ಅಧ್ಯಕ್ಷ ಸ್ಥಾನವನ್ನು ಗಳಿಸಲು ಸದಸ್ಯರು ಕೈ ಕೈ ಮಿಲಾಯಿಸಿರುವ ಘಟನೆ ಮಾಸ್ತಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ

ಮಾಲೂರು:
ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಅಧಿಕಾರದ ಆಸೆಗಾಗಿ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಬೆಂಬಲಿಗರು ಕೈ ಕೈ ಮಿಲಾಯಿಸಿದ ಘಟನೆ ನಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾದರು.
ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ಮಾಸ್ತಿ ಗ್ರಾಮದ, ಗ್ರಾಮ ಪಂಚಾಯತಿ ಈ ಹಿಂದೆ ಇದ್ದ ಅಧ್ಯಕ್ಷೆ ಲಕ್ಷ್ಮಮ್ಮ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿದ್ದು, ಅಧ್ಯಕ್ಷ ಸ್ಥಾನವನ್ನು ಗಳಿಸಲು ಸದಸ್ಯರು ಕೈ ಕೈ ಮಿಲಾಯಿಸಿಕೊಂಡಿರುವ ಘಟನೆ ನಡೆದಿದೆ.
ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಯಾವ ಸದಸ್ಯರು ನಾಮಪತ್ರ ಸಲ್ಲಿಸಬೇಕೆಂಬ ಆಯ್ಕೆ ಸಭೆಯನ್ನು ಶಾಸಕ ಕೆ.ವೈ.ನಂಜೇಗೌಡರ ನೇತೃತ್ವದ ಸಭೆಯಲ್ಲಿ ಮೊದಲ ಅವಧಿಗೆ ಮಂಜುಳಾ ರವರನ್ನು ಶಾಸಕರು ಸೂಚಿಸಿದರು. ರಾಜಮ್ಮ ಮುನಿಯಪ್ಪ ಬೆಂಬಲಿಗರು ಮೊದಲು ಅವಧಿ ಅಧ್ಯಕ್ಷ ಸ್ಥಾನವನ್ನು ನಮಗೆ ನೀಡಬೇಕು ಎಂದು ಪಟ್ಟು ಹಿಡಿದರು. ಸಭೆಯಲ್ಲಿ ಇಬ್ಬರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಕೈ ಕೈ ಮಿಲಾಯಿಸಿಕೊಂಡಿರುವ ಘಟನೆ ನಡೆದಿದ್ದು, ನಂತರ ಒಬ್ಬರೆ ನಾಮಪತ್ರ ಸಲ್ಲಿಸಿದ ಮಂಜುಳಾ ರವರು ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರೆ ಇನ್ನೊಬ್ಬ ಸದಸ್ಯರು ಬೇಸರ ವ್ಯಕ್ತಪಡಿಸಿದರು.