ಆರೋಗ್ಯಇತ್ತೀಚಿನ ಸುದ್ದಿರಾಜ್ಯ

ಆರೋಗ್ಯ ಪೂರ್ಣ ಸಮಾಜದಿಂದ ದೇಶದ ಅಭಿವೃದ್ಧಿ-ಡಾ. ಪ್ರಭುಗೌಡ ಲಿಂಗದಳ್ಳಿ

ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟಿ: ಸಮೀಪದ ಗುಂಡಕನಾಳ ಗ್ರಾಮದಲ್ಲಿ ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಒತ್ತಡದ ಬದುಕನ್ನು ನಡೆಸುತ್ತಿದ್ದಾನೆ ಇದರಿಂದ ಅವನಿಗೆ ನೆಮ್ಮದಿ ಇಲ್ಲದಾಗಿದೆ ನೆಮ್ಮದಿ ಬದುಕನ್ನು ಪಡೆಯಲು ಆಧ್ಯಾತ್ಮಿಕ ಚಿಂತನೆ ಅಗತ್ಯವಾಗಿದೆ ಆರೋಗ್ಯಪೂರ್ಣ ಸಮಾಜದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನಾಡಿನ ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರು ಹೇಳಿದರು. ತಾಲೂಕಿನ ಗುಂಡಕನಾಳ ಗ್ರಾಮದ ಬ್ರಹನ್ ಮಠದಲ್ಲಿ ಲಿಂಗೈಕ್ಕೆ ಪೂಜ್ಯರ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 18 ನೇ ವರ್ಷದ ಪಟ್ಟಾಧಿಕಾರ ವಾರ್ಷಿಕೋತ್ಸವ ಹಾಗೂ ಗುರು ವಂದನಾ ಸಮಾರಂಭದ ಅಂಗವಾಗಿ ಹಮ್ಮಿಕೊಂಡ ಪುರಾಣ ಪ್ರವಚನ ಮಹಾಮಂಗಲ ಹಾಗೂ ಧರ್ಮಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ನಮ್ಮ ಇಂದಿನ ಅಶಾಂತಿ ಪೂರ್ಣ ಬದುಕಿಗೆ ಕಾರಣಗಳು ಹಲವಾರು ಇವೆ ಇದರಲ್ಲಿ ಪ್ರಮುಖವಾಗಿ ನಮ್ಮಲ್ಲಿರುವ ಅತಿಯಾದ ಆಸೆ ಹಾಗೂ ನಿರೀಕ್ಷೆಗಳಾಗಿವೆ ಇವುಗಳ ಮೇಲೆ ನಿಯಂತ್ರಣ ಸಾಧಿಸಬೇಕಾದರೆ ನಾವು ಆಧ್ಯಾತ್ಮಿಕ ಒಲವು ಗಳಿಸಿಕೊಳ್ಳಬೇಕು ಎಂದರು. ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ ನಾಡಿನಲ್ಲಿರುವ ಮಠಮಾನ್ಯರು ನಮ್ಮನ್ನು ತಿದ್ದಿ ಸಂಸ್ಕರಿಸಿ ಒಳ್ಳೆಯ ವ್ಯಕ್ತಿಗಳನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವುದರಲ್ಲಿಯೇ ನಮ್ಮ ಜೀವನದ ಸಾರ್ಥಕತೆ ಇದೆ ಎಂದರು. ಸಮಾರಂಭದ ಸಮ್ಮುಖ ವಹಿಸಿ ಖಾಸ್ಗತೇಶ್ವರ ಮಠದ ಬಾಲಶಿಯೋಗಿ ಶ್ರೀ ಸಿಧ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ ಇಹಲೋಕದ ಬದುಕು ಕ್ಷಣಿಕವಾದದ್ದು ನಾವೆಲ್ಲರೂ ಒಂದು ದಿನ ಈ ಜಗತ್ತನ್ನು ತ್ವರೆಯಬೇಕಾಗಿದೆ ಭೂಮಿಯ ಮೇಲೆ ಇದ್ದಷ್ಟು ದಿವಸ ಒಳ್ಳೆಯ ಮನುಷ್ಯರಾಗಿ ಬಾಳಬೇಕಾಗಿದೆ. ಪೂಜ್ಯ ಗುರುಲಿಂಗ ಮಹಾಸ್ವಾಮಿಗಳು ನಿಮ್ಮನ್ನು ಸಂಸ್ಕರಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ ಅವರಿಗೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು. ಶಿವಯ್ಯ ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರಾದ ತಾಳಿಕೋಟಿ ವಿವಿ ಸಂಘದ ಅಧ್ಯಕ್ಷ ವಿ. ಸಿ. ಹಿರೇಮಠ. ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಮಹಾಂತೇಶ ಮುರಾಳ. ಮೌರ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವಮ್ಮ ಬಿರಾದಾರ ಇವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು. ಜಾಲಹಳ್ಳಿ ಬ್ರಹನ್ ಮಠದ ವಿದ್ಯಮಾನ್ಯ ಶಿವಾಭಿನವ ಜಯಶಾಂತ ಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪಾವನ ಸಾನಿಧ್ಯ ವಹಿಸಿದ್ದರು. ಹಿರೂರ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯಶ್ರೀ ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮ್ಮುಖವನ್ನು ಗುಂಡಕನಾಳದ ಪೂಜ್ಯಶ್ರೀ ಗುರುಲಿಂಗ ಮಹಾಸ್ವಾಮಿಗಳು.ಶ್ರೀ ಸಿದ್ದ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು. ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು. ಶ್ರೀ ಕುಮಾರ ದೇವರು. ಶ್ರೀ ಅಡಿವಿ ಲಿಂಗ ಮಹಾರಾಜರು. ಶ್ರೀ ನೀಲಕಂಠ ಸ್ವಾಮಿಗಳು ವಹಿಸಿದ್ದರು. ವೇದಿಕೆಯಲ್ಲಿ ಮಡು ಸಾಹುಕಾರ ಬಿರಾದಾರ. ಗುಡೂರ ಎಸ್.ಎ. ಸಿದ್ದರಾಮರೆಡ್ಡಿ ಗದ್ದಗಿ. ಸಿದ್ದನಗೌಡ ಬಿರಾದಾರ. ಶಿವನಗೌಡ ಮಾಲಿ ಪಾಟೀಲ. ಪ್ರವಚನಕಾರ ಶ್ರೀ ಶರಣಬಸವ ಶಾಸ್ತ್ರಿಗಳು. ಬಸಯ್ಯ ಸೋಮಶೇಖರ್ ಮಠ. ದೊಡ್ಡ ಬಸ್ಯ ಶಾಸ್ತ್ರಿಗಳು. ಪ್ರಭಯ್ಯ ಆಲಾಳ ಮಠ. ಬಸಯ್ಯ ಶಾಸ್ತ್ರಿಗಳು. ರಾಜಕೀಯ ದುರೀಣರು ಹಾಗೂ ಗಣ್ಯಮಾನ್ಯರು ಇದ್ದರು. ಕೆಂಭಾವಿಯ ವೀರೇಶ ಗವಾಯಿಗಳು ಅಶೋಕ ಕೆಂಭಾವಿ ಬಸವರಾಜ ಯಳಸಂಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Related Articles

Leave a Reply

Your email address will not be published. Required fields are marked *

Back to top button