ಇತ್ತೀಚಿನ ಸುದ್ದಿರಾಜ್ಯ

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸುರಪುರ ತಾಲೂಕ ಅಧ್ಯಕ್ಷ: ನೀಲಮ್ಮ ಬಿ.ಮಲ್ಲೆ ನೇಮಕ.

ಯಾದಗಿರಿ: ನಗರದ ಗುರು ಕಾಂಪ್ಲೆಕ್ಸ್ ನಲ್ಲಿ ನಡೆದ ಜಿಲ್ಲಾ ಘಟಕ ವತಿಯಿಂದ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ ಮಟ್ಟದ ಕವಿಗೋಷ್ಠಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ, ಉಪನ್ಯಾಸ ಹಾಗೂ ತಾಲೂಕ ಪದಾಧಿಕಾರಿಗಳಿಗೆ ನೇಮಕ ಮಾಡುವ ಕಾರ್ಯಕ್ರಮದಲ್ಲಿ ಸುರಪುರ ತಾಲೂಕ ಅಧ್ಯಕ್ಷರಾಗಿ ನೀಲಮ್ಮ ಬಿ.ಮಲ್ಲೆ ರವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ನೀಡಿ ಗೌರವಿಸಲಾಯಿತು.

ಸುರಪೂರ ತಾಲೂಕ ಅಧ್ಯಕ್ಷರಾಗಿ ನೇಮಕಗೊಂಡ ಗಜಲ್ ಲೇಖಕಿ ಶ್ರೀಮತಿ ನೀಲಮ್ಮ ಬಿ.ಮಲ್ಲೆ ಮಾತನಾಡಿ ತಾಲೂಕಿನಲ್ಲಿ ಇರುವ ಎಲೆಮರಿ ಕಾಯಿಯಂತೆ
ಯುವ ಕವಿ ಕವಾಯತ್ರಿಯವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಹಲವು ಕಾರ್ಯಕ್ರಮಗಳು ಆಯೋಜನೆ ಮಾಡಿ ಹೊಸ ಹೊಸ ಯುವಕವಿಗಳಿಗೆ ಪ್ರೋತ್ಸಾಹ ನೀಡುವ ಮುಖಾಂತರ ಸಾಹಿತ್ಯ ಲೋಕಕ್ಕೆ ಮತ್ತಿಷ್ಟು ಬಲಪಡಿಸುವಂತಹ ಕಾರ್ಯ ಮಾಡುತ್ತೇನೆ ಹಾಗೂ
ಕವಿಗಳು ತಮ್ಮ ದೃಢ ಸಂಕಲ್ಪ ,ನಿಮ್ಮ ಬಲ, ನಿಮ್ಮ ಛಲ, ನಿಮ್ಮ ಶಕ್ತಿ, ನಿಮ್ಮ ಹೋರಾಟವೇ ನಿಮ್ಮನ್ನು ದೊಡ್ಡ ಮಟ್ಟದ ಬೆಳವಣಿಗೆಗೆ ಸಾಧ್ಯವಾಗುತ್ತದೆ, ನಿರಂತರ ಶ್ರಮದಿಂದ ಪಲಾ ಸಿಕ್ಕೇ ಸಿಗುವುದು ಅದು ನಿಮ್ಮ ಕಟ್ಟಿಟ್ಟ ಬುತ್ತಿಯಾಗಿದೆ, ಇನ್ನು ಕೆಲವೇ ದಿನಗಳಲ್ಲಿ ನಮ್ಮ ತಾಲೂಕಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಕರ್ನಾಟಕ ರಾಜ್ಯ ಬರಹಗಾರ ಸಂಘವು ಸಂಪೂರ್ಣವಾದ ಬೆಂಬಲವನ್ನು ನಮ್ಮ ತಾಲೂಕಿಗೆ ನೀಡಬೇಕು ಜೊತೆಗೆ ಕವಿಗಳ ಪುಸ್ತಕವನ್ನು ಪ್ರಕಟಿಸಲು ನಮ್ಮ ಸಂಘ ಮುಂದಾಗಬೇಕು ಇಂತಹ ಕಾರ್ಯಗಳಿಂದಲೇ ನಮ್ಮ ಬರಹಗಾರ ಸಂಘದ ಕೀರ್ತಿ ಗಗನಕ್ಕೆ ಏರಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಬರಹಗಾರ ಸಂಘದ ಸುರಪುರ ತಾಲೂಕಿನ ನೂತನ ಅಧ್ಯಕ್ಷ ಶ್ರೀಮತಿ ನೀಲಮ್ಮ ಬಿ.ಮಲ್ಲೆ ರವರು ನೇಮಕಗೊಂಡು ಆದೇಶ ಪತ್ರವನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವೇ.ಮೊ. ಮಲ್ಲಿಕಾರ್ಜುನ್ ಶಾಸ್ತ್ರಿಗಳು , ಕನ್ನಡ ಸಾಹಿತ್ಯ ಪರಿಷತ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಶಾಲಾ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಾಂತಗೌಡ, ಖ್ಯಾತ ಹಾಸ್ಯ ಕಲಾವಿದ ಬಸವರಾಜ್ ಮಾಹಮನಿ, ಗಮಕ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶ್ರೀನಿವಾಸ ಜಾಲವಾದಿ, ನಗರಸಭೆ ಮಾಜಿ ಅಧ್ಯಕ್ಷ ಶ್ರೀಮತಿ ನಾಗರತ್ನ ಅನಪುರ, ತಾಲೂಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೆಂಕಟೇಶ ಕಲಕಂಬ, ಯಾದಗಿರಿ ಟೈಮ್ಸ್ ಪತ್ರಿಕೆಯ ಸಂಪಾದಕ ವೈಜನಾ ಹಿರೇಮಠ, ಶಂಕರ್ ಸೋನಾರ್, ಕವಿಗೋಷ್ಠಿ ಅಧ್ಯಕ್ಷ ಅಮರ ಗುಂಡಪ್ಪ ಹೂಗಾರ, ಕೆಂಭಾವಿ ವಲಯ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್ ಹಾಗೂ ಕವಿಗಳು ಸಾಹಿತಿಗಳು ಹಿರಿಯ ಮುಖಂಡರು ಪಾಲ್ಗೊಂಡಿದ್ದಾರು.

Related Articles

Leave a Reply

Your email address will not be published. Required fields are marked *

Back to top button