ಆಯುಧ ಪೂಜೆ ಸಂಭ್ರಮ ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚಿದ ಗುಂಡ್ಲುಪೇಟೆಪೊಲೀಸರು.

ಗುಂಡ್ಲುಪೇಟೆ:
ವರ್ಷಪೂರ್ತಿ ಖಾಕಿ ಧರಿಸಿ ಖದರ್ ತೋರುತ್ತಿದ್ದ ಪೊಲೀಸರು ಆಯಧ ಪೂಜೆ ಪ್ರಯುಕ್ತ ಸಾಂಪ್ರದಾಯಿಕ ದಿರಿಸಾದ ಪಂಚೆ, ಶರ್ಟ್, ಶಲ್ಯ ಹೊದ್ದು ಮಿಂಚಿದರು. ಮಹಿಳಾ ಸಿಬ್ಬಂಧಿಗಳು ಸೀರೆ ಉಟ್ಟು ಜಿಲ ಗುಂಡ್ಲುಪೇಟೆ ಠಾಣೆ ಪೊಲೀಸರು ಸಂಭ್ರಮಿಸಿದರು.
ಭಾರತದಲ್ಲಿ ಪ್ರಮುಖ ಆಚರಣೆಯಾದ ಆಯುಧ ಪೂಜೆಯನ್ನು ಶ್ರದ್ಧಾ ಭಕ್ತಿ
ಯಿಂದ ಆಚರಿಸಲಾಯಿತು.
ಠಾಣೆಗಳ ಎಲ್ಲಾ ಪೊಲೀಸ್ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಪೊಲೀಸರು ದೇವರಿಗೆ ನಮಿಸಿ, ಸಿಹಿ ಹಂಚಿದರು.
ಆಯುಧ ಪೂಜೆ ಹಿನ್ನೆಲೆ ಗುಂಡ್ಲುಪೇಟೆ ಠಾಣೆಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದು ಗಮನ ಸೆಳೆಯಿತು
ಪ್ರತಿತ್ಯ ಖಾಕಿ ತೊಟ್ಟು ಕರ್ತವ್ಯ ನಿರ್ವಹಿಸುತ್ತಿದ್ದ ಪುರುಷ ಪೋಲೀಸರು ಹಾಗೂ ಮಾಹಿಳಾ ಪೋಲೀಸರು ಆಯುಧಪೂಜೆ ಹಬ್ಬದಂದು ಸಾಮೂಹಿಕವಾಗಿ ಪಂಚೆ ಶಲ್ಯ ಹಾಗೂ ಸೀರೆಯುಟ್ಟು ಮನೆ ಮಕ್ಕಳಂತೆ ಸಂಭ್ರಮಿಸಿದರು.
ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೋಲೀಸರು ನವರಾತ್ರಿ ಸಂಭ್ರಮದಲ್ಲಿ ಮಿಂದೆದ್ದರು. ಠಾಣೆಯ ಎಲ್ಲಾ ಸಿಬ್ಬಂಧಿಗಳು ಹೊಸ ಬಟ್ಟೆ ತೊಟ್ಟು ಪರಸ್ಪರ ನವರಾತ್ರಿ ದಸರಾ ಹಬ್ಬದಲ್ಲಿ ಸಿಹಿಸಂಚಿ ಶುಭಾಶಯಗಳನ್ನು ಕೋರುತ್ತಾ ಪರಸ್ಪರರು ಸಂತಸ ಪಟ್ಟರು.
ಖಾಕಿಯಿಂದ ಒಂದು ದಿನ ಹೊರಬಂದು ಮನೆಮಕ್ಕಳಂತೆ ಒಂದೆ ತರನಾದ ಹೊಸ ಉಡುಗೆ ತೊಟ್ಟು ಮಿಂಚಿದ ಪೋಲೀಸರು ಸೆಲ್ಪಿ ಪೋಟೋಗಳನ್ನು ತೆಗೆದುಕೊಂಡು ಸ್ಟೇಟಸ್ ಹಾಗೂ ಫೇಸ್ ಬುಕ್ ಗಳಿಗೆ ಹಂಚಿಕೊಂಡು ಸ್ನೇಹಿತರೊಂದಿಗೆ ಆನಂದಿಸಿದರು.
ಒಟ್ಟಾರೆ ಚಾಮರಾಜನಗರ ಜಿಲ್ಲೆಯ ಹಲವು ಪೋಲೀಸ್ ಠಾಣೆಗಳು ದಸರಾ ನವರಾತ್ರಿಯ ಆಯುದಪೂಜೆಯಂದು ಮದುವೆ ಮಕ್ಕಳಂತೆ ವೈಭವಿಸಿ ಮಿಂಚಿದ್ದು ಸಾರ್ವಜನಿಕರನ್ನು ಆಕರ್ಷಿಸಿದರು.