ಕಸ್ತೂರಿ ಶ್ರೀನಿವಾಸ್ ರವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ
ಮಾಲೂರು: ಕರ್ನಾಟಕ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಜನ್ಮ ಭೂಮಿ ಸೇವಾ ಟ್ರಸ್ಟ್(ರಿ) ಇವರಿಗೆ ಚಿರಋಣಿಯಾಗಿರುತ್ತೇನೆ. ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕೋಲಾರ ಜಿಲ್ಲಾ ಉಪಾಧ್ಯಕ್ಷರಾದಂತಹ ಕಸ್ತೂರಿ ಶ್ರೀನಿವಾಸ್ ರವರು ತಿಳಿಸಿದರು.
ಜನ್ಮ ಭೂಮಿ ಸೇವಾ ಟ್ರಸ್ಟ್ (ರಿ) ವತಿಯಿಂದ ಪರಮಪೂಜ್ಯ ಶ್ರೀ ಡಾಕ್ಟರ್ ಬಾಲಗಂಗಾಧರನಾಥ ಸ್ವಾಮೀಜಿ ರವರ ಜಯಂತೋತ್ಸವ ಮತ್ತು ಟ್ರಸ್ಟಿನ ಐದನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ, ಅಕ್ಕಮಹಾದೇವಿ ಸಭಾಂಗಣ ಚಾಮರಾಜಪೇಟೆ ಬೆಂಗಳೂರಿನ ಕಾರ್ಯಕ್ರಮದಲ್ಲಿ “ಕರ್ನಾಟಕ ಸೇವಾ ರತ್ನ ಪ್ರಶಸ್ತಿ”ಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಈ ಪ್ರಶಸ್ತಿಯನ್ನು ನಾನು ಪಡೆಯಲು ಈ ಸಮಾಜ ಸೇವೆಯಲ್ಲಿ ನಿರಂತರವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಉತ್ತಮ ಸ್ಥಾನಮಾನ ನೀಡಿದಂತಹ ಕೋಲಾರ ಜಿಲ್ಲಾ ಮಾಲೂರು ತಾಲೂಕಿನ ಎಲ್ಲಾ ನನ್ನ ನಾಗರೀಕ ಬಂಧುಗಳು, ಸಮಾಜ ಸೇವಕರ, ಹೋರಾಟಗಾರರ ಪ್ರೀತಿ ವಿಶ್ವಾಸದಿಂದ ಈ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.
ಸುಮಾರು ಎರಡು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿ ಕಸ್ತೂರಿ ಕರ್ನಾಟಕ ಜನಪದ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ನಂತರ ಅಂಬೇಡ್ಕರ್ ವಾದ ಮಾವಳ್ಳಿ ಶಂಕರ ಬಣದ ಲಕ್ಕೂರು ವೆಂಕಟೇಶ್ ರವರ ಸಂಘಟನೆಯಲ್ಲಿ ಒಂದು ವರ್ಷಗಳ ನಿರಂತರ ಸೇವೆ ಸಲ್ಲಿಸಿದ್ದು, ಪ್ರಶಸ್ತಿಗೆ ಕಾರಣೀಭೂತವಾಗಿದೆ. ಇದೇ ವೇದಿಕೆಯಲ್ಲಿ ನರಸಿಂಹಗೌಡ ನಾಡಪ್ರಭು ಕೆಂಪೇಗೌಡರ ಯುವಶಕ್ತಿ ವೇದಿಕೆ ಸಂಸ್ಥಾಪಕ, ರಾಜ್ಯಾಧ್ಯಕ್ಷರು ಇವರು ಸಹ ಕರ್ನಾಟಕ ಸೇವಾ ರತ್ನ ಪ್ರಶಸ್ತಿಯನ್ನು ಪಡೆದಿರುವುದು ಸಂತಸದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಉತ್ತಮವಾದ ಕಾರ್ಯಗಳನ್ನು ಮಾಡುವುದಾಗಿ ಕಸ್ತೂರಿ ಶ್ರೀನಿವಾಸ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಇದ್ದರು.