ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯಾದಗಿರಿ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರ ಪದಾಧಿಕಾರಿಗಳು ಆಯ್ಕೆ
ಯಾದಗಿರಿ: ಅಖಿಲ ಭಾರತ ವೀರಶೈವ ಮಹಾಸಭಾ ಯಾದಗಿರಿ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಆಯ್ಕೆ ಮಾಡಲಾಯಿತು. ಸಾಮಾಜಿಕ ಆರ್ಥಿಕ ಗಣತಿ ಸಂದರ್ಭದಲ್ಲಿ
ಜಾತಿಯನ್ನು ಹಿಡಿದುಕೊಂಡು ಧರ್ಮವನ್ನು ನಿರ್ಲಕ್ಷಿಸಿದ
ಕಾರಣ ವೀರಶೈವ ಲಿಂಗಾಯತ ಧರ್ಮದ ಸಂಖ್ಯೆ ತೀರ ಕಮ್ಮಿಯಾಗಿದೆ. ಇದು ಹಿಗೆ ಮುಂದುವರೆದರೆ ಬಲ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಕಳವಳ ವ್ಯಕ್ತಪಡಿಸಿದರು.ನಗರದ ಹೊರಭಾಗದ ಸಪ್ತಪದಿ ಕನ್ವೆನ್ಷನ್ ಹಾಲ್ ನಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮವನ್ನು ಹಿಡಿದುಕೊಂಡು
ಹೋದರೆ ಒಗ್ಗಟ್ಟು ಉಳಿಯುತ್ತದೆ ಬಲ ಬರುತ್ತದೆ.
ಆದರೆ ವೀರಶೈವ ಧರ್ಮದಲ್ಲಿನ ಎಲ್ಲ ಪಂಗಡದವರು
ತಮ್ಮ ಜಾತಿಯನ್ನು ಮುಖ್ಯವಾಗಿಟ್ಟುಕೊಂಡು ಗಣತಿ ವೇಳೆ ಬರೆಸಿದ ಪರಿಣಾಮ ವೀರಶೈವ ಧರ್ಮದವರ ಜನಸಂಖ್ಯೆ ಸಹಜವಾಗಿಯೇ ಕಡಿಮೆ ತೋರಿಸುತ್ತಿದೆ
ಎಂದು ನುಡಿದರು.
ಜಿಲ್ಲಾ ಕೇಂದ್ರಕ್ಕೆ 2ಎಕರೆ ಜಾಗ ಮಂಜೂರು ಮಾಡಲು ಕ್ರಮ ಕೈಗೊಳ್ಳುವೆ, ಸಂಪುಟದಿಂದ ಅನುಮೋದನೆ ಕೊಡಿಸುವೆ ಸಮಾಜದ ಏಳ್ಗೆಗೆ ಬೆನ್ನೆಲುಬಾಗಿರುತ್ತೆನೆ,
ಹಾಸ್ಟಲ್ ಕಟ್ಟಡ ಕ್ಕೆ ಕ್ರಮ ಕೈಗೊಳ್ಳಲಾಗುವುದು,ರಾಚೊಟಿ
ವೀರಣ್ಣ ಒತ್ತುವರಿ ತರವುಗೆ ಕ್ರಮ ಕೈಗೊಳ್ಳಲಾಗುವುದು
ಎಂದು ಸಹ ಭರವಸೆ ನೀಡಿದರು.
ಈ ವೇಳೆ ಶಾಸಕ ಶರಣಗೌಡ ಕಂದಕೂರು ಅವರು ಮಾತನಾಡಿ, ಈ ದೇಶಕ್ಕೆ ವಿಶ್ವಗುರು ಬಸವಣ್ಣನವರು ಅನುಭವ ಮಂಟಪ ಮೂಲಕ
ಸಂಸತ್ ಕೊಡುಗೆ ನೀಡಿದ್ದಾರೆ.ವೀರಶೈವ ಲಿಂಗಾಯತ ಸಮಾಜವು ಎಲ್ಲಾ ಸಮಾಜದವರನ್ನು ಪ್ರೀತಿಸಿ ಎಲ್ಲರೂ ಸಹೋದರಂತೆ ಕಾಣುವ ಸಮಾಜವಾಗಿದೆ ಎಂದರು.ಶಾಸಕ ಶರಣಗೌಡ ಕಂದಕೂರು ಮಾತನಾಡಿ ಕೆಳಕ್ಕೆ
ಬಿದ್ದವರನ್ನು ಎತ್ತುವುದೆ ವೀರಶೈವ ಧರ್ಮವಾಗಿದೆ
ಎಂದಿಗೂ ತುಳಿತಕ್ಕೊಳಗಾದವರನ್ನು ಮೇಲೆತ್ತಿದ ಧರ್ಮ, ಜಗತ್ತಿಗೆ ಅನುಭವ ಮಂಟಪದ ಮೂಲಕ ಪಾರ್ಲಿಮೆಂಟ್ ಕೊಟ್ಟ ಧರ್ಮದ ವಾರಸುದಾರರು ನಾವು ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ವೇದಿಕೆ ಮೇಲೆ ಅಬ್ಬೆತುಮಕೂರು ಮಠದ ಪೀಠಾಧಿಪತಿ ಷ.,ಬ್ರ. ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಗುರುಮಠಕಲ್ ಖಾಸಾಮಠದ ಶ್ರೀಗಳು, ಹೆಡಗಿಮುದ್ರಾ ಶ್ರೀಗಳು ಶಾಸಕ ಶರಣಗೌಡ ಕಂದಕೂರು, ವೀರಶೈವ
ಮಹಾಸಭಾ ರಾಜ್ಯಾದ್ಯಕ್ಷ ಶಂಕರ ಮಹಾದೇವ ಬಿದರಿ
ಜಿಲ್ಲಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ ತಾಲ್ಲೂಕು ಅಧ್ಯಕ್ಷ ರಾಜೂಗೌಡ ಚಾಮನಳ್ಳಿ ಸೇರಿದಂತೆ ಅನೇಕರಿದ್ದರು.