ಪಟ್ಟಣದ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಸದಸ್ಯರು ಹೆಚ್ಚಿನ ಕಾಳಜಿ ವಹಿಸಿ ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ

ಯಳಂದೂರು ಪಟ್ಟಣದ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಲಕ್ಷ್ಮಿ ರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಮೊದಲಿಗೆ ಹಿಂದೆ ನಡೆದ ರೆಕಾರ್ಡುಗಳನ್ನು ಓದಿ ಚರ್ಚಿಸಲಾಯಿತು. ಸಭೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾಗವಹಿಸಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿ, ಪಟ್ಟಣದ ಅಭಿವೃದ್ಧಿ, ವಿವಿಧ ಮೂಲಭೂತ ಸೌಲಭ್ಯ, ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಪಟ್ಟಣದಲ್ಲಿ ಎಸ್ಸಿ/ಎಸ್ಟಿ ಸಮುದಾಯದ ವಿವಿಧ ವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2023-24 ನೇ ಸಾಲಿನ ಲ್ಯಾಪ್ ಟಾಪ್ ಸಹಾಯಧನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಸಹಾಯಧನ ವಿತರಿಸಲಾಯಿತು.
ನಂತರ ಮಾತನಾಡಿ ಪಟ್ಟಣದ ಆಶ್ರಯ ಬಡವಣೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಕರ್ನಾಟಕ ನೀರು ಸರಬರಾಜು ಮಂಡಳಿ ವತಿಯಿಂದ 6 ಕೋಟಿ ರೂ. ವೆಚ್ಚದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಅನುಮೋದನೆ ನೀಡಿ ಎರಡು ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿ ಎಂದರು. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸರ್ವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಪಟ್ಟಣ ಪಂಚಾಯತಿಯಲ್ಲಿ ಸೂಕ್ತ ದಾಖಲಾತಿ ಮತ್ತು ಸರ್ಕಾರದ ಆದೇಶ ಮತ್ತು ನ್ಯಾಯಾಲಯದ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು, ದಾಖಲಾತಿ ಇಲ್ಲದ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಸಿಬ್ಬಂದಿ ಮತ್ತು ಮುಖ್ಯ ಅಧಿಕಾರಿಗಳಿಗೆ ಈ ಬಗ್ಗೆ ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸದಿದ್ದರೆ ತನಿಖೆ ತಂಡ ನೇಮಿಸಿ ಸಂಬಂಧಪಟ್ಟ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ ಸುಮಾರು 1 ಎಕರೆ 50 ಗುಂಟೆ ಜಾಗದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಅನುಮೋದನೆಯನ್ನು ಸರ್ಕಾರವು ನೀಡಿದ್ದು, ಸದ್ಯದಲ್ಲೇ ಕಾಮಗಾರಿ ನಡೆಯಲಿದೆ, 15ನೇ ಹಣಕಾಸು ಯೋಜನೆಯಲ್ಲಿ ತೀರ್ಮಾನಿಸಲಾಯಿತು, ಸದಸ್ಯರೆಲ್ಲರೂ ಸಕ್ರಿಯವಾಗಿ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಿ ಎಂದರು.
1 ನೇ ವಾರ್ಡ್ ನ ಸದಸ್ಯರಾದ ಮಹೇಶ್ ರವರು ಮಾತನಾಡಿ ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ವಿಷಯಗಳಲ್ಲಿ ಬೆಳಂದೂರು ಪಟ್ಟಣದ 1ನೇ ವಾರ್ಡ್ನಲ್ಲಿ ದೇವಸ್ಥಾನ ಹಾಗೂ ಪಾರ್ಕ್ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು ಆದರೆ ಕೆಲಸ ನಡೆದಿಲ್ಲ, ಪಟ್ಟಣದಲ್ಲಿ ಇರುವ 8 ಹೈ ಮಾಸ್ಟ್ ಒಂದು ಕೂಡ ಉರಿಯುವುದಿಲ್ಲ, ಅದರ ದುರಸ್ತಿ ಕಾರ್ಯ ನಡೆಸಬೇಕು, ಹಾಗೆ ಪಟ್ಟಣದ ನಾಲ್ಕು ದಿಕ್ಕುಗಳಲ್ಲಿಯೂ ಇರುವ ಕಾಮನ್ ಗೇಟ್ ( ಸ್ವಾಗತ ಬೋರ್ಡ್ ) ಗಳನ್ನು ದುರಸ್ತಿಪಡಿಸಬೇಕು, ಬಸ್ ನಿಲ್ದಾಣದ ಬಳಿ ಇರುವ ಶೌಚಾಲಯದ ಮೇಲೆ ಇರುವ ಕಸವನ್ನು ವಿಲೇವಾರಿ ಮಾಡಿ, ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ತಿಳಿಸಿದರು.
ಈ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಶಾಂತಮ್ಮ, ಪಟ್ಣಣ ಪಂಚಾಯತಿ ಮುಖ್ಯಧಿಕಾರಿ ಎಂ.ಪಿ.ಮಹೇಶ್ ಕುಮಾರ್ ,ಸದಸ್ಯರಾದ ಮಹೇಶ್, ರಂಗನಾಥ್,ಬಿ.ರವಿ, ಮಹದೇವ ನಾಯಕ, ಸುಶೀಲಮ್ಮ, ಸವಿತಾ, ಪದ್ಮಾವತಿ, ನಾಮನಿರ್ದೇಶಕ ಸದಸ್ಯರಾದ ಲಿಂಗರಾಜ ಮೂರ್ತಿ, ಶ್ರೀಕಂಠ ಸ್ವಾಮಿ,ಇಂಜಿನಿಯರ್ ಮಹೇಶ್,ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಬಸವಣ್ಣ, ಲಕ್ಷ್ಮಿ, ರಾಧಾ, ವಿಜಯಲಕ್ಷ್ಮಿ ಸೇರಿದಂತೆ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.