ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಕರ್ಷಕ ಮೆರವಣಿಗೆಗೆ ಶಾಸಕ ಎಚ್ ಪಿ ಸ್ವರೂಪ್ ಚಾಲನೆ
ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಕಿತ್ತೂರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಬೆಳ್ಳಿರಥದಲ್ಲಿ ಇಡಲಾಗಿದ್ದ ಚೆನ್ನಮ್ಮನವರ ಭಾವಚಿತ್ರಕ್ಕೆ ಕ್ಷೆತ್ರದ ಶಾಸಕರು ಪುಷ್ಪಾಚನೆ ಮಾಡುವುದರ ಮೂಲಕ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಶ್ರೀ ಅರಕಲಗೂಡು ಮಠದ ಮಠಾಧೀಶರಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ತಣ್ಣೀರುಹಳ್ಳ ಮಠದ ಮಠಾಧೀಶರಾದ ಶ್ರೀ ವಿಜಯ ಕುಮಾರ ಸ್ವಾಮೀಜಿ, ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ಹಾಗೂ ಜಿಲ್ಲಾಧಿಕಾರಿ ಸಿ ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಕೆ. ಟಿ ಶಾಂತಲಾ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎನ್ ಪರಮೇಶ್, ನಿಕಟಪೂರ್ವ ಕ.ರಾ.ರ.ಸಾ.ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾದ ಎಸ್. ಎನ್ ಈಶ್ವರಪ್ಪ ಹಾಗೂ ಸಮಾಜದ ಮುಖಂಡರುಗಳಾದ ಸಂಗಮ್ ಜಿ, ಯು.ಎಸ್ ಬಸವರಾಜು, ಶೋಬನ್ ಬಾಬು, ಅವಿನಾಶ್ ಜಿ.ಎಸ್, ದರ್ಶನ್, ಪ್ರದೀಪ್, ದಿಲೀಪ್, ಶರತ್ ಭೂಷಣ್, ಹೇಮಂತ್, ಧರ್ಮಣ್ಣ, ಚಂದ್ರಶೇಖರ್, ಆಟೋ ಮೋಹನ್, ಭುವನಾಕ್ಷ, ತಾಲೂಕು ಅಧ್ಯಕ್ಷರಾದ ಶಿವಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಪಿ ತಾರಾನಾಥ್ ಅವರ ಸಮ್ಮುಖದಲ್ಲಿ ಬೆಳ್ಳಿರಥದಲ್ಲಿ ಇರಿಸಲಾಗಿದ್ದ ಕಿತ್ತೂರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು, ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿದ್ದವು. ಈ ವೇಳೆ ಕ್ಷೇತ್ರದ ಶಾಸಕ ಸ್ವರೂಪ ಪ್ರಕಾಶ್ ಮಾತನಾಡಿ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಮೆರವಣಿಗೆಗೆ ವೀರಶೈವ ಸಮಾಜದ ಮುಖಂಡರು ಪೂಜ್ಯ ಸ್ವಾಮೀಜಿ ಅವರು ಹಾಗೂ ಹಿರಿಯರು ಎಲ್ಲರೂ ಸೇರಿ ಜಿಲ್ಲಾಧಿಕಾರಿ ಕಚೇರಿಯಿಂದ ಹಾಸನಾಂಬ ಕಲಾ ಕ್ಷೇತ್ರದ ವರೆಗೂ ಸಾಗುವ ಮೆರವಣಿಗೆಗೆ ಚಾಲನೆ ಕೊಡಲಾಯಿತು, ಕಿತ್ತೂರು ರಾಣಿ ಚೆನ್ನಮ್ಮ ಮೊಟ್ಟಮೊದಲ ವೀರ ಮಹಿಳೆಯರು ಹೋರಾಟಗಾರತಿ ಆಗಿದ್ದಾರೆ ಎಂದರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಸ್ವತಂತ್ರ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಧೀರ ಮಹಿಳೆಯಾಗಿ ಆಗಿನ ಕಾಲದಲ್ಲಿ ಬ್ರಿಟಿಷರ ಕ್ರೌರ್ಯಕ್ಕೆ ಎದೆಗುಂದದೆ ಹೋರಾಡಿದ ಕಿತ್ತೂರಾಣಿ ಚೆನ್ನಮ್ಮ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ ಎಂದರು.