ಇತ್ತೀಚಿನ ಸುದ್ದಿರಾಜ್ಯ

ಅದ್ದೂರಿಯಾಗಿ ಸಂವಿಧಾನ ಜಾಥಾ ರಥವನ್ನು ಸ್ವಾಗತಿಸಿದ ಮಡಿವಾಳ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ

ಮಡಿವಾಳ:- ಮಾಲೂರು ತಾಲೂಕಿನಲ್ಲಿಯೇ ಪ್ರಥಮವಾಗಿ ತೊರ‍್ನಹಳ್ಳಿ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಥಾ ರಥಕ್ಕೆ ಮಡಿವಾಳ ಗ್ರಾಮ ಪಂಚಾಯಿತಿಯಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎನ್. ದೀಪ ರವರು ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಜಾಗೃತಿ ಜಾಥ ನಡೆಯುತ್ತಿದೆ ಎಂದರು.ಸಂವಿಧಾನ ನೀಡಿರುವ ಹಕ್ಕುಗಳ ಕುರಿತಂತೆ ರಾಜ್ಯದ ನಾಗರಿಕರು, ಮಹಿಳೆಯರು, ಯುವಜನರಿಗೆ ತಿಳಿಸುವ ಉದ್ದೇಶವು ಸಹ ಹೌದು ಎಂದರು.

ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಗ್ರಾಮದಲ್ಲಿ ಸ್ವಾಗತ ಕೋರಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಊರಿನಲ್ಲಿ ಮೆರವಣಿಗೆ ಮಾಡಿ, ಮಡಿವಾಳ ಪಂಚಾಯತಿ ನಂತರ ಮಾಲೂರು ಪಟ್ಟಣಕ್ಕೆ ತೆರಳಿತು.

ಈ ಸಂದರ್ಭದಲ್ಲಿ ಪಿಡಿಒ ಎನ್. ದೀಪ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪದ್ಮ ಸುರೇಶ್, ಸದಸ್ಯರಾದ ಸಿ.ಎಂ.ವೆಂಕಟೇಶ್, ನಾಗೇಂದ್ರ ಗೌಡ, ದಯಾನಂದ, ಎಲ್.ಆನಂದ ರೆಡ್ಡಿ, ಪದ್ಮ ಶ್ರೀರಾಮ್, ಬಿಲ್ ಕಲೆಕ್ಟರ್ ಲೋಕೇಶ್, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಾಲಾ ಶಿಕ್ಷಕರು ಹಾಗೂ ಸಾರ್ವಜನಿಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button