕೊನೆಯ ಬಹಿರಂಗ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ 1 ಲಕ್ಷ ಜನ ಪಾಲುಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮದ ಉಸ್ತುವಾರಿಯಾದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಮೋದಿಯವರ ಕೊನೆಯ ಬಹಿರಂಗ ಚುನಾವಣಾ ಪ್ರಚಾರ ಸಮಾವೇಶ ನಡೆಯುವ ಎಲಚೆಗೆರೆ ಬೋರೆ ಗ್ರಾಮದಲ್ಲಿ ಶನಿವಾರ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಜೆಪಿ ಪರವಾಗಿ ರೋಡ್ ಶೋ ಹಾಗೂ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿರುವ ನರೇಂದ್ರ ಮೋದಿಯವರು, ಶಿವಮೊಗ್ಗದಿಂದ ಹೆಲಿಕ್ಯಾಪ್ಟರ್ನಲ್ಲಿ ಭಾನುವಾರ ಸಂಜೆ 4-25 ಕ್ಕೆ ಎಲಚಿಗೆರೆ ಗ್ರಾಮದಲ್ಲಿ ಕಾರ್ಯಕ್ರಮ ನಡೆಸಲು ಆಯೋಜಿಸಿರುವ ಸ್ಥಳಕ್ಕೆ ಬಂದು ಇಳಿಯಲಿದ್ದಾರೆ. 3 ಹೆಲಿಕ್ಯಾಪ್ಟರ್ ಗಳು ಇಳಿಯಲು ಗ್ರಾಮದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಸಂಜೆ 4-35 ಕ್ಕೆ ವೇದಿಕೆಗೆ ಆಗಮಿಸುವ ನರೇಂದ್ರ ಮೋದಿ 5-25 ರವರೆಗೆ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ. ವೇದಿಕೆಯಲ್ಲಿ ಚಾಮರಾಜನಗರ ಜಿಲ್ಲೆಯ ಹಾಗೂ ಮೈಸೂರು ಗ್ರಾಮಾಂತರ ಜಿಲ್ಲೆಯ ತಲಾ ನಾಲ್ಕು ಮಂದಿ ಪಕ್ಷದ ಅಭ್ಯರ್ಥಿಗಳು, ಇಬ್ಬರು ಸಂಸದರು,ಶಾಸಕರು ಸೇರಿದಂತೆ 33 ಮಂದಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಕಾರ್ಯಕ್ರಮಕ್ಕೆ ನಂಜನಗೂಡು-ಮೈಸೂರಿನ 3 ಸಾವಿರ ಕಾರ್ಯಕರ್ತರು ದ್ವಿಚಕ್ರವಾಹನಗಳಲ್ಲಿ ಮೆರವಣಿಗೆಯ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ,ಕಳೆ ಕಟ್ಟÀಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಆಯೋಜನೆಗೊಂಡಿರುವ ರಸ್ತೆಯ ಇಕ್ಕೆಲಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 9 ವರ್ಷಗಳ ಆಡಳಿತದಲ್ಲಿ ಕರ್ನಾಟಕ ರಾಜ್ಯಕ್ಕೆ ನೀಡಿರುವ ಕೊಡುಗೆಗಳ ಚಿತ್ರಣವನ್ನು ವಿಷಯಾಧಾರಿತವಾಗಿ ಕಟ್ಟಿಕೊಡುವ ಹೋಲ್ಡಿಂಗ್ಸ್ಗಳನ್ನು ಪ್ರದರ್ಶಿಸಲಾಗುವುದು.
ಪ್ರಧಾನಮಂತ್ರಿಗಳು ವೇದಿಕೆಗೆ ಬರುವಾಗ 8 ವಿಧಾನಸಭಾ ಕ್ಷೇತ್ರಗಳ ಜನಪದ ನೃತ್ಯ,ವೀರಭದ್ರ ಕುಣಿತ, ಡೊಳ್ಳುಕುಣಿತ ಮುಂತಾದ ಸಂಸ್ಕöÈತಿಯನ್ನು ಬಿಂಬಿಸುವ ವಿವಿಧ ಜನಪದ ತಂಡಗಳು ಸ್ವಾಗತ ಕೋರಲಿವೆ ಎಂದು ಹೇಳಿದರು.
ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ನರೇಂದ್ರ ಮೋದಿ ಭೇಟಿ ; ವೇದಿಕೆ ಕಾರ್ಯಕ್ರಮ ಮುಗಿದ ನಂತರ ಸಂಜೆ 5-30 ಗಂಟೆಗೆ ಹೊರಟು 6-45 ರವರೆಗೆ ನಂಜನಗೂಡಿಗೆ ಆಗಮಿಸಿ ದೇವಾಲಯದಲ್ಲಿ ಗಣಪತಿ,ಸುಬ್ರಹ್ಮಣ್ಯ,ಆದಿ ನಾರಾಯಣ,ಪಾರ್ವತಿ ಅಮ್ಮನವರ ದರ್ಶನ ಪಡೆಯಲಿದ್ದಾರೆ, ಶ್ರೀಕಂಠೇಶ್ವರನಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಪ್ರಧಾನ ಮಂತ್ರಿಗಳು ದೇವಾಲಯಕ್ಕೆ ತೆರಳುವ ಚಾಮರಾಜನಗರ ಬೈಪಾಸ್ ರಸ್ತೆಯ ಇಕ್ಕೆಲಗಳಲ್ಲಿ ಉತ್ತರದ ಕಾಶಿಯಿಂದ ದಕ್ಷಿಣ ಕಾಶಿಯವರೆಗೆ ಮೋದಿಯವರು ದೇವಾಲಯಗಳನ್ನು ಅಭಿವೃದ್ಧಿಪಡಿಸಿರುವ ಚಿತ್ರಣಗಳ ಹೋಲ್ಡಿಂಗ್ಸ್ ಗಳನ್ನು ಪ್ರದರ್ಶಿಸಲಾಗುವುದು.ಕಾರ್ಯಕ್ರಮದ ಅಂಗವಾಗಿ 2 ಸಾವಿರ ಮಂದಿ ಯುವಕರಿಗೆ ವಿಶೇಷ ಟ್ಯಾಟೋ (ಹಚ್ಚೆ) ಹಾಗೂ 2 ಸಾವಿರ ಮಂದಿ ಮಹಿಳೆಯರಿಗೆ ಮೇಹೆಂದಿ ಹಾಕುವ ಮೂಲಕ ಸ್ವಾಗತಿಸಲಾಗುವುದು. ಕಾರ್ಯಕ್ರಮದ ಸವಿ ನೆನಪಿಗಾಗಿ ನರೇಂದ್ರ ಮೋದಿಯವರಿಗೆ ನಾಡಿನ ಕಲೆ,ಸಂಸ್ಕöÈತಿಯನ್ನು ಬಿಂಬಿಸುವ ಉಡುಗೊರೆ ನೀಡಲಾಗುವುದು ಎಂದು ಹೇಳಿದರು.
ನಂಜನಗೂಡಿನ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ದಕ್ಷಿಣ ಕಾಶಿ ನಂಜನಗೂಡಿಗೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಆಗಮಿಸುತ್ತಿರುವುದು ವೈಯಕ್ತಿಕವಾಗಿ ನನಗೆ ಹೆಮ್ಮೆಯ ವಿಚಾರ. ಪ್ರಧಾನ ಮಂತ್ರಿಗಳು ನಮ್ಮ ಜಿಲ್ಲೆಗೆ ಭೇಟಿ ಕೊಟ್ಟಾಗ, ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದು ಹೋಗುತ್ತಿದ್ದರು. ಪಕ್ಷದ ವರಿಷ್ಠರಿಗೆ ನಮ್ಮ ಕ್ಷೇತ್ರದ ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡುವಂತೆ ಮನವೊಲಿಸಲು ಕೋರಿಕೆ ಸಲ್ಲಿಸಿದ್ದೆ, ನನ್ನ ಬಯಕೆ ಈಡೇರುತ್ತಿರುವುದು ಸಂತಸ ತಂದಿದೆ ಎಂದು ಖುಷಿ ವ್ಯಕ್ತಪಡಿಸಿದರು. ಗುಂಡ್ಲುಪೇಟೆ- ನಂಜನಗೂಡು ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದರು. ಗುಂಡ್ಲುಪೇಟೆ- ನಂಜನಗೂಡು ಕ್ಷೇತ್ರವನ್ನು ಗೆದ್ದು, ನಾವು ಇಬ್ಬರು ಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದೇವೆ, ಪ್ರಧಾನ ಮಂತ್ರಿಗಳು ಪ್ರಚಾರ ಮಾಡಿದ ಕಡೆಗಳಲ್ಲಿ ಅವರ ಪ್ರಭಾವ ಬೀರಿದೆ, ಹೀಗಾಗಿ ಮತ್ತೆ ನಾವು ಚುನಾವಣೆಯಲ್ಲಿ ಬಹುಮತದಿಂದ ವಿಜಯ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮೈಸೂರು ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವನೂರು ಜಿ.ಪ್ರತಾಪ್, ಕ್ಷೇತ್ರದ ಚುನಾವಣಾ ಉಸ್ತುವಾರಿ ವಿವೇಕ್ ಟಾಕೂರ್, ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದ ಸಂಯೋಜಕ ನಾಗೇಶ್, ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತ್ಕುಮಾರ್, ಸಹ ವಕ್ತಾರ ಕೇಬಲ್ ಮಹೇಶ್, ನಂಜನಗೂಡು
ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೊರಳವಾಡಿ ಮಹೇಶ್, ಮುಖಂಡರಾದ ಡಾ. ಶಿವರಾಂ, ಸುರೇಶ್ಬಾಬು ಉಪಸ್ಥಿತರಿದ್ದರು.