ಈ ಬಾರಿ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಇಲ್ಲ

ಕಳೆದ ಸಾಲಿನ SSLC ಫಲಿತಾಂಶ ಕುಸಿದ ಬೆನ್ನಲ್ಲೇ ಸಾಕಷ್ಟು ಟೀಕೆಗೆ ಶಿಕ್ಷಣ ಇಲಾಖೆ ಗುರಿಯಾಗಿತ್ತು. ವೆಬ್ ಕಾಸ್ಟಿಂಗ್ ಇತರ ಕಠಿಣ ನಿಯಮದ ಎಫೆಕ್ಟ್ ಫಲಿತಾಂಶ ಕುಸಿತ ಆಯ್ತು ಎನ್ನುವ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಈ ವರ್ಷದ ಪ್ರಸಕ್ತ ಸಾಲಿನ ರಾಜ್ಯ ಪಠ್ಯಕ್ರಮ ಅನುಸರಿಸುವ ವಿದ್ಯಾರ್ಥಿಗಳ SSLC ಫಲಿತಾಂಶ ಹೆಚ್ಚು ಮಾಡಲು ಶಿಕ್ಷಣ ಇಲಾಖೆ ನಾನಾ ಸರ್ಕಸ್ ಮಾಡುತ್ತಿದೆ . ಅದರ ಭಾಗವಾಗಿ ಇಂದು ಶಿಕ್ಷಣ ಸಚಿವರು ವಾರ್ಷಿಕ ಪರೀಕ್ಷೆ ತಯಾರಿ ಎಂದು ವಿದ್ಯಾರ್ಥಿಗಳು ಹಾಗೂ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಹಲವಾರು ವಿಚಾರಗಳ ಬಗ್ಗೆ ಹೇಳಿದ್ದಾರೆ. ಇನ್ನು ಈ ವರ್ಷ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ಇಲ್ಲ ಎಂದಿದ್ದಾರೆ.ಎಸ್ಎಸ್ಎಲ್ಸಿ ( SSLC) ಮುಖ್ಯ ಪರೀಕ್ಷೆಗೆ ಮತಷ್ಟು ಕಠಿಣ ರೂಲ್ಸ್ ಗೆ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ವೆಬ್ ಕಾಸ್ಟಿಂಗ್ ಹಾಗೂ ಸಿಸಿಟಿವಿ ಮತಷ್ಟು ಕಠಿಣ ಪ್ರಯೋಗಕ್ಕೆ ಇಲಾಖೆ ಮುಂದಾಗಿದೆ. ಹೌದು 2024-25 ನೇ ಸಾಲಿನ SSLC ಪರೀಕ್ಷೆಗೆ ಕೌಂಟ್ ಡೌನ್ ಶುರುವಾಗಿದೆ. ಈ ಹಿನ್ನಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು (ಫೆಬ್ರವರಿ 03) ಬನಶಂಕರಿಯ ಡಿಸಿಇಆರ್ ಟಿಯಲ್ಲಿ ಮಕ್ಕಳ ಜೊತೆ ಹಾಗೂ ಶಿಕ್ಷಕರು ಜೊತೆ ಸಂವಾದ ನಡೆಸಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಬಳಿಕ ಸುದ್ಧಿಗೋಷ್ಠಿ ನಡೆಸಿ ಈ ವರ್ಷದ ಪರೀಕ್ಷೆಗಳ ಕುರಿತು ಕೆಲವು ಟಫ್ಸ್ ರೂಲ್ಸ್ ಬಗ್ಗೆ ಕೂಡಾ ಮಾಹಿತಿ ಹಂಚಿಕೊಂಡರು.ಕಳೆದ ವರ್ಷ SSLC ಎಕ್ಸಾಂನಲ್ಲಿ ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ಕೊಟ್ಟು ವಿವಾದಕ್ಕೀಡಾಗಿದ್ದ ಶಿಕ್ಷಣ ಇಲಾಖೆ, ಈ ವರ್ಷ ಮಾರ್ಕ್ಸ್ ರದ್ದು ಮಾಡಿದೆ. ಗ್ರೇಸ್ ಮಾರ್ಕ್ಸ್ ಕೊಡುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಕಳೆದ ವರ್ಷ ವೆಬ್‌ಕಾಸ್ಟ್ ಮಾಡುವುದರಿಂದ ಕಡಿಮೆ ಫಲಿತಾಂಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಫಲಿತಾಂಶ ವೃದ್ಧಿಗೆ ಏನು ಮಾಡಬೇಕು ಅಂತ ಇಂದು ಚರ್ಚೆ ಮಾಡಿದ್ವಿ. ಈ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡಿದೆ. ಪ್ರತಿ ಜಿಲ್ಲೆಯ ಸಿಇಒಗಳು ಈ ಬಾರಿ ನಮಗೆ ಹೆಚ್ಚು ಸಹಕಾರ ಕೊಟ್ಟಿದ್ದಾರೆ. ಮಕ್ಕಳಿಗೆ ಪರೀಕ್ಷಾ ಸಿದ್ಧತೆಗೆ ನಾವು ಮಾರ್ಗೋಪಾಯಗಳನ್ನ ಸಿದ್ಧ ಮಾಡಿದ್ದೇವೆ ಎಂದರು. ಸ್ಪಷ್ಟಪಡಿಸಿದರು.