ಆರೋಗ್ಯಇತ್ತೀಚಿನ ಸುದ್ದಿ

ಕರ್ನಾಟಕದ ಶೇ 54ರಷ್ಟು ಕುಟುಂಬಗಳ ಕನಿಷ್ಠ ಒಬ್ಬರಿಗಿದೆ ಕೋವಿಡ್ ಸೋಂಕು:

ಬೆಂಗಳೂರು, ಜನವರಿ 5: ಕರ್ನಾಟಕದಲ್ಲಿ ಕೊರೊನಾ ವೈರಸ್ಪ್ರ ಕರಣಗಳು ಹೆಚ್ಚುತ್ತಿದ್ದು, ರಾಜ್ಯದ ಶೇ 54ರಷ್ಟು ಕುಟುಂಬಗಳ ಕನಿಷ್ಠ ಒಬ್ಬರು ಕೋವಿಡ್​​ನಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ರಾಜ್ಯದ ಹೆಚ್ಚಿನ ಕುಟುಂಬಗಳಲ್ಲಿ ಒಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೋವಿಡ್ ಅಥವಾ ಇತರ ವೈರಲ್, ಜ್ವರದಂಥ ರೋಗಲಕ್ಷಣ ಹೊಂದಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ಸಮೀಕ್ಷೆ ತಿಳಿಸಿದೆ.

ಕೋವಿಡ್/ ಫ್ಲೂ /ವೈರಲ್ ಜ್ವರದ ಲಕ್ಷಣಗಳಾದ ಮೂಗು ಸ್ರವಿಸುವಿಕೆ, ಗಂಟಲು ನೋವು, ಕೆಮ್ಮು, ತಲೆನೋವು, ಕೀಲು ನೋವು, ದೇಹ ನೋವು, ಉಸಿರಾಟದ ಸಮಸ್ಯೆಗಳನ್ನು ಕುಟುಂಬದ ಸದಸ್ಯರು ಹೊಂದಿರುವುದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿರುವವರು ತಿಳಿಸಿದ್ದಾರೆ.

ಒಟ್ಟು 3,783 ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಶೇ 23 ರಷ್ಟು ಜನರು ಅವರ ಮನೆಯಲ್ಲಿ ‘ನಾಲ್ಕು ಮಂದಿ ಅಥವಾ ಹೆಚ್ಚಿನ ವ್ಯಕ್ತಿಗಳು’ ಒಂದು ಅಥವಾ ಹೆಚ್ಚಿನ ಕೋವಿಡ್ / ವೈರಲ್ ಜ್ವರ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಶೇ 23ರಷ್ಟು ಮಂದಿ ಎರಡು-ಮೂರು ಸದಸ್ಯರು ರೋಗ ಲಕ್ಷಣ ಹೊಂದಿರುವುದಾಗಿ ಉತ್ತರಿಸಿದ್ದಾರೆ. ಶೇ 8 ರಷ್ಟು ಮಂದಿ, ಒಬ್ಬ ವ್ಯಕ್ತಿ ರೋಗ ಲಕ್ಷಣ ಹೊಂದಿರುವ ಸುಳಿವು ನೀಡಿದ್ದಾರೆ ಮತ್ತು ಶೇ 46 ರಷ್ಟು ಜನರು ಕುಟುಂಬದಲ್ಲಿ ರೋಗ ಲಕ್ಷಣ ಹೊಂದಿರುವವರು ಯಾರೂ ಇಲ್ಲ ಎಂದು ಉತ್ತರಿಸಿದ್ದಾರೆ.

2023ರ ಆಗಸ್ಟ್‌ನಲ್ಲಿ ಕರ್ನಾಟಕದಲ್ಲಿ ಇದೇ ರೀತಿಯ ಸಮೀಕ್ಷೆಯನ್ನು ನಡೆಸಲಾಗಿತ್ತು. ಆಗ, ಶೇ 33 ಕುಟುಂಬಗಳ ಒಬ್ಬ ಅಥವಾ ಹೆಚ್ಚಿನ ವ್ಯಕ್ತಿಗಳು ಕೋವಿಡ್ ಅಥವಾ ವೈರಲ್ ರೋಗಲಕ್ಷಣಗ ಹೊಂದಿರುವುದು ಕಂಡುಬಂದಿತ್ತು.ಆದರೆ ಈ ಬಾರಿ ಪ್ರಮಾಣ ಶೇ 54 ರಷ್ಟಿದೆ.

Related Articles

Leave a Reply

Your email address will not be published. Required fields are marked *

Back to top button