ಇತ್ತೀಚಿನ ಸುದ್ದಿರಾಜ್ಯ

ಕುಮಾರಸ್ವಾಮಿಯಿಂದ ವಿಶ್ವಾಸ ದ್ರೋಹ: ಸಿ. ಪಿ. ಯೋಗೇಶ್ವರ್

ಕುಮಾರಸ್ವಾಮಿ ಅವರು ಹೇಳದೇ ಕೇಳದೆ ಮಂಡ್ಯಕ್ಕೆ ಹೋದ ಕಾರಣಕ್ಕೆ ಚುನಾವಣೆ ಬಂದಿದೆ

ಚನ್ನಪಟ್ಟಣ:ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯನ್ನು ನಾವು ಯಾರೂ ಬಯಸಿರಲಿಲ್ಲ. ಕುಮಾರಸ್ವಾಮಿ ಅವರು ನನಗೆ ವಿಶ್ವಾಸ ದ್ರೋಹ ಮಾಡಿದರು. ಚನ್ನಪಟ್ಟಣ ಬೇಡ ಎಂದು ಹೇಳದೆ, ಕೇಳದೆ ಮಂಡ್ಯಕ್ಕೆ ಹೋದ ಕಾರಣಕ್ಕೆ ನಾನು ಇಂದು ನಿಮ್ಮ ಮುಂದೆ ಅಭ್ಯರ್ಥಿಯಾಗಿ ನಿಂತಿದ್ದೇನೆ” ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ್ ಹೇಳಿದರು.

ಚನ್ನಪಟ್ಟಣದ ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಗಚಗೆರೆ ಹಾಗೂ ಭೂಹಳ್ಳಿಯಲ್ಲಿ ಸೋಮವಾರ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು;

“ಜಿಲ್ಲೆಯ ಜನರಿಗೆ ಕುಮಾರಸ್ವಾಮಿ ಏನು ಎಂಬುದು ಅರ್ಥವಾಗಿದೆ. ಅವರು ಇಲ್ಲಿಗೆ ಬರುವಾಗ ಏಕೆ ಬಂದರು, ಹೋಗುವಾಗ ಏಕೆ ಹೋದರು ಎಂಬುದು ಹೇಳಲಿಲ್ಲ. ಅಧಿಕಾರ ಹೂಡಿಕೊಂಡು ಮಂಡ್ಯಕ್ಕೆ ಹೋಗಿ, ಈಗ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ.

ದುರಾದೃಷ್ಟವಶಾತ್ ಕಳೆದ 15- 20 ವರ್ಷಗಳಿಂದ ಅವರ ಕುಟುಂಬವೇ ನನ್ನ ವಿರುದ್ಧ ಚುನಾವಣೆಗೆ ಬರುತ್ತಿದೆ. ಈ ಮೊದಲು ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಈಗ ಅವರ ಮಗ ನನ್ನ ವಿರುದ್ಧ ನಿಂತಿದ್ದಾರೆ.

ವಂಶಪಾರಂಪರ್ಯ ಆಡಳಿತ ಕೊನೆಗೊಳ್ಳಬೇಕು

ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ನನ್ನ ಜೊತೆಯಲ್ಲಿ ನಿಂತು, ಈಗ ವಿಶ್ವಾಸದ್ರೋಹ ಎಸಗಿದ್ದಾರೆ. ಕ್ಷೇತ್ರದಲ್ಲಿ ವಂಶಪಾರಂಪರ್ಯ ಆಡಳಿತ ಕೊನೆಗೊಳ್ಳಬೇಕು. ತಾಲೂಕಿನ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು.

ಕುಮಾರಣ್ಣನ ನೋಟು, ಯೋಗೇಶ್ವರ್ ಗೆ ಓಟು
ಈ ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರ ಸಾಕ್ಷಿ ಗುಡ್ಡೆ ಏನು? ಬಲವಂತವಾಗಿ ಮಗನನ್ನು ನಿಲ್ಲಿಸಿ, ಅವನನ್ನು ಅಳಿಸಿ, ಈಗ ಜನರೇ ಅವನ ಕಣ್ಣೀರು ಒರೆಸ ಬೇಕು ಎಂದು ಕೇಳುತ್ತಾರಲ್ಲ. ಅವರಿಗೆ ನೈತಿಕತೆ ಇದೆಯೇ? ಕ್ಷೇತ್ರದ ಜನರು ಕುಮಾರಣ್ಣ ನೋಟು ಪಡೆದು ಯೋಗೇಶ್ವರ್ ಗೆ ಮತ ಹಾಕಬೇಕು. ನನ್ನ ಮೇಲೆ ವಿಶ್ವಾಸವಿಡಬೇಕು.

ಪುತ್ರ ವ್ಯಾಮೋಹಕ್ಕೆ ಬಲಿ

ಕುಮಾರಸ್ವಾಮಿಯವರು ಚನ್ನಪಟ್ಟಣ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎನ್ನುವುದನ್ನು ಪ್ರತಿ ಹಳ್ಳಿಗಳಲ್ಲೂ ಪ್ರಶ್ನೆ ಮಾಡುತ್ತಿದ್ದೇವೆ. ಜನರ ಕಷ್ಟ ಕೇಳದ ಕುಮಾರಸ್ವಾಮಿಯವರು ಯಾವ ನೈತಿಕತೆ ಹೊತ್ತುಕೊಂಡು ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ ಎಂಬುದನ್ನು ಜನರು ಪ್ರಶ್ನಿಸಬೇಕು. ಕುಮಾರಸ್ವಾಮಿಯವರು ಪುತ್ರ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಚನ್ನಪಟ್ಟಣದಲ್ಲಿ ಇದು ಇವರ ಕೊನೆಯ ಪ್ರಯತ್ನವಾಗಿದೆ.

ಕಣ್ಣೀರು ಒರೆಸುವವನು ನಿಜವಾದ ನಾಯಕ

ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜನರಿಗೆ ಇವರ ಭಾವನಾತ್ಮಕತೆ, ಕಣ್ಣೀರು ಎಲ್ಲವೂ ಅರ್ಥವಾಗಿದೆ. ನಾಯಕನಾದವನು ಜನರ ಕಣ್ಣೀರನ್ನು ಒರೆಸಬೇಕೆ ಹೊರತು ಆತ ಕಣ್ಣೀರು ಹಾಕಬಾರದು. ಆಗ ಮಾತ್ರ ಆತ ನಾಯಕನಾಗಿ ಬೆಳೆಯುತ್ತಾನೆ.

ಸೋತರು ಜನರ ನಡುವೆ ನಿಂತು ಕೆಲಸ ಮಾಡಿದ್ದೇನೆ

ಕುಮಾರಸ್ವಾಮಿ ಅವರ ವಿರುದ್ಧ ಎರಡು ಚುನಾವಣೆ ಸೋತಿದ್ದರೂ, ಜನರ ನಡುವೆ ನಿಂತು ಕೆಲಸ ಮಾಡಿದ್ದೇನೆ. ಈಗ ಕಾಂಗ್ರೆಸ್ ಸೇರಿದ್ದು, ಹಸ್ತದ ಗುರುತಿಸಿ ನೀವು ಮತ ಹಾಕಿ ಮತ್ತೊಮ್ಮೆ ನಿಮ್ಮ ಸೇವೆಗಾಗಿ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡುತ್ತೇನೆ.

ಕಾಂಗ್ರೆಸ್ ಸರ್ಕಾರ ಹಾಗೂ ಉನ್ನತ ಮಟ್ಟದ ನಾಯಕರು ನನ್ನ ಬೆನ್ನಿಗೆ ಇದ್ದಾರೆ. ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳು ಜನರ ಮನಸ್ಸನ್ನು ಗೆದ್ದಿವೆ. ಈ ಬಾರಿ 31 ಜನರು ಚುನಾವಣೆಗೆ ನಿಂತಿದ್ದಾರೆ. ಮೊದಲನೇ ವಿವಿ ಪ್ಯಾಟ್ ನಲ್ಲಿ, ಎರಡನೇ ಕ್ರಮ ಸಂಖ್ಯೆಯಾಗಿ ನನ್ನ ಹೆಸರಿದೆ. ನೀವು ಮರೆಯದೆ ಹಸ್ತದ ಗುರುತಿಗೆ ಮತ ನೀಡಬೇಕು.

Related Articles

Leave a Reply

Your email address will not be published. Required fields are marked *

Back to top button