ಕರ್ನಾಟಕ
ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟಕವು ಅತಿ ದೊಡ್ಡ ರಾಜ್ಯ ಹಾಗೂ ದೇಶದ ಆರನೇ ದೊಡ್ಡ ರಾಜ್ಯ. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು. ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. “ಕರ್ನಾಟಕ” ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು “ಕರು+ನಾಡು” ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ ಕಪ್ಪು ಮಣ್ಣಿನ ನಾಡು, “ಎತ್ತರದ ಪ್ರದೇಶ” ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.
ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ. ೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು.
- ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಮಾತ್ರ ೧.೩೦ ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಕಲಬುರಗಿ, ವಿಜಯಪುರ ಮತ್ತು ಬೆಳಗಾವಿ. ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ.
- ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳುವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ.ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು (ಹಿಂದಿ ಭಾಷೆಯಲ್ಲಿ ಬಿಟ್ಟು) ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.
ಚರಿತ್ರೆ
- ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ.
- ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ವಿಚಾರದಿಂದ ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರೀಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ. ಕ್ರಿ. ಪೂ. ೩೦೦ಕ್ಕಿಂತ ಮೊದಲು, ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯ ದ ಭಾಗವಾಗಿತ್ತು (ಚರ್ಚೆ).
- ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು. ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಈ ಸಾಮ್ರಾಜ್ಯಗಳ ಸ್ಥಾಪನೆಯು ಪ್ರದೇಶದ ಸ್ವತಂತ್ರ ರಾಜಕೀಯ ಅಸ್ತಿತ್ವದ ಪ್ರಾದುರ್ಭಾವಕ್ಕೆ ಕಾರಣವಾಯಿತು. ಕದಂಬ ಸಾಮ್ರಾಜ್ಯವು ಮಯೂರ ವರ್ಮನಿಂದ ಸ್ಥಾಪಿಸಲ್ಪಟ್ಟಿತು.
- ಅದರ ರಾಜಧಾನಿ ಬನವಾಸಿಯಾಗಿತ್ತು.ತಲಕಾಡು ಪಶ್ಚಿಮ ಗಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು. ಹಲ್ಮಿಡಿ ಶಾಸನವು ಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯವು ಇದಕ್ಕೆ ಸಾಕ್ಷಿಯಾಗಿವೆ.
- ಈ ಸಾಮ್ರಾಜ್ಯಗಳ ನಂತರ ದಖನ್ ಅನ್ನು ಬಹುಪಾಲು ಆಳುತ್ತಿರುವ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಟ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯ ದಾತರಾಗಿದ್ದರು. ಇದು ೧೨ನೆಯ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು. ಕ್ರಿ. ಶ. ೯೯೦-೧೨೧೦ವರೆಗೆ ಕರ್ನಾಟಕದ ಕೆಲವು ಪ್ರದೇಶಗಳು ಚೋಳ ಸಾಮ್ರಾಜ್ಯದ ಆಧೀನವಾಗಿತ್ತು.
- ಈ ಕಾಲದಲ್ಲಿ ಪಶ್ಚಿಮ ಚಾಲುಕ್ಯರು, ಚೋಳ ಹಾಗೂ ಪೂರ್ವ ಚಾಲುಕ್ಯರ ವಿರುದ್ಧ ನಿರಂತರ ಕಾಳಗದಲ್ಲಿರುತ್ತಿದ್ದರು. ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಹೊಯ್ಸಳರು ಕರ್ನಾಟಕದಲ್ಲಿ ಪ್ರಬಲರಾದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಚ್ರಾಯ ಸ್ಥಿತಿಯನ್ನು ತಲುಪಿದವು. ಇದು ವಿಶಿಷ್ಟ ಕನ್ನಡ ಕಾವ್ಯ ಶೈಲಿಗಳ ಉದಯಕ್ಕೆ ಕಾರಣವಾಯಿತು.ಹೊಯ್ಸಳರ ಕಾಲದಲ್ಲಿ ದೇಗುಲಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು.
- ಹೊಯ್ಸಳ ಸಾಮ್ರಾಜ್ಯವು ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತು. ೧೪ನೆಯ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆ ಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
- ವಿಜಯನಗರ ಸಾಮ್ರಾಜ್ಯವು ಶ್ರೀಕೃಷ್ಣದೇವರಾಯನ ಕಳಿಂಗ ಯುದ್ಧ ಸಾವಿರ 1512 ರಿಂದ 1518 :- ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ (ಒಡ್ರ ದೇಶದ Od ಒಡ್ ಸಮಾಜದವರು) ವಂಶಸ್ಥರಾದ ಗಜಪತಿ ಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶ ಸಂಪೂರ್ಣ ಒರಿಸ್ಸಾ ವನ್ನು ಒಳಗೊಂಡಿತ್ತು ಉಮ್ಮತ್ತೂರಿನ ಯಶಸ್ಸಿನಿಂದ ಉತ್ತೇಜಿತನಾದ ಶ್ರೀಕೃಷ್ಣದೇವರಾಯನ ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ ಗಜಪತಿ ಪ್ರತಾಪರುದ್ರ ದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದ ತನ್ನ ದೃಷ್ಟಿಯನ್ನು ತಿರುಗಿಸಿದನು ವಿಜಯನಗರ ಸೈನ್ಯ 1512 ರಲ್ಲಿ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕಿತು ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೆ ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ ಗಜಪತಿಯ ಸೈನ್ಯ ಹಸಿವಿನಿಂದ ಶೀತಲವಾಗ ತೊಡಗಿತು ಇದೇ ಸಮಯದಲ್ಲಿ ಶ್ರೀಕೃಷ್ಣದೇವರಾಯನ ಪತ್ನಿಯಾದ ತಿರುಮಲದೇವಿ ಮತ್ತು ಚಿನ್ನಮ್ಮ ದೇವಿ ಅವರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದರು ನಂತರ ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ ಗಜಪತಿ ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕುತ್ತಿದ್ದರು ಕೆಲವು ಮೊದಮೊದಲು ಸೋಲುಗಳ ನಂತರ ವಿಜಯನಗರ ಸೇನೆ ರಣರಂಗದಿಂದ ಇಂದಿಗೆಯಾಲಾರಂಭಿಸಿತು. ಅದೇ ಸಮಯದಲ್ಲಿ ತಿಮ್ಮರುಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯ ದಾರಿಯ ಮೂಲಕ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು ಆ ಕಾಲದ ಅತಿ ಸಮರ್ಥ ಕತ್ತಿವರಸೆ ಗಾರ ಎಂದು ಹೆಸರಾಗಿದ್ದ ಸೂರ್ಯವಂಶದ ಪ್ರತಾಪರುದ್ರದೇವ ನಮಗ ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು ಈ ವಿಜಯದ ನಂತರ ತಿಮ್ಮರುಸು ಕೊಂಡವೀಡು ಪ್ರಾಂತ್ಯದ ಮಾಂಡಳೀಕನಾಗಿ ನೇಮಕಗೊಂಡ ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಸೂರ್ಯವಂಶದ ಗಜಪತಿ ಸೇನೆಯನ್ನು ಮತ್ತೊಮ್ಮೆ ಮುಖದ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳ ಬೇಕೆಂದಿದ್ದ ಶ್ರೀ ಕೃಷ್ಣದೇವರಾಯನ ಗಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರದೇವ ನು ಶ್ರೀಕೃಷ್ಣದೇವರಾಯ ನನ್ನು ಅವನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸುವ ಪ್ರತಿ ಯೋಜನೆ ಹಾಕಿದರು ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗ ನಗರದಲ್ಲಿ ಸಂದೇಶಬೇಕಾಗಿತ್ತು ಆದರೆ ಈ ಮಾಹಿತಿಯನ್ನು ಚಾಣಾಕ್ಷ ತಿಮ್ಮರಸು ಪ್ರತಾಪರುದ್ರದೇವ ನತಿಸಿದ ತೆಲುಗು ಭಾಷೆ ಒಬ್ಬನಿಗೆ ಲಂಚ ಕೊಟ್ಟು ಸಂಪಾದಿಸಿದ್ದನ್ನು ಪ್ರತಾಪ ರುದ್ರನ ಯೋಜನೆ ನಡೆಯದೆ ಆತ ತನ್ನ ರಾಜಧಾನಿಯತ್ತ ಹಿಮ್ಮೆಟ್ಟಬೇಕಾಯಿತು ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆ ಮಾಡಿದ ಇದರ ನಂತರ ಭಾರತದ ಎರಡು ಪ್ರಬಲ ಸಾಮ್ರಾಜ್ಯಗಳ ನಡುವೆ ಶಾಂತಿ-ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತ ವಾಯಿತು. ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆ ಯಾಯಿತು. ೧೫೬೫ರಲ್ಲಿ, ತಾಳಿಕೋಟೆಯ ಯುದ್ಧದಲ್ಲಿ ದಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು. ಬಹಮನಿ ಸುಲ್ತಾನರ ಪತನಾನಂತರ ವಿಜಯಪುರದ ಸುಲ್ತಾನರು ಪ್ರಾಬಲ್ಯಕ್ಕೆ ಬಂದು, ದಖನ್ ಪ್ರದೇಶವನ್ನು ಆಳುತ್ತಿದ್ದರು.
- ೧೭ನೆಯ ಶತಮಾನದ ಕೊನೆಯಲ್ಲಿ ವಿಜಯಪುರದ ಸುಲ್ತಾನರು ಮೊಘಲ್ರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ವಿಜಯಪುರದ ಸುಲ್ತಾನರು ಉರ್ದು ಹಾಗೂ ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರಾಸೆನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು. ತದನಂತರದ ಅವಧಿಯಲ್ಲಿ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗೂ ಅನ್ಯ ರಾಜರು ಆಳುತ್ತಿದ್ದರು.
- ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಪ್ರದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು.
- ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು. ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು. ಬ್ರಿಟಿಷರು ಮೈಸೂರು ರಾಜ್ಯವನ್ನು ಒಡೆಯರ್ ಮನೆತನದವರಿಗೆ ಹಿಂದಿರುಗಿಸಿದರು ಹಾಗೂ ಬ್ರಿಟಿಷ್ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವ ಪ್ರದೇಶದ ಸ್ಥಾನಮಾನ ನೀಡಿತು.
- ಭಾರತಾದ್ಯಂತ ಬ್ರಿಟೀಷರ “ಡಾಕ್ಟ್ರೈನ್ ಆಫ್ ಲ್ಯಾಪ್ಸ್” ರಾಜನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ, ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ೧೮೩೦ರಲ್ಲಿ ಅಂದರೆ ೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ೩ ದಶಕಗಳ ಹಿಂದೆ ಬ್ರಿಟೀಷರ ವಿರುದ್ಧ ದಂಗೆಯೆದ್ದರು. ತದನಂತರ ಸೂಪ, ಬಾಗಲಕೋಟೆ, ಶೋರಾಪುರ, ನರಗುಂದ ಹಾಗು ದಾಂಡೇಲಿ ಹೀಗೆ ಹಲವೆಡೆಗಳಲ್ಲಿ ದಂಗೆಗಳು ನಡೆಯಿತು.
- ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ದಂಗೆಗಳನ್ನು ಮುಂಡರಗಿ ಭೀಮರಾವ್, ಭಾಸ್ಕರ ರಾವ್ ಭಾವೆ, ಹಳಗಳಿ ಬೇಡರು, ವೆಂಕಟಪ್ಪ ನಾಯಕ ಮುಂತಾದವರು ಮುನ್ನಡೆಸಿದರು. ೧೯ನೆಯ ಶತಮಾನದ ಅಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯು ತೀವ್ರವಾಯಿತು. ಕಾರ್ನಾಡ ಸದಾಶಿವರಾವ್, ಆಲೂರು ವೆಂಕಟರಾಯರು, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ನಿಟ್ಟೂರು ಶ್ರೀನಿವಾಸರಾವ್ ಮುಂತಾದವರು ೨೦ನೆಯ ಶತಮಾನದ ಪೂರ್ವಾರ್ಧದವರೆಗೂ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿಕೊಂಡು ಬಂದರು.